ಲಾಠಿ ಬಿಟ್ಟು ಪೊರಕೆ ಹಿಡಿದಿರುವುದು ಸ್ವಚ್ಛತೆಗಾಗಿಯೇ: ಭಾಸ್ಕರ್ ರಾವ್

Public TV
1 Min Read

ನವದೆಹಲಿ: ಮೊದಲು ಲಾಠಿ ಹಿಡಿದು ನಗರವನ್ನು ಸ್ವಚ್ಛ ಮಾಡುತ್ತಿದ್ದೆವು. ಈಗ ಪೊರಕೆ ಹಿಡಿದು ಸ್ವಚ್ಛ ಮಾಡುತ್ತೇವೆ ಅಷ್ಟೇ ಎಂದು ಹಿರಿಯ ಐಪಿಎಸ್ ಅಧಿಕಾರಿ ಬಿ. ಭಾಸ್ಕರ್ ರಾವ್ ಎಚ್ಚರಿಕೆ ನೀಡಿದ್ದಾರೆ.

ಕೇಜ್ರಿವಾಲ್ ನೇತೃತ್ವದಲ್ಲಿ ಆಪ್ ಸದಸ್ಯತ್ವ ಸ್ವೀಕರಿಸಿದ ಬಳಿಕ ಮಾತನಾಡಿದ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಎಲ್ಲ ರೀತಿಯ ಸಂಪನ್ಮೂಲ ಇದ್ದರೂ ಸ್ವಚ್ಛ ನಾಯಕತ್ವದ ಕೊರತೆಯಿದೆ. ಜನರೂ ಸಹ ಎಲ್ಲ ಪಕ್ಷಗಳನ್ನು ನೋಡಿ ಜಿಗುಪ್ಸೆಗೊಂಡಿದ್ದಾರೆ. ಆಪ್‌ಗೆ ಕರ್ನಾಟಕದಲ್ಲಿ ಉತ್ತಮವಾದ ನೆಲೆಯಿದೆ. ಚಾಮರಾಜನಗರದಿಂದ ಬೀದರ್ ವರೆಗೂ ಲಕ್ಷಾಂತರ ಮಂದಿ ಸೇರಿಕೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಜ್ರಿವಾಲ್ ಅವರ ನಾಯಕತ್ವ ಮೆಚ್ಚಿ ನಾನೂ ಆಪ್ ಸೇರಿದ್ದೇನೆ ಎಂದು ಹೇಳಿದ್ದಾರೆ. ಇದನೂ ಓದಿ: ಕೇಜ್ರಿವಾಲ್ ಸಮ್ಮುಖದಲ್ಲಿ ಆಪ್ ಸೇರಿದ ಭಾಸ್ಕರ್ ರಾವ್ 

IPS

ಆಮ್ ಆದ್ಮಿ ಪಕ್ಷದ ಸಾಧನೆಗೆ ದೇಶದೆಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ. ಕರ್ನಾಟಕದಲ್ಲಿ 3 (ಜೆಡಿಎಸ್, ಕಾಂಗ್ರೆಸ್, ಬಿಜೆಪಿ) ಪಕ್ಷಗಳ ಬಗ್ಗೆ ಜನ ಬೇಸರ ಗೊಂಡಿದ್ದಾರೆ. ಆದರೆ ಅರವಿಂದ ಕೇಜ್ರಿವಾಲ್ ಬಗ್ಗೆ ವಿದೇಶಗಳಲ್ಲೂ ಮೆಚ್ಚುಗೆ ವ್ಯಕ್ತವಾಗಿದೆ ಈ ಹಿನ್ನೆಲೆಯಲ್ಲಿ ಆಪ್ ಸೇರಿದ್ದೇನೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ೩ ಪಕ್ಷಗಳು ಅಂದರ್ ಬಾಹರ್ ಆಡುತ್ತಿವೆ. ನಾವೂ 30 ವರ್ಷದಿಂದ ಪಕ್ಷದ ಹೊರಗು, ಒಳಗನ್ನು ನೋಡಿದ್ದೇವೆ. ಹಾಗಾಗಿ, ದೆಹಲಿ, ಪಂಜಾಬ್ ರೀತಿ ಕರ್ನಾಟಕದಲ್ಲೂ ಬದಲಾವಣೆ ಆಗಬೇಕಿದೆ. ಜನರೂ ಅದನ್ನು ಬಯಸಿದ್ದಾರೆ ಎಂದಿದ್ದಾರೆ.  ಇದನೂ ಓದಿ: ಪರೀಕ್ಷೆ ಬರೆಯಲು ಹೋದ ವಿದ್ಯಾರ್ಥಿ ಅಪಘಾತದಲ್ಲಿ ಸಾವು

ದುರಾಡಳಿತದಿಂದ ಅಂತಾರಾಷ್ಟ್ರೀಯ ಮಟ್ಟದ ಬೆಂಗಳೂರು ನಗರ ಬೆಳವಣಿಗೆ ಆಗುತ್ತಿಲ್ಲ. ಎಸಿಬಿ, ಲೋಕಾಯುಕ್ತ ಇದ್ದರೂ ಭ್ರಷ್ಟಾಚಾರ ನಿರ್ಮೂಲನೆ ಆಗುತ್ತಿಲ್ಲ. ಶಾಲೆ, ಆಸ್ಪತ್ರೆ, ಕೆರೆ ಹಾಗೂ ಮೂಲ ಸೌಕರ್ಯಗಳ ಅಭಿವೃದ್ಧಿಯಾಗುತ್ತಿಲ್ಲ. ನಾವು ಕಾರ್ಯಾಂಗದಲ್ಲಿ ಬದಲಾವಣೆ ತರುತ್ತೇವೆ. ಆದರೆ, ಶಾಸಕಾಂಗದಲ್ಲೂ ಬದಲಾವಣೆ ತರುವುದು ಅವಶ್ಯವಾಗಿದೆ ಎಂದು ಹೇಳಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *