ಕೀರ್ತಿ ಸುರೇಶ್ ಸಖತ್ ಹಾಟ್: ಬಾಲಿವುಡ್ ಅಂದ್ರೆ ಸುಮ್ನೆನಾ ಅಂದ ಫ್ಯಾನ್ಸ್

Public TV
1 Min Read

ಹಾನಟಿ ಖ್ಯಾತಿಯ ದಕ್ಷಿಣದ ನಟಿ ಕೀರ್ತಿ ಸುರೇಶ್ (Keerthy Suresh) ಬಾಲಿವುಡ್ ಚಿತ್ರರಂಗಕ್ಕೆ ಹಾರಿದ್ದ ವಿಷಯ ಪಬ್ಲಿಕ್ ಟಿವಿ ಡಿಜಿಟಲ್ ನಲ್ಲೇ ಓದಿದ್ದೀರಿ. ಆ ಸಿನಿಮಾದ ಶೂಟಿಂಗ್ ನಲ್ಲೂ ಭಾಗಿಯಾಗಿದ್ದಾರೆ. ಶೂಟಿಂಗ್ ಸೆಟ್ ನಲ್ಲಿ ಈ ಸಿನಿಮಾದ ನಾಯಕ ವರುಣ್ ಧವನ್ ಅವರ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದು, ಆ ಫೋಟೋ ವೈರಲ್ ಆಗಿದೆ.

ಹೌದು, ಶೂಟಿಂಗ್ ಸೆಟ್ ನಲ್ಲಿ ವರುಣ್ (Varun Dhawan) ಹುಟ್ಟು ಹಬ್ಬವನ್ನು ಆಚರಿಸುವ ಸಂದರ್ಭದಲ್ಲಿ ಚಿತ್ರದ ಹಾಡೊಂದರ ಚಿತ್ರೀಕರಣಕ್ಕೆ ಪ್ಲ್ಯಾನ್ ಮಾಡಲಾಗಿತ್ತು. ಈ ಹಾಡಿನಲ್ಲಿ ಕೀರ್ತಿ ಸಖತ್ ಬೋಲ್ಡ್ ಆಗಿ, ಹಾಟ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೋ ನೋಡಿದ ಅಭಿಮಾನಿಗಳು ಬಾಲಿವುಡ್ ಅಂದರೆ ಸುಮ್ನೆನಾ ಎಂದು ಕಾಲೆಳೆದಿದ್ದಾರೆ.

ತೆಲುಗು, ತಮಿಳಿನಲ್ಲಿ ನಟಿಸಿ ಸೈ ಎನಿಸಿಕೊಂಡ ಕೀರ್ತಿ ಸುರೇಶ್ ಬಾಲಿವುಡ್‌ನಲ್ಲಿ ರಾರಾಜಿಸಬೇಕು ಎಂಬುದು ಅದೆಷ್ಟೋ ಅಭಿಮಾನಿಗಳ ಕನಸಾಗಿತ್ತು. ಇದೀಗ ಅದು ನೆರವೇರಿದೆ. ಹಿಂದಿ ಸಿನಿಮಾಗೆ ನಾಯಕಿಯಾಗಿ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಕೀರ್ತಿ ಸುರೇಶ್ ನಟನೆಯ ‘ರಾಘುತಾತ’ ಚಿತ್ರದ ಟೀಸರ್ ರಿಲೀಸ್ ಆದ ಬೆನ್ನಲ್ಲೇ ಬಾಲಿವುಡ್‌ಗೆ ಪಾದಾರ್ಪಣೆ ಮಾಡುತ್ತಿರುವ ಸಿಹಿಸುದ್ದಿ ಸಿಕ್ಕಿತ್ತು. ‘ಜವಾನ್’ (Jawan) ನಿರ್ದೇಶಕ ಅಟ್ಲೀ ಹೊಸ ಚಿತ್ರದಲ್ಲಿ ವರುಣ್ ಧವನ್‌ಗೆ ಹೀರೋಯಿನ್ ಆಗಿ ಕೀರ್ತಿ ಆಯ್ಕೆಯಾಗಿದ್ದಾರೆ.

ಈ ಹಿಂದೆಯೇ ವರುಣ್-ಕೀರ್ತಿ ಸುರೇಶ್ ಕಾಂಬಿನೇಷನ್‌ನ ಹೊಸ ಚಿತ್ರದ ಮುಹೂರ್ತ ಸಮಾರಂಭ ನೆರವೇರಿತ್ತು. ಸಂಕ್ರಾಂತಿ ಹಬ್ಬದಂದು ಹೊಸ ಸಿನಿಮಾಗೆ ಚಿತ್ರತಂಡ ಚಾಲನೆ ನೀಡಿತ್ತು. ಕೀರ್ತಿ ಸುರೇಶ್, ವರುಣ್, ಅಟ್ಲೀ, ವಾಮಿಕಾ ಗಬ್ಬಿ ಸೇರಿದಂತೆ ಅನೇಕರು ಭಾಗಿಯಾಗಿದ್ದರು. ಈಗ ಶೂಟಿಂಗ್ ಕೂಡ ಶುರುವಾಗಿದೆ.

 

ತಮನ್ನಾ, ನಯನತಾರಾ (Nayanatar) ಅವರಂತೆಯೇ ಕೀರ್ತಿ ಸುರೇಶ್ ಕೂಡ ಬಾಲಿವುಡ್‌ನಲ್ಲಿ ಸಿನಿಮಾ ಮಾಡಬೇಕು ಎಂದು ಅಭಿಮಾನಿಗಳ ಆಸೆಯಾಗಿತ್ತು. ಈಗ ವರುಣ್ ಧವನ್ ಚಿತ್ರದ ಮೂಲಕ ನೆರವೇರಿದೆ. ಇನ್ನೂ ವರುಣ್-ಕೀರ್ತಿ ನಟನೆಯ ಈ ಸಿನಿಮಾ ತಮಿಳಿನ ‘ತೆರಿ’ ರಿಮೇಕ್ ಎಂದು ಹೇಳಲಾಗುತ್ತಿದೆ. ಈ ಸುದ್ದಿ ನಿಜಾನಾ? ಕಾದು ನೋಡಬೇಕಿದೆ.

Share This Article