ಏಕರೂಪ ನಾಗರಿಕ ಸಂಹಿತೆಯನ್ನು ವಿರೋಧಿಸಿ ಕೇರಳ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ

By
2 Min Read

ತಿರುವನಂತಪುರಂ: ಏಕರೂಪ ನಾಗರಿಕ ಸಂಹಿತೆಯನ್ನು (Uniform Civil Code) ವಿರೋಧಿಸಿ ಕೇರಳ ವಿಧಾನಸಭೆ (Kerala Assembly ಮಂಗಳವಾರ ಸರ್ವಾನುಮತದ ನಿರ್ಣಯವನ್ನು (Resolution) ಅಂಗೀಕರಿಸಿದೆ.

ಸದನದಲ್ಲಿ ನಿರ್ಣಯ ಮಂಡಿಸಿದ ಸಿಎಂ ಪಿಣರಾಯಿ ವಿಜಯನ್ (Pinarayi Vijayan) ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ಯುಸಿಸಿ ಏಕಪಕ್ಷೀಯ ಮತ್ತು ಆತುರದ ಕ್ರಮ ಎಂದು ಟೀಕಿಸಿದರು.

ಫೆಬ್ರವರಿಯಲ್ಲಿ ಮಿಜೋರಾಂ ವಿಧಾನಸಭೆ ದೇಶದಲ್ಲಿ ಯುಸಿಸಿಯನ್ನು ವಿರೋಧಿಸಿ ನಿರ್ಣಯ ಅಂಗೀಕರಿಸಿತ್ತು. ಈಗ ಈ ಪಟ್ಟಿಗೆ ಎರಡನೇ ರಾಜ್ಯವಾಗಿ ಕೇರಳ ವಿಧಾನಸಭೆ ಸೇರ್ಪಡೆಯಾಗಿದೆ. ಸಿಎಂ ಮಂಡಿಸಿದ ನಿರ್ಣಯಕ್ಕೆ ಎಡ ಪ್ರಜಾಸತ್ತಾತ್ಮಕ ವೇದಿಕೆ (LDF) ಮತ್ತು ಸಂಯುಕ್ತ ಪ್ರಜಾಸತ್ತಾತ್ಮಕ ವೇದಿಕೆಯ (UDF) ಸದಸ್ಯರು ಬೆಂಬಲ ವ್ಯಕ್ತಪಡಿಸಿದರು.

ಯುಸಿಸಿಯ ಪರವಾಗಿರುವ ಬಿಜೆಪಿ (BJP) ಯಾವೊಬ್ಬ ಸದಸ್ಯರು ಕೇರಳ ವಿಧಾನಸಭೆಯಲ್ಲಿ ಇಲ್ಲ. ಹೀಗಾಗಿ ನಿರ್ಣಯಕ್ಕೆ ಯಾವುದೇ ವಿರೋಧ ವ್ಯಕ್ತವಾಗಲಿಲ್ಲ.  ಇದನ್ನೂ ಓದಿ: ಇಡೀ ಭಾರತ ನನ್ನ ಮನೆ: ಬಂಗಲೆಗೆ ಮರಳಿದ ಬಳಿಕ ರಾಹುಲ್ ಗಾಂಧಿ ಪ್ರತಿಕ್ರಿಯೆ

ಇದು ಸಂವಿಧಾನದ (Constitution) ಪ್ರಕಾರ ಯುಸಿಸಿಯಲ್ಲ. ಸಂಘ ಪರಿವಾರದ ಹಿಂದೂ ಕಾನೂನು (Hindu Law) ಮನುಸ್ಮೃತಿಯನ್ನು ಆಧರಿಸಿದೆ. ಕೇಂದ್ರದ ಕ್ರಮ ಜಾತ್ಯಾತೀತ ಸ್ವರೂಪವನ್ನು ಕಸಿದುಕೊಳ್ಳುವ ಏಕಪಕ್ಷೀಯ ಮತ್ತು ಆತುರದ ನಿರ್ಧಾರವಾಗಿದೆ. ಸಂವಿಧಾನವು ಸಾಮಾನ್ಯ ನಾಗರಿಕ ಕಾನೂನನ್ನು ರಾಜ್ಯ ನಿರ್ದೇಶನ ತತ್ವವಾಗಿ ಮಾತ್ರ ಉಲ್ಲೇಖಿಸುತ್ತದೆ. ಆದರೆ ಅದನ್ನು ಕಡ್ಡಾಯ ಮಾಡಿಲ್ಲ ಎಂದು ವಿಜಯನ್ ಹೇಳಿದರು.

ಸಾಂಸ್ಕೃತಿಕ ವೈವಿಧ್ಯತೆಯನ್ನು ಅಳಿಸಿಹಾಕುವ ಮೂಲಕ ‘ಒಂದು ರಾಷ್ಟ್ರ, ಒಂದು ಸಂಸ್ಕೃತಿ’ ಎಂಬ ಬಹುಸಂಖ್ಯಾತ ಕೋಮುವಾದಿ ಕಾರ್ಯಸೂಚಿಯನ್ನು ಅನುಷ್ಠಾನಕ್ಕೆ ತರಲು ಕೇಂದ್ರ ಸರ್ಕಾರ ಯುಸಿಸಿಯನ್ನು ಜಾರಿ ಮಾಡಲು ಮುಂದಾಗಿದೆ ಎಂದು ಆರೋಪಿಸಿದರು.

ಸಂವಿಧಾನದ 25ನೇ ವಿಧಿಯ ಅಡಿಯಲ್ಲಿ ಧಾರ್ಮಿಕ ಸ್ವಾತಂತ್ರ್ಯವನ್ನು ಖಾತರಿಪಡಿಸಿದಾಗ ಮತ್ತು ಧಾರ್ಮಿಕ ವೈಯಕ್ತಿಕ ನಿಯಮಗಳನ್ನು ಅನುಸರಿಸುವ ಮತ್ತು ಆಚರಿಸುವ ಹಕ್ಕನ್ನು ಒಳಗೊಂಡಿರುವಾಗ, ಯಾವುದೇ ಕಾನೂನನ್ನು ನಿಷೇಧಿಸುವುದು ಸಂವಿಧಾನದ ಹಕ್ಕಿನ ಉಲ್ಲಂಘನೆಯಾಗುತ್ತದೆ ಎಂದರು.

ಸಂವಿಧಾನ ರಚನಾ ಸಭೆಯ ಚರ್ಚೆಗಳಲ್ಲಿಯೂ ಸಹ ಯುಸಿಸಿಗೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯಗಳಿತ್ತು. ಬಿಆರ್ ಅಂಬೇಡ್ಕರ್ ಅವರ ಅಂದಿನ ನಿಲುವು ಸಂಸತ್ತು ಸಾಮಾನ್ಯ ನಾಗರಿಕ ಕಾನೂನನ್ನು ತರಲು ಪ್ರಯತ್ನಿಸಬಹುದು ಎಂದು ಹೇಳಿದ್ದರೆ ಹೊರತು ಅದನ್ನು ಕಡ್ಡಾಯಗೊಳಿಸಬೇಕೆಂದು ಅವರು ಒತ್ತಾಯ ಮಾಡಿರಲಿಲ್ಲ ಎಂದು ಪಿಣರಾಯಿ ವಾದಿಸಿದರು.

 

ಭಾರತೀಯ ಕಾನೂನು ಆಯೋಗವು ಕಳೆದ ತಿಂಗಳು ದೇಶದಲ್ಲಿ ಯುಸಿಸಿಯನ್ನು ಜಾರಿಗೊಳಿಸುವ ಕುರಿತು ಸಲಹೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಿತ್ತು.

 

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್