ಕೆಇಎ ಪರೀಕ್ಷಾ ಅಕ್ರಮ – ಆರ್‌.ಡಿ.ಪಾಟೀಲ್‌ಗೆ ಜಾಮೀನು ನಿರಾಕರಣೆ

Public TV
0 Min Read

ಕಲಬುರಗಿ: ಎಸ್‌ಡಿಎ, ಎಫ್‌ಡಿಎ ನೇಮಕ ಪರೀಕ್ಷಾ ಅಕ್ರಮದ ರೂವಾರಿ ಆರ್‌.ಡಿ.ಪಾಟೀಲ್‌ ಜಾಮೀನು ಅರ್ಜಿ ತಿರಸ್ಕೃತಗೊಂಡಿದೆ.

ಪರೀಕ್ಷಾ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‌.ಡಿ.ಪಾಟೀಲ್‌ ಸೇರಿ 10 ಜನ ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆಯು ಜಿಲ್ಲಾ ಪ್ರಧಾನ ವಿಶೇಷ ನ್ಯಾಯಾಲಯದಲ್ಲಿ ನಡೆಯಿತು. ನ್ಯಾಯಾಧೀಶೆ ಎಸ್‌.ನಾಗಶ್ರೀ ಅವರು ಜಾಮೀನು ನೀಡಲು ನಿರಾಕರಿಸಿದ್ದಾರೆ.

2023 ರ ಅಕ್ಟೊಬರ್‌ನಲ್ಲಿ SDA, FDA ನೇಮಕ ಪರೀಕ್ಷೆಯಲ್ಲಿ ಅಕ್ರಮ ನಡೆದಿತ್ತು. ಪ್ರಕರಣದ ಪ್ರಮುಖ ಆರೋಪಿ ಆರ್‌.ಡಿ.ಪಾಟೀಲ್‌ ಸೇರಿ ಹಲವರನ್ನು ಪೊಲೀಸರು ಬಂಧಿಸಿದ್ದರು. ಈಗ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ತಿರಸ್ಕೃತಗೊಂಡಿರುವುದರಿಂದ ಆರ್‌.ಡಿ.ಪಾಟೀಲ್‌ಗೆ ಜೈಲು ಖಾಯಂ ಆದಂತಿದೆ.

Share This Article