ಮದುವೆಗೆ ಚೆಂಡೆ ಬಡಿಯುತ್ತ ಬಂದ ವಧು – ತಂದೆ, ಭಾವಿ ಪತಿಯಿಂದ ಸಾಥ್‌

Public TV
2 Min Read

ತಿರುವನಂತಪುರಂ: ವಧುವೊಬ್ಬಳು (Bride) ಸಕತ್‌ ಉತ್ಸಾಹದಿಂದ ಚೆಂಡೆ ಬಡಿಯುತ್ತಾ ಕಲ್ಯಾಣ ಮಂಟಪಕ್ಕೆ ಆಗಮಿಸಿದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಕತ್‌ ವೈರಲ್‌ ಆಗುತ್ತಿದೆ.

ಕೇರಳದ (Kerala) ಗುರುವಾಯೂರು ದೇವಸ್ಥಾನದಲ್ಲಿ ನಡೆದ ಮದುವೆಯ (Marriage) ಸಂಭ್ರಮಕ್ಕೆ ಹತ್ತಾರು ಜನ ಸಾಕ್ಷಿಯಾಗಿದ್ದಾರೆ. ವಧುವಿನ ಅಪ್ಪ – ಅಮ್ಮ ಕುಟುಂಬಸ್ಥರು ಮಗಳ ಮದುವೆ ಎನ್ನುವ ಸಂತಸದಲ್ಲಿದ್ದಾರೆ. ಮದುವೆ ಮಂಟಪದಲ್ಲಿ ವರನ ಪಕ್ಕದಲ್ಲಿ ಕುಳಿತು ಶಾಸ್ತ್ರೋಕ್ತಗಳಲ್ಲಿ ಭಾಗಿಯಾಗಬೇಕಾದ ವಧು ಶಿಲ್ಪಾ, ಮಂಟಪಕ್ಕೆ ಬರುವ ವೇಳೆ ಚೆಂಡೆ ತಂಡದೊಂದಿಗೆ ಚೆಂಡೆಯನ್ನು ಬಡಿಯುತ್ತಾ, ಖುಷಿ ಖುಷಿಯಲ್ಲಿ ಚೆಂಡೆ ತಂಡದ ಸದಸ್ಯರೊಂದಿಗೆ ಹೆಜ್ಜೆ ಹಾಕುತ್ತಾ ಬಂದಿದ್ದಾರೆ.

 ಈ ವೇಳೆ ಇದರೊಂದಿಗೆ ವರ (Groom) ಹಾಗೂ ಚೆಂಡೆ ಮಾಸ್ಟರ್ ಆದ ವಧುವಿನ ತಂದೆಯೂ (Father) ಸಾಥ್‌ ನೀಡಿದ್ದಾರೆ. ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.

ವೀಡಿಯೋದಲ್ಲಿ ಏನಿದೆ?: ವಧು ಚೆಂಡೆಯನ್ನು ಉತ್ಸಾಹದಿಂದ ಬಾರಿಸುತ್ತಿರುವುದನ್ನು ಕಾಣಬಹುದು. ಚೆಂಡೆ ವಾದಕರ ಗುಂಪು ಸಂತೋಷದಿಂದ ವಧುವಿಗೆ ಸಾಥ್‌ ನೀಡಿದ್ದಾರೆ. ಕೊನೆಯಲ್ಲಿ ವಧುವಿನ ತಂದೆಯೂ ಚೆಂಡೆ ವಾದಕರೊಂದಿಗೆ ಸೇರಿಕೊಳ್ಳುತ್ತಾರೆ. ಅಷ್ಟೇ ಅಲ್ಲದೇ ವರ ಕೂಡ ಭಾಗವಹಿಸುತ್ತಾನೆ. ಇದನ್ನೂ ಓದಿ: ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ ಮಾಜಿ ಕೇಂದ್ರ ಸಚಿವ

ವಧು ಶಿಲ್ಪಾ ಅವರು ಚೆಂಡೆ ವಾದನದ ಅನುಭವಿ ಕಲಾವಿದೆ. ಹಲವಾರು ಚೆಂಡೆ ವಾದನ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಖ್ಯಾತಿಯನ್ನು ಗಳಿಸಿದವರು ಎಂದು ಮೂಲಗಳು ತಿಳಿಸಿದೆ. ಈ ವೀಡಿಯೋ ಇದೀಗ ನೆಟ್ಟಿಗರ ಗಮನ ಸೆಳೆದಿದೆ. ಇದನ್ನೂ ಓದಿ: ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿಪಡಿಸಿದ ರಸ್ತೆಗೆ CM ಬೊಮ್ಮಾಯಿ ಹೆಸರು

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *