ಸಂಜಯ್ ದತ್ ಜೊತೆಗಿನ ಫೋಟೋ ಹಂಚಿಕೊಂಡ ಉಪ್ಪಿಯ ಟ್ರೋಲ್ ಹುಡುಗಿ ರೀಷ್ಮಾ

Public TV
1 Min Read

ಕೊಡಗಿನ ಬೆಡಗಿ ರೀಷ್ಮಾ ನಾಣಯ್ಯ (Reeshma Nanaiah) ಇದೀಗ ‘ಕೆಡಿ’ (KD Film) ಚಿತ್ರದ ಸೆಟ್‌ನಲ್ಲಿ ಬಾಲಿವುಡ್ ನಟ ಸಂಜಯ್ ದತ್ ಜೊತೆ ತೆಗೆದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನೀವು ನನಗೆ ಸ್ಪೂರ್ತಿ ಎಂದು ನಟಿ ಬಣ್ಣಿಸಿದ್ದಾರೆ. ಇದನ್ನೂ ಓದಿ:ಶಾರುಖ್ ಖಾನ್ ಕಣ್ಣಿಗೆ ಗಾಯ- ಸರ್ಜರಿಗಾಗಿ ವಿದೇಶಕ್ಕೆ ಹೊರಟ ‘ಜವಾನ್’ ನಟ

ಧ್ರುವ ಸರ್ಜಾ ನಟನೆಯ ‘ಕೆಡಿ’ ಸಿನಿಮಾದಲ್ಲಿ ರೀಷ್ಮಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇದೇ ಸಿನಿಮಾದಲ್ಲಿ ‘ಕೆಜಿಎಫ್ 2’ (KGF 2) ಖ್ಯಾತಿಯ ಸಂಜಯ್ ದತ್ (Sanjay Dutt) ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ‘ಕೆಡಿ’ ಸೆಟ್‌ನಲ್ಲಿ ತೆಗೆದ ವಿಶೇಷ ಫೋಟೋವೊಂದನ್ನು ಶೇರ್ ಮಾಡಿ, ಹುಟ್ಟುಹಬ್ಬದ ಶುಭಾಶಯಗಳು ‘ಢಾಕ್ ದೇವ’ ಎಂದು ನಟಿ ವಿಶ್ ಮಾಡಿದ್ದಾರೆ. ನಿಮ್ಮ ನಮ್ರತೆ ಮತ್ತು ದಯೆ ನಿಜವಾಗಿಯೂ ಸ್ಫೂರ್ತಿದಾಯಕವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅಂದಹಾಗೆ, ಜು.29ರಂದು ಸಂಜಯ್ ದತ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಹಾಗೆಯೇ ಅವರ ‘ಕೆಡಿ’ ಸಿನಿಮಾದ ಖಡಕ್ ಪೋಸ್ಟ್ ಕೂಡ ರಿವೀಲ್ ಆಗಿದೆ. ‘ಢಾಕ್ ದೇವ’ನಾಗಿ ಸಂಜಯ್ ದತ್ ಮಾಸ್ ಎಂಟ್ರಿ ಕೊಟ್ಟಿದ್ದಾರೆ. ಈ ಸಿನಿಮಾವನ್ನು ಜೋಗಿ ಪ್ರೇಮ್ ನಿರ್ದೇಶನ ಮಾಡಿದ್ದು, ಈ ವರ್ಷದ ಅಂತ್ಯದಲ್ಲಿ ‘ಕೆಡಿ’ ಚಿತ್ರ ರಿಲೀಸ್ ಆಗಲಿದೆ.

Share This Article