BBK 12 | ಗಿಲ್ಲಿಯನ್ನ ಮದ್ವೆ ಆಗ್ತೀರಾ ಅಂದಿದ್ದಕ್ಕೆ ಕಾವ್ಯ ಕೊಟ್ಟ ಉತ್ತರವೇನು?

1 Min Read

ಬಿಗ್‌ಬಾಸ್ ಸೀಸನ್ 12ರ ಕ್ಯೂಟ್‌ ಕಪಲ್‌ ಸ್ಪರ್ಧಿಗಳಾಗಿದ್ದ ಕಾವ್ಯ ಶೈವ ಹಾಗೂ ಗಿಲ್ಲಿ ನಟ ಮದುವೆಯಾಗ್ತಾರಾ ಇಲ್ವಾ ಅಥವಾ ಬಿಗ್‌ಬಾಸ್ ಗೇಮ್‌ಗಷ್ಟೇ ಸೀಮಿತವಾ? ಈ ಥರ ಚರ್ಚೆಗಳು ಶುರುವಾಗಿದ್ದವು. ಬಿಗ್‌ ಬಾಸ್‌ ಆರಂಭದಿಂದಲೂ ಕಾವ್ಯ ಗಿಲ್ಲಿ ನಡುವೆ ಉತ್ತಮ ಬಾಂಧವ್ಯ ಏರ್ಪಟ್ಟಿತ್ತು. ಕಾವ್ಯ ಬಗ್ಗೆ ಗಿಲ್ಲಿ ನಟ ಪೊಸೆಸ್ಸಿವ್ ಆಗಿರೋದನ್ನ ಬಿಗ್‌ಬಾಸ್ ಆಡಿಯನ್ಸ್ ಗಮನಿಸಿದ್ದರು. ಇದೀಗ ಗಿಲ್ಲಿ ಜೊತೆ ಮದುವೆ ವಿಚಾರವಾಗಿ ಕಾವ್ಯ ಉತ್ತರ ಕೊಟ್ಟಿದ್ದಾರೆ.

ಗಿಲ್ಲಿ ಹಾಗೂ ನನ್ನ ನಡುವೆ ಉತ್ತಮ ಸ್ನೇಹವಿದೆ. ಅದು ಹಾಗೆಯೇ ಮುಂದುವರೆಯುತ್ತವೆ. ಇಬ್ಬರೂ ಜೋಡಿಯಾಗಿದ್ದೆವು ಅಂದ ಮಾತ್ರಕ್ಕೆ ಮದುವೆ ಆಗಬೇಕೆಂದೇನಿಲ್ಲ. ನಮ್ಮಿಬ್ಬರ ಜೋಡಿ ವಿಚಾರವಾಗಿ ನಾನು ಪಾಸಿಟಿವ್ ರೀತಿಯ ಕಾಮೆಂಟ್‌ಗಳನ್ನ ನೋಡಿದ್ದೇನೆ. ನಮ್ಮ ಪರಿಶುದ್ಧ ಸ್ನೇಹ, ಒಂದು ಹುಡುಗ ಹುಡುಗಿ ಮಧ್ಯೆ ಇಂಥದ್ದೊಂದು ಪರಿಶುದ್ಧ ಸ್ನೇಹ ಯಾಕೆ ಇರಬಾರದು..? ಮದುವೆ ಏನೂ ಇಲ್ಲ. ಸ್ನೇಹ ಮುಂದುವರೆಯುತ್ತೆ ಎಂದಿದ್ದಾರೆ ಕಾವ್ಯ.

ಬಿಗ್‌ಬಾಸ್ ಕನ್ನಡ ಸೀಸನ್ 12ರಲ್ಲಿ ಗಿಲ್ಲಿ ಹಾಗೂ ಕಾವ್ಯ ಜಂಟಿ ಸ್ಪರ್ಧಿಗಳಾಗಿ ಮನೆಯೊಳಗೆ ಎಂಟ್ರಿ ಕೊಟ್ಟಿದ್ದರು. ಅಲ್ಲಿಂದ ಒಬ್ರಿಗೊಬ್ಬರು ಬಿಟ್ಟುಕೊಡದಂತೆ ಇದ್ದರು. ಕೊನೆಗೆ ಫಿನಾಲೆವರೆಗೂ ಗಿಲ್ಲಿ ಹಾಗೂ ಕಾವ್ಯ ಒಟ್ಟಿಗೆ ಬಂದಿದ್ದರು. ಇಬ್ಬರ ಒಡನಾಟ ಗಮನಿಸಿದ ಫ್ಯಾನ್ಸ್‌ ಇವರು ಮದುವೆಯಾಗ್ತಾರಾ ಎಂಬ ಕುತೂಹಲವಿತ್ತು. ಇದೀಗ ಕಾವ್ಯ ಉತ್ತರ ಕೊಟ್ಟಿದ್ದಾರೆ.

ʻಪಬ್ಲಿಕ್ ಟಿವಿʼ ಜೊತೆಗಿನ ಸಂದರ್ಶನದಲ್ಲಿ ಕಾವ್ಯ ಮಾತನಾಡಿದ್ದು, ನಮ್ಮಿಬ್ಬರ ನಡುವೆ ಇರೋದು ಉತ್ತಮ ಸ್ನೇಹವೇ ಹೊರತೂ ಪ್ರೀತಿಯಲ್ಲ ಎಂದಿದ್ದಾರೆ. ಅದೇ ರೀತಿ, ಗಿಲ್ಲಿ ನಟ ಕೂಡ, ಕಾವ್ಯ ಜೊತೆ ಮದುವೆ ವಿಚಾರವನ್ನ ಅಲ್ಲಗಳೆದಿದ್ದಾರೆ.

Share This Article