ತಿರುವನಂತಪುರಂ: ಆನ್‍ಲೈನ್‍ನಲ್ಲಿ ಅಪ್ರಾಪ್ತ ಶಾಲಾ ಬಾಲಕಿಗೆ ಲೈಂಗಿಕ ಕಿರುಕುಳ ನೀಡುತ್ತಾ ಬೆದರಿಕೆ ಹಾಕುತ್ತಿದ್ದ 23 ವರ್ಷದ ಯುವಕನನ್ನು ಕೇರಳ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಬಿನು ಎಂದು ಗುರುತಿಸಲಾಗಿದ್ದು, ಈತ ದಿನಗೂಲಿ ಕೆಲಸ ಮಾಡುತ್ತಿದ್ದನು. ಸಾಮಾಜಿಕ ಜಾಲತಾಣದ ಮೂಲಕ ಬಾಲಕಿಯೊಂದಿಗೆ ಸ್ನೇಹ ಬೆಳಸಿ ಫೋಟೋ ಕಳುಹಿಸುವಂತೆ ಕೇಳಿಕೊಳ್ಳುತ್ತಿದ್ದ. ನಂತರ ಆ ಫೋಟೋಗಳನ್ನು ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಕೆಯೊಡ್ಡುತ್ತಿದ್ದನು. ಒಂದು ವೇಳೆ ಬಾಲಕಿ ನಗ್ನ ಚಿತ್ರಗಳನ್ನು ಕಳುಹಿಸದಿದ್ದಲ್ಲಿ ಆಕೆಯ ಮಾರ್ಫ್ ಮಾಡಿದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡುವುದಾಗಿ ಹೇಳುತ್ತಿದ್ದ. ಇದನ್ನೂ ಓದಿ: ತಹಶೀಲ್ದಾರ್ ಮೇಲೆ ಪೆಟ್ರೋಲ್ ಎರಚಿ ಜೀವ ಬೆದರಿಕೆ ಹಾಕಿದ ಮಾಜಿ ಬಿಜೆವೈಎಂ ನಾಯಕ
ನಂತರ ಬಾಲಕಿ ಈ ವಿಚಾರವನ್ನು ತನ್ನ ಮನೆಯವರ ಬಳಿ ಹೇಳಿಕೊಂಡಿದ್ದು, ಆಕೆಯ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬಾಲಕಿ ಬಳಿ ಆರೋಪಿಯ ಫೇಸ್‍ಬುಕ್ ಐಡಿ ಇದ್ದಿದ್ದರಿಂದ ಐಡಿಗೆ ಲಿಂಕ್ ಮಾಡಲಾದ ಫೋನ್ ನಂಬರನ್ನು ಪೊಲೀಸರು ಪಡೆದು, ನಂಬರ್ ಅನ್ನು ಪರಿಶೀಲಿಸಿದಾಗಿ ಸಿಮ್ ಕಾರ್ಡ್ ಮಹಿಳೆಯ ಹೆಸರಿನಲ್ಲಿತ್ತು. ಅದು ಆರೋಪಿಯ ತಾಯಿಯ ಹೆಸರಿನಲ್ಲಿದೆ ಎಂಬ ಸತ್ಯ ಪೊಲೀಸರಿಗೆ ತಿಳಿದು ಬಂದಿದೆ.
ಮೂರು ತಿಂಗಳ ತನಿಖೆಯ ನಂತರ ಕೊಲ್ಲಂ ಗ್ರಾಮಾಂತರ ಸೈಬರ್ ಕ್ರೈಂ ಪೊಲೀಸರ ತಂಡ ವರ್ಕಳದಿಂದ ಬಿನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇದನ್ನೂ ಓದಿ: ಗುರಾಯಿಸಿಕೊಂಡು ನೋಡದಂತೆ ವಾರ್ನ್ ಮಾಡಿದ್ದಕ್ಕೆ ಮಹಿಳೆ ಮೇಲೆ ಹಲ್ಲೆ
Girls, accused, police, online blackmail, Kerala