ಕೆಡಿ ಟೀಸರ್ ಡೇಟ್ ಘೋಷಣೆ – ಪ್ರಚಾರದ ವೈಖರಿಯಲ್ಲಿದೆ ಮಿಸ್ಟರಿ!

Public TV
1 Min Read

ಧ್ರುವ ಸರ್ಜಾ (Dhruva Sarja) ನಟಿಸಿರುವ ಪ್ರೇಮ್ (Prem) ನಿರ್ದೇಶಿರುವ ಬಹುನಿರೀಕ್ಷಿತ ಚಿತ್ರವೇ `ಕೆಡಿ’. ಚಿತ್ರದ ಎರಡು ಹಾಡುಗಳು ಈಗಾಗ್ಲೇ ರಿಲೀಸ್ ಆಗಿ ವೈರಲ್ ಆಗಿದೆ. ಇದೀಗ ಟೀಸರ್ ಎಂಟ್ರಿಗೆ ಕೌಂಟ್‌ಡೌನ್ ಶುರುವಾಗಿದೆ.

ಸಾಮಾನ್ಯವಾಗಿ ಪ್ಯಾನ್ ಇಂಡಿಯಾ ಚಿತ್ರಗಳ ಟೀಸರ್, ಟ್ರೇಲರ್‌ ಏಕಕಾಲದಲ್ಲಿ ಎಲ್ಲಾ ಭಾಷೆಯಲ್ಲೂ ರಿಲೀಸ್ ಆಗುತ್ತವೆ. ಆದರೆ ಕೆಡಿ (KD) ಟೀಮ್ ಟೀಸರ್ ರಿಲೀಸ್ ಕಾರ್ಯಕ್ರಮಗಳನ್ನು ವಿಭಿನ್ನವಾಗಿ ನಡೆಸಲು ಪ್ಲ್ಯಾನ್‌ ಮಾಡಿಕೊಂಡಿದೆ.ಒಂದೊಂದು ಭಾಷೆಯಲ್ಲಿ ಒಂದೊಂದು ದಿನ ಟೀಸರ್‌ ರಿಲೀಸ್ ಆಗಲಿದೆ.  ಇದನ್ನೂ ಓದಿ: ದರ್ಶನ್ ಫ್ಯಾಮಿಲಿ ಕುಡಿ ಶೀಘ್ರದಲ್ಲೇ ಹೀರೋ ಆಗಿ ಎಂಟ್ರಿ?

ಆರಂಭಿಕವಾಗಿ ಇದೇ ಗುರುವಾರ ಮುಂಬೈನಲ್ಲಿ ಹಿಂದಿ ಭಾಷೆಯ ಟೀಸರ್ ಮಧ್ಯಾಹ್ನ ರಿಲೀಸ್ ಆಗುತ್ತೆ. ಅದೇ ದಿನ ಹೈದ್ರಾಬಾದ್‌ನಲ್ಲಿ ತೆಲುಗು ಭಾಷೆಯ ಟೀಸರ್ ರಿಲೀಸ್ ಆಗುತ್ತೆ. ಕನ್ನಡದಲ್ಲಿ ಯಾವಾಗ ಎಂದು ಕಾಯುತ್ತಿದ್ದ ಫ್ಯಾನ್ಸ್ ಕುತೂಹಲಕ್ಕೆ ಇದುವರೆಗೂ ಉತ್ತರ ಕೊಟ್ಟಿಲ್ಲ ಕೆಡಿ ಟೀಮ್. ಇದನ್ನೂ ಓದಿ: `ಎಕ್ಕ’ ಸಿನಿಮಾ ರಿಲೀಸ್‌ಗೆ ದಿನಗಣನೆ – ಮಂತ್ರಾಲಯ ರಾಯರ ದರ್ಶನ ಪಡೆದ ಯುವ ರಾಜ್‌ಕುಮಾರ್

ಪ್ರೇಮ್ ಸಿನಿಮಾ ಅಂದ್ಮೇಲೆ ಪ್ರಚಾರ ಹೈಪು ದೊಡ್ಡಮಟ್ಟಕ್ಕಿರಲೇಕು. ಅದರಂತೆ ವಿವಿಧ ಊರುಗಳಲ್ಲಿ ಒಂದೊಂದು ದಿನ ಗ್ಯಾಪ್ ತೆಗೆದುಕೊಂಡು ಟೀಸರ್ ರಿಲೀಸ್ ಮಾಡಲಿದೆ ಟೀಮ್. ಘೋಷಣೆಯೂ ಮೂರು ದಿನ ನಡೆಯಲಿದ್ದು ಭಾನುವಾರ ಪೂರ್ತಿ ದಿನ ಅಭಿಮಾನಿಗಳು ಕಾದರೂ ಕನ್ನಡ (Kannada) ಭಾಷೆಯ ಟೀಸರ್ ಡೇಟ್ ಘೋಷಣೆ ಆಗಲಿಲ್ಲ. ಆದರೆ ಸೀಕ್ರೇಟ್ ಏನ್ ಗೊತ್ತಾ ಎಲ್ಲಾ ಭಾಷೆಯ ಬಳಿಕ ಕೊನೆಯಲ್ಲಿ ಬೆಂಗಳೂರಿನಲ್ಲಿ ಮೂಲ ಭಾಷೆ ಕನ್ನಡದಲ್ಲಿ ಟೀಸರ್ ರಿಲೀಸ್ ಆಗುತ್ತೆ. ಇದು ಕೆಡಿ ಪ್ಲ್ಯಾನ್‌. ಕೆಡಿ ಚಿತ್ರವನ್ನು ಬಹುಕೋಟಿ ವೆಚ್ಚದಲ್ಲಿ ಕನ್ನಡದ ಕೆವಿಎನ್ ಫಿಲಂಸ್ ನಿರ್ಮಿಸಿದೆ.

Share This Article