‘ಭೀಮ’ನಿಗಾಗಿ ಮತ್ತೆ ಒಂದಾದ ಕವಿರಾಜ್-ದುನಿಯಾ ವಿಜಯ್

Public TV
2 Min Read

ರಿಗೊಬ್ಳೆ ಪದ್ಮಾಪತಿ…’ ಸಾಂಗ್ ಯಾರು ತಾನೆ ಕೇಳಿಲ್ಲ. ಸ್ಯಾಂಡಲ್‌ವುಡ್ ಕ್ವೀನ್, ಮೋಹಕತಾರೆ ರಮ್ಯಾ ಪದ್ಮಾವತಿಯಾಗಿ ಹಾಡಿಗೆ ಹೆಜ್ಜೆ ಹಾಕಿದ್ದರು. ರಮ್ಯಾಗೆ ದುನಿಯಾ ವಿಜಿ (Duniya Vijay) ಸಾಥ್ ನೀಡಿದ್ದರು. ‘ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್’ ಸಿನಿಮಾದ ಹಾಡು ಇದಾಗಿದ್ದು ಇಬ್ಬರೂ ಸಖತ್ ಆಗಿ  ಹೆಜ್ಜೆ ಹಾಕಿದ್ದರು. ವಿ ಹರಿಕೃಷ್ಣ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರುವ ಈ ಸುಂದರ ಹಾಡಿಗೆ (Song) ಸಾಹಿತ್ಯ ರಚಿಸಿದ್ದು ಖ್ಯಾತ ಚಿತ್ರಸಾಹಿತಿ ಕವಿರಾಜ್ (Kaviraj). ಈ ಹಾಡಿನ ಬಳಿಕ ರಮ್ಯಾ ಸ್ಯಾಂಡಲ್‌ವುಡ್ ಪದ್ಮಾವತಿ ಅಂತಾನೇ ಖ್ಯಾತಿಗಳಿಸಿದರು. ಅಷ್ಟರ ಮಟ್ಟಿಗೆ ಈ ಹಾಡು ಹಿಟ್ ಆಗಿತ್ತು.

ಆ ಹಾಡಿನ ನಂತರ ಕವಿರಾಜ್ ಮತ್ತು ದುನಿಯ ವಿಜಿ ಕಾಂಬಿನೇಷ್‌ನಲ್ಲಿ ಮತ್ತೊಂದು ವಿಶೇಷ ಹಾಡು ಮೂಡಿ ಬರುತ್ತಿದೆ. ‘ಪದ್ಮಾವತಿ’ ಹಾಡಿನ ಬಳಿಕ ಮತ್ತೊಂದು ಬ್ಲಾಕ್ ಬಸ್ಟರ್ ಹಿಟ್‌ಗೆ ಸಜ್ಜಾಗಿದೆ ಈ ಜೋಡಿ. ದುನಿಯಾ  ವಿಜಿಯ್ ಸದ್ಯ ‘ಭೀಮ’ (Bheem) ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಶೂಟಿಂಗ್ ಮುಗಿಸಿರುವ ವಿಜಿ ರಿಲೀಸ್ ತಯಾರಿಯಲ್ಲಿದ್ದಾರೆ. ‘ಭೀಮ’ ಸಿನಿಮಾಗಾಗಿ ಕವಿರಾಜ್ ವಿಶೇಷ ಹಾಡೊಂದನ್ನು ಬರೆದಿದ್ದಾರೆ. ಅಂದು ‘ಪದ್ಮಾವತಿ’ ಅಂತ ಮೋಡಿ ಮಾಡಿದ್ದ ಕವಿರಾಜ್ ಇದೀಗ, ‘ಬೇಡ ಬೇಡ ದೊಡ್ಡ ಪಾರ್ಟಿ…’ ಎನ್ನುತ್ತಾ ಮತ್ತೆ ಗಾಯನಪ್ರಿಯರ ಮುಂದೆ ಬರುತ್ತಿದ್ದಾರೆ. ಈ ಬಗ್ಗೆ ಕವಿರಾಜ್ ಅವರೇ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

‘ಬೇಡ ದೊಡ್ಡ ದೊಡ್ಡ ಪಾರ್ಟಿ.. ಕುಡಿಸು ನೀ ಸಾಕು ಬೈ ಟೂ ಟೀ…’ ಸಾಲುಗಳಿಂದ ಪ್ರಾರಂಭವಾಗುವ ಈ ಹಾಡು ಭೀಮ ಸಿನಿಮಾದ ಹೈ ವೋಲ್ಟೇಜ್ ಹಾಡು ಆಗಿರಲಿದೆ. ಅಂದಹಾಗೆ ಭೀಮ ಚಿತ್ರಕ್ಕೆ ಚರಣ್ ರಾಜ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಚರಣ್ ರಾಜ್ ಸಂಗೀತ, ಕವಿರಾಜ್ ಸಾಹಿತ್ಯ ಹಾಗೂ ದುನಿಯಾ ವಿಜಯ್ ನಟನೆ. ಈ ಮೂವರ ಕಾಂಬಿನೇಷನ್‌ನಲ್ಲಿ ಬರ್ತಿರುವ ಹಾಡಿನ ಮೇಲೆ ನಿರೀಕ್ಷೆ ಈಗಾಗಲೇ ಹೆಚ್ಚಾಗಿದ್ದು ತೆರೆಮೇಲೆ ನೋಡಲು ಅಭಿಮಾನಿಗಳು ಸಹ ಕಾತರರಾಗಿದ್ದಾರೆ.

‘ಭೀಮನ ಟೀಮ್ ನಿಂದ ಚರಣ್ ರಾಜ್ ಸಂಗೀತದಲ್ಲಿ ಒಂದು ಖಡಕ್ ಸಾಂಗ್ ಲೋಡಿಂಗ್. ಬೇಡ ಬೇಡವೆಂದರೂ ಚೇರ್ ಮೇಲೆ ನನ್ನ ಕೂರಿಸಿ , ತಾವು ಹಿಂದೆ ನಿಂತು ಒಬ್ಬ ತಂತ್ರಜ್ಞರಿಗೆ ಗೌರವ ನೀಡಿದ್ದು ಹೃದಯವಂತ ವಿಜಯ್ ಸರ್’ ಎಂದು ಬರೆದುಕೊಂಡಿದ್ದಾರೆ. ದುನಿಯಾ ವಿಜಯ್ ತಂತ್ರಜ್ಞರನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ, ಅಷ್ಟೆಯಲ್ಲದೇ ಅವರಿಗೆ ಸಲ್ಲ ಬೇಕಾದ ಗೌರವವನ್ನು ನೀಡುತ್ತಾರೆ. ಹಾಗಾಗಿಯೇ ವಿಜಿ ಎಂದರೆ ತಂತ್ರಜ್ಞರಿಗೆ ಇಷ್ಟ. ಚಿತ್ರಸಾಹಿತಿ ಕವಿರಾಜ್ ಕೂಡ ಇದನ್ನೆ ಹೇಳಿದ್ದಾರೆ. ಸುಂದರ ಸಾಲುಗಳ ಜೊತೆಗೆ ಕವಿರಾಜ್ ಚೇರ್ ಮೇಲೆ ಕುಳಿತಿದ್ದು ಸುತ್ತ ಭೀಮ ಟೀಮ್ ನಿಂತಿರುವ ಫೋಟೋವನ್ನು ಶೇರ್ ಮಾಡಿದ್ದಾರೆ.

‘ಭೀಮ’ ಸಿನಿಮಾದ ಬಗ್ಗೆ ಹೇಳುವುದಾದರೆ ದುನಿಯಾ ವಿಜಯ್ ನಾಯಕನಾಗಿ ನಟಿಸಿದ್ದರೆ ನಾಯಕಿಯಾಗಿ ರಂಗಭೂಮಿ ಕಲಾವಿದೆ ಅಶ್ವಿನಿ ಕಾಣಿಸಿಕೊಂಡಿದ್ದಾರೆ. ಕೃಷ್ಣ  ಸಾರ್ಥಕ್  ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಸಲಗ ಬಳಿಕ ದುನಿಯ ವಿಜಯ್ ಆಕ್ಷನ್ ಕಟ್ ಹೇಳುತ್ತಿರುವ 2ನೇ ಸಿನಿಮಾ ಇದಾಗಿದೆ.  ಸಲಗ ಸಕ್ಸಸ್‌ನಲ್ಲಿರುವ ವಿಜಿ ಭೀಮ ಮೂಲಕ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್