ಬೆಂಗಳೂರು: 2025ನೇ ಸಾಲಿನ ಸ್ನಾತಕೋತ್ತರ ದಂತ ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ಸಂಬಂಧಿಸಿದಂತೆ ಮೊದಲ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಸೋಮವಾರ ಪ್ರಕಟಿಸಿದೆ.
ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ 889 ಎಂಡಿಎಸ್ ಸೀಟು ಲಭ್ಯ ಇದ್ದು, ಮೊದಲ ಸುತ್ತಿನಲ್ಲಿ 636 ಮಂದಿಗೆ ಸೀಟು ಹಂಚಿಕೆ ಮಾಡಲಾಗಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ (H Prasanna) ತಿಳಿಸಿದ್ದಾರೆ. ಇದನ್ನೂ ಓದಿ: ಲಾರ್ಡ್ ಜಡ್ಡು ಏಕಾಂಗಿ ಹೋರಾಟ ವ್ಯರ್ಥ – ಇಂಗ್ಲೆಂಡ್‌ಗೆ 22ರನ್‌ಗಳ ರೋಚಕ ಗೆಲುವು; 2-1ರಲ್ಲಿ ಸರಣಿ ಮುನ್ನಡೆ
ಒಟ್ಟು 1,400 ಮಂದಿ ಸೀಟು ಪಡೆಯಲು ಅರ್ಜಿ ಸಲ್ಲಿಸಿದ್ದರು. ಸೀಟು ಹಂಚಿಕೆಯಾಗಿರುವ ಅಭ್ಯರ್ಥಿಗಳು ತಮಗೆ ಸೂಕ್ತ ಅನಿಸಿದರೆ ಛಾಯ್ಸ್-1 ಅನ್ನು ಆಯ್ಕೆ ಮಾಡಿಕೊಂಡು ಕಾಲೇಜಿಗೆ ಪ್ರವೇಶ ಪಡೆಯಬಹುದು. ಪ್ರವೇಶ ಪ್ರಕ್ರಿಯೆಯ ವೇಳಾಪಟ್ಟಿಯನ್ನು ಮಂಗಳವಾರ ಪ್ರಕಟಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಅಸ್ಸಾಂ ಯುವತಿ ಫೋಟೋ ಮಾರ್ಫ್ – ಸೆಕ್ಸ್ ಚಿತ್ರೋದ್ಯಮಕ್ಕೆ ಎಂಟ್ರಿಯಾಗಿರೋದಾಗಿ ಪ್ರಚಾರ ಮಾಡ್ತಿದ್ದ ಭಗ್ನ ಪ್ರೇಮಿ ಅರೆಸ್ಟ್
ಯುಜಿನೀಟ್: ನೋಂದಣಿಗೆ ಜು.17ರವರೆಗೆ ಅವಕಾಶ
ವೈದ್ಯಕೀಯ ಕೋರ್ಸ್‌ಗಳ ಸೀಟು ಹಂಚಿಕೆ ಸಲುವಾಗಿ ಇದುವರೆಗೂ ನೋಂದಣಿ ಮಾಡದಿರುವವರಿಗೆ ಅನುಕೂಲವಾಗಲಿ ಎಂದು ಜು.17ರವರೆಗೆ ಅವಕಾಶ ನೀಡಲಾಗಿದೆ. ಹೊಸದಾಗಿ ನೋಂದಣಿ ಮಾಡಿಕೊಂಡು, ಅರ್ಜಿ ಸಲ್ಲಿಸಬಹುದು. ಹಾಗೆಯೇ ನೀಟ್ ರೋಲ್ ನಂಬರ್ ದಾಖಲಿಸುವವರಿಗೂ ಜು.17ರವರೆಗೆ ಅವಕಾಶ ಇದೆ ಎಂದು ಹೇಳಿದ್ದಾರೆ.