ಬಹುಕಾಲದ ಗೆಳೆಯನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೀರ್ತಿ ಸುರೇಶ್

Public TV
1 Min Read

ಸೌತ್ ಬ್ಯೂಟಿ ಕೀರ್ತಿ ಸುರೇಶ್ (Keerthy Suresh) ಅವರು ಬಹುಕಾಲದ ಗೆಳೆಯ ಆಂಟೋನಿ ತಟ್ಟಿಲ್ (Antony Thattil) ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಖುಷಿ ಖುಷಿಯಾಗಿ ನಟಿ ಗೋವಾದಲ್ಲಿ ಮದುವೆಯಾಗಿದ್ದಾರೆ. ಇದನ್ನೂ ಓದಿ:ಫ್ಯಾನ್ಸ್‌ಗೆ ಸೃಜನ್ ಲೋಕೇಶ್ ಗುಡ್ ನ್ಯೂಸ್- ಮತ್ತೆ ಶುರುವಾಗಲಿದೆ ‘ಮಜಾ ಟಾಕೀಸ್’

35 ವರ್ಷದ ಆಂಟೋನಿ ತಟ್ಟಿಲ್ ಜೊತೆ ನಟಿ ಇಂದು (ಡಿ.12) ಗೋವಾದಲ್ಲಿ ಅದ್ಧೂರಿಯಾಗಿ ಮದುವೆಯಾಗುವ ಮೂಲಕ 15 ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆ ಒತ್ತಿದ್ದಾರೆ. ಕುಟುಂಬಸ್ಥರ ಸಮ್ಮುಖದಲ್ಲಿ ಈ ಮದುವೆ ಜರುಗಿದೆ. ಈ ಮದುವೆಯಲ್ಲಿ ವಿಜಯ್‌ ದಳಪತಿ ಭಾಗಿಯಾಗಿ ನವಜೋಡಿಗೆ ಶುಭಕೋರಿದ್ದಾರೆ.

ಉದ್ಯಮಿಯಾಗಿ ಆಂಟೊನಿ ತಟ್ಟಲ್ ಅವರು ಯಶಸ್ಸು ಕಂಡಿದ್ದಾರೆ. ಕೀರ್ತಿ ಸುರೇಶ್ ಅವರು ಚಿತ್ರರಂಗದಲ್ಲಿ ಸಾಧನೆ ಮಾಡಿದ್ದಾರೆ. ಕೀರ್ತಿ ಸುರೇಶ್ ಅವರ ಮದುವೆಯ ಫೋಟೋಗಳು ವೈರಲ್ ಆಗಿವೆ. ಅಭಿಮಾನಿಗಳು, ಸೆಲೆಬ್ರಿಟಿಗಳು ಅಭಿನಂದನೆ ತಿಳಿಸುತ್ತಿದ್ದಾರೆ.

ಇನ್ನೂ ಡಿ.25ರಂದು ಕೀರ್ತಿ ಸುರೇಶ್ ನಟಿಸಿರುವ ‘ಬೇಬಿ ಜಾನ್’ (Baby John) ಬಾಲಿವುಡ್ ಚಿತ್ರ ಕೂಡ ರಿಲೀಸ್ ಆಗಿದೆ. ಮೊದಲ ಬಾಲಿವುಡ್ ಚಿತ್ರಕ್ಕೆ ಅವರು ವರುಣ್ ಧವನ್‌ಗೆ ನಾಯಕಿಯಾಗಿದ್ದಾರೆ.

Share This Article