KCC 2023: ನಿನ್ನೆ ಪಂದ್ಯದಲ್ಲಿ ಸೋತವರು ಯಾರು? ಗೆದ್ದವರು ಯಾರು?

Public TV
2 Min Read

ನಿನ್ನೆಯಿಂದ ಬೆಂಗಳೂರಿನಲ್ಲಿ ಸೆಲೆಬ್ರಿಟಿ ಕ್ರಿಕೆಟ್ ಲೀಗ್ (Celebrity Cricket League) ಪಂದ್ಯ ಪ್ರಾರಂಭವಾಗಿದ್ದು, ಮೊದಲ ದಿನ ಮೂರು ಪಂದ್ಯಗಳನ್ನು ಆಯೋಜಿಸಲಾಗಿತ್ತು. ಸಿಎಂ ಬಸವರಾಜ ಬೊಮ್ಮಾಯಿ ಕ್ರಿಕೆಟ್ ಲೀಗ್ ಅನ್ನು ಉದ್ಘಾಟಿಸಿದ ನಂತರ ಮೊದಲ ದಿನದ ಪಂದ್ಯಗಳು ಆರಂಭವಾದವು. ಒಟ್ಟು ಮೂರು ಪಂದ್ಯಗಳನ್ನು ಮೊದಲ ದಿನಕ್ಕಾಗಿ ಆಯೋಜನೆ ಮಾಡಲಾಗಿತ್ತು. ಇವುಗಳಲ್ಲಿ ಮೊದಲ ಪಂದ್ಯವಾಗಿ ನಟ ಧನಂಜಯ (Dhananjay) ಅವರ ಗಂಗಾ ವಾರಿಯರ್ಸ್ ಹಾಗೂ ಸುದೀಪ್ (Sudeep) ನೇತೃತ್ವದ ಹೊಯ್ಸಳ ಈಗಲ್ಸ್ ಮುಖಾಮುಖಿಯಾದವು.

ಮೊದಲ ಪಂದ್ಯದಲ್ಲಿ ಗಂಗಾ ವಾರಿಯಸ್ ವಿರುದ್ಧ ಗೆಲ್ಲುವಲ್ಲಿ ಹೊಯ್ಸಳ ಈಗಲ್ಸ್ ವಿಫಲವಾಯಿತು. ಗಂಗಾ ವಾರಿಯರ್ಸ್ ನ ಕರಣ್ ಆರ್ಯನ್ 54 ರನ್ ಗಳನ್ನು ಬಾರಿಸಿ ವಿಜಯಕ್ಕೆ ಕಾರಣರಾದರು. ಹತ್ತು ಓವರ್ ಗಳಲ್ಲಿ ಗಂಗಾ ವಾರಿಯರ್ಸ್ 4 ವಿಕೆಟ್ ನಷ್ಟಕ್ಕೆ 114 ರನ್ ಗಳನ್ನು ಕಲೆಹಾಕಿತ್ತು. ಆದರೆ, ಹೊಯ್ಸಳ ಈಗಲ್ಸ್ ಗುರಿ ತಲುಪುವಲ್ಲಿ ವಿಫಲವಾಗಿ ಸೋಲು ಒಪ್ಪಿಕೊಳ್ಳಬೇಕಾಯಿತು. ಇದನ್ನೂ ಓದಿ: ಹೊಂಬಾಳೆ ಫಿಲ್ಮ್ ಯುವ ಚಿತ್ರಕ್ಕೆ ರುಕ್ಮಿಣಿ ವಸಂತ್ ನಾಯಕಿನಾ? ಸ್ಪಷ್ಟನೆ ನೀಡಿದ ನಟಿ

ಎರಡನೇ ಪಂದ್ಯವಾಗಿ ಶಿವರಾಜ್ ಕುಮಾರ್ ನೇತೃತ್ವದ ಒಡೆಯರ್ ಚಾರ್ಜಸ್ ಹಾಗೂ ಸುದೀಪ್ ಅವರ ಹೊಯ್ಸಳ್ ಈಗಲ್ಸ್ ನಡುವೆ ನಡೆಯಿತು. ಈ ಪಂದ್ಯದಲ್ಲಿ ಟಾಸ್ ಗೆದ್ದದ್ದು ಒಡೆಯರ್ ಚಾರ್ಜಸ್. ಹತ್ತು ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 105 ರನ್ ಗಳನ್ನು ಕಲೆಹಾಕಿ, ಹೊಯ್ಸಳ ಈಗಲ್ಸ್ ತಂಡಕ್ಕೆ 106 ರನ್ ಗಳ ಗುರಿ ನೀಡಿತು. ಹೊಯ್ಸಳ ಈಗಲ್ಸ್ ತಂಡದ ಕ್ರಿಸ್ ಗೇಲ್ 23 ಎಸೆತಗಳಲ್ಲಿ 59 ರನ್ ಗಳನ್ನು ಕಲೆ ಹಾಕುವ ಮೂಲಕ ಗೆಲುವಿಗೆ ಸುಲಭ ಹಾದಿ ಹಾಕಿಕೊಟ್ಟರು. ಪರಿಣಾಮ ಶಿವಣ್ಣ ತಂಡವು ಸೋಲನುಭವಿಸಬೇಕಾಯಿತು.

ಅಂತಿಮ ಪಂದ್ಯವು ಧ್ರುವ ಸರ್ಜಾ ನೇತೃತ್ವದ ರಾಷ್ಟ್ರಕೂಟ ಫ್ಯಾಂಥರ್ಸ್ ಹಾಗೂ ಗಣೇಶ್ ನಾಯಕತ್ವದ ಕದಂಬ ಲಯನ್ಸ್ ನಡುವೆ ನಡೆಯಿತು. ಕದಂಬ ಲಯನ್ಸ್ ತಂಡ 10 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ ಕಲೆ ಹಾಕಿದ್ದು 111 ರನ್ ಗಳನ್ನು. ಎದುರಾಳಿ ರಾಷ್ಟ್ರಕೂಟ ಫ್ಯಾಂಥರ್ಸ್ ಈ ಗುರಿಯನ್ನು ಮುಟ್ಟಲು ಸಾಧ್ಯವಾಗದೇ ಇರುವ ಕಾರಣದಿಂದಾಗಿ ಕದಂಬ ಲಯನ್ಸ್ ಸುಲಭವಾಗಿ ಗೆಲುವು ಸಾಧಿಸಿತು. ಇಂದು ಎರಡನೇ ದಿನ ಪಂದ್ಯಗಳು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿವೆ.

Share This Article
Leave a Comment

Leave a Reply

Your email address will not be published. Required fields are marked *