ಚಿತ್ರೀಕರಣದ ಸಮಯದಲ್ಲಿ ಎದುರಿಸಿದ ಸಂಕಷ್ಟಗಳನ್ನ ಬಿಚ್ಚಿಟ್ಟ ಕೀರ್ತಿ ಸುರೇಶ್

Public TV
1 Min Read

ಸೌತ್ ನಟಿ ಕೀರ್ತಿ ಸುರೇಶ್ (Keerthy Suresh)  ಅವರು ‘ದಸರಾ’ (Dasara) ಸಿನಿಮಾ ನಂತರ ಮತ್ತೆ ಹೊಸ ಪ್ರಾಜೆಕ್ಟ್‌ಗಳತ್ತ ಮುಖ ಮಾಡಿದ್ದಾರೆ. ಹೊಸ ಬಗೆಯ ಪಾತ್ರಗಳ ತಯಾರಿಯಲ್ಲಿದ್ದಾರೆ. ಇದೀಗ ‘ಸಾನಿ ಕಾಯಿದಮ್’ Saani Kaayidham) ಸಿನಿಮಾ ಮಾಡುವಾಗ ತಾವು ಎದುರಿಸಿದ ಸಂಕಷ್ಟದ ಬಗ್ಗೆ ನಟಿ ಪೋಸ್ಟ್ ಮಾಡಿದ್ದಾರೆ.

ದಕ್ಷಿಣ ಭಾರತದ ಸ್ಟಾರ್ ನಟಿಯಾಗಿ ಮಿಂಚ್ತಿರುವ ಕೀರ್ತಿ ಸುರೇಶ್ ಅವರು ಇತ್ತೀಚಿಗೆ ‘ಸರ್ಕಾರು ವಾರಿ ಪಾಟ’ ಮತ್ತು ದಸರಾ, ಸಾನಿ ಕಾಯಿದಮ್ ಸಿನಿಮಾಗಳ ಮೂಲಕ ಗಮನ ಸೆಳೆದರು.

‘ಸಾನಿ ಕಾಯಿದಮ್’ ಸಿನಿಮಾ ರಿಲೀಸ್ ಆಗಿ ಒಂದು ವರ್ಷವಾಗಿದೆ. ಈ ಬೆನ್ನಲ್ಲೇ ಚಿತ್ರದ ಸಂದರ್ಭ ಮತ್ತು ಸವಾಲುಗಳು ಹೇಗಿತ್ತು ಎಂಬುದನ್ನ ನಟಿ ಹಂಚಿಕೊಂಡಿದ್ದಾರೆ. ಸಿನಿಮಾದಲ್ಲಿ ನಟಿಸುವಾಗ ಮಾಡಿಕೊಂಡ ಗಾಯಗಳನ್ನು ಪ್ರದರ್ಶಿಸಿದ ನಟಿ, ಸಿನಿಮಾಕ್ಕಾಗಿ ಹೀಗೆ ಗಂಟೆಗಟ್ಟಲೆ ಮೇಕಪ್ ಮಾಡಿಸಿಕೊಳ್ಳಬೇಕಿತ್ತು ಎಂಬುದನ್ನ ಫೋಟೋ ಮೂಲಕ ನಟಿ ಕೀರ್ತಿ ಬಿಚ್ಚಿಟ್ಟಿದ್ದಾರೆ. ಇದನ್ನೂ ಓದಿ:ಕಾಣೆಯಾಗಿದ್ದ ನಟಿ ರಮ್ಯಾ ಮುದ್ದಿನ ಶ್ವಾನ ಇನ್ನಿಲ್ಲ

ಮೆಗಾಸ್ಟಾರ್ ಚಿರಂಜೀವಿ ಜೊತೆ ‘ಬೋಲಾ ಶಂಕರ್’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಕೀರ್ತಿ ಸುರೇಶ್ ನಟಿಸುತ್ತಿದ್ದಾರೆ.

Share This Article