ಚಲಿಸುತ್ತಿದ್ದ ಬಸ್ಸಿನಿಂದ ಬೀಳ್ತಿದ್ದ ಯುವಕನನ್ನ ಒಂದೇ ಕೈಯಲ್ಲಿ ರಕ್ಷಿಸಿದ ಕಂಡಕ್ಟರ್!

By
1 Min Read

– ದೇಸಿ ಸ್ಪೈಡರ್‌ಮ್ಯಾನ್‌ ಅಂದ್ರು ಜನ

ತಿರುವನಂತಪುರಂ: ವೇಗವಾಗಿ ಚಲಿಸುತ್ತಿದ್ದ ಬಸ್ಸಿನಿಂದ ಹೊರಗೆ ಎಸೆಯಲ್ಪಡುತ್ತಿದ್ದ ಯುವಕನನ್ನು ರಕ್ಷಿಸುವ ಮೂಲಕ ಕೇರಳದ ಕಂಡಕ್ಟರ್‌ ಸಮಯಪ್ರಜ್ಞೆ ಮೆರೆದ ಘಟನೆ ನಡೆದಿದೆ.

ನಿರ್ವಾಹಕ ಯುವಕನನ್ನು ರಕ್ಷಿಸಿದ ವೀಡಿಯೋ ಬಸ್ಸಿನಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ಇದೀಗ ಕಂಡಕ್ಟರ್ ಕೆಲಸವನ್ನು ದೇಸಿ ಸ್ಪೈಡರ್‌ ಮ್ಯಾನ್‌ ಎಂದು ಹೇಳುವ ಮೂಲಕ ಸಾಮಾಜಿಕ ಜಾಲತಾಣಿಗರು ಕೊಂಡಾಡುತ್ತಿದ್ದಾರೆ.

ವೀಡಿಯೋದಲ್ಲಿ ಏನಿದೆ..?: ಬಸ್ಸಿನಲ್ಲಿ ಕಂಡಕ್ಟರ್‌ ಸಹಿತ ಮೂವರು ನಿಂತಿದ್ದಾರೆ. ಇದರಲ್ಲಿ ಒಬ್ಬರಿಗೆ ಕಂಡಕ್ಟರ್‌ ಟಿಕೆಟ್‌ ನೀಡುತ್ತಿರುತ್ತಾರೆ. ಈ ವೇಳೆ ಬಸ್‌ ವೇಗವಾಗಿ ಚಲಿಸುತ್ತಿದ್ದು, ಚಾಲಕ ಏಕಾಏಕಿ ಬ್ರೇಕ್‌ ಹಾಕಿದ್ದರಿಂದ ಯುವಕ ಆಯತಪ್ಪಿ ಬಸ್ಸಿನ ಡೋರ್‌ ನತ್ತ ಬೀಳುತ್ತಾನೆ. ಕೂಡಲೇ ಕಂಡಕ್ಟರ್‌ ತನ್ನ ಒಂದೇ ಕೈಯಿಂದ ಆತನ ಕೈಯನ್ನು ಹಿಡಿದುಕೊಂಡು ರಕ್ಷಿಸಿರುವುದನ್ನು ನಾವು ವೀಡಿಯೋದಲ್ಲಿ ಕಾಣಬಹುದಾಗಿದೆ.

ಘನೆಯ ವೇಳೆ ಬಸ್ಸಿನ ಡೋರ್‌ ಕೂಡ ಹಾಕಿತ್ತು. ಆದರೆ ಯುವಕ ಕೈ ತಾಗಿ ಡೋರ್‌ ಓಪನ್‌ ಆಗಿದೆ. ಒಟ್ಟಿನಲ್ಲಿ ಕಂಡಕ್ಟರ್‌ ಸಮಯಪ್ರಜ್ಞೆಯಿಂದ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ. ಸದ್ಯ ಬಸ್‌ ಕಂಡಕ್ಟರ್‌ ಮಹಾನ್‌ ಕೆಲಸವನ್ನು ಶ್ಲಾಘಿಸಿ ಸಾಕಷ್ಟು ಕಾಮೆಂಟ್‌ಗಳು ಬರುತ್ತಿವೆ.

Share This Article