ಅಕ್ಕನ ಅಂಗಳದಲ್ಲಿ ಬಿಡುಗಡೆಯಾಗಲಿದೆ ಕವಲುದಾರಿ ಟೀಸರ್!

Public TV
1 Min Read

ಬೆಂಗಳೂರು: ಆಪರೇಷನ್ ಅಲಮೇಲಮ್ಮ ಚಿತ್ರದ ಮೂಲಕವೇ ನಾಯಕನಾಗಿ ನೆಲೆ ನಿಂತಿರುವವರು ರಿಷಿ. ಅವರು ಇದೀಗ ಹೇಮಂತ್ ನಿರ್ದೇಶನದ ಕವಲುದಾರಿ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದೀಗ ಈ ಚಿತ್ರದ ಟೀಸರ್ ಬಿಡುಗಡೆಗೂ ದಿನಾಂಕ ನಿಗದಿಯಾಗಿದೆ. ವಿಶೇಷವಾದೊಂದು ಸ್ಥಳ ಮತ್ತು ಸಂದರ್ಭದಲ್ಲಿ ಈ ಟೀಸರ್ ಅನಾವರಣಗೊಳ್ಳಲಿದೆ.

ಕನ್ನಡ ಚಿತ್ರಗಳ ಹಾಡು, ಟ್ರೈಲರ್ ಮುಂತಾದವುಗಳು ಆಗಾಗ ವಿದೇಶಗಳಲ್ಲಿ ಬಿಡುಗಡೆಯಾಗೋದಿದೆ. ಕವಲುದಾರಿ ಚಿತ್ರತಂಡ ಕೂಡಾ ಇದಕ್ಕಾಗಿ ವಿದೇಶವನ್ನೇ ಆಯ್ಕೆ ಮಾಡಿಕೊಂಡಿದೆ. ಯುಎಸ್‍ಎನ ದಲ್ಲಾಸ್ ನಲ್ಲಿ ನಡೆಯಲಿರೋ ಅಕ್ಕ ಸಮ್ಮೇಳನದಲ್ಲಿ ಸೆಪ್ಟೆಂಬರ್ ಎರಡರಂದು ಈ ಚಿತ್ರದ ಟೀಸರ್ ಬಿಡುಗಡೆಯಾಗಲಿದೆ. ಇದನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬಿಡುಗಡೆ ಮಾಡಲಿದ್ದಾರೆ!

ಈ ಚಿತ್ರ ಪುನೀತ್ ರಾಜ್‍ಕುಮಾರ್ ಅವರ ಪಿಆರ್​ಕೆ ಸಂಸ್ಥೆಯಿಂದ ಹೊರ ಬರಲಿರೋ ಮೊದಲ ಚಿತ್ರ. ಇದರ ಹಾಡುಗಳಿಗೆ ಚರಣ್ ರಾಜ್ ಸಂಗೀತ ನೀಡಿದ್ದಾರೆ. ಅನಂತ್ ನಾಗ್ ಅವರು ಮುಖ್ಯ ಪಾತ್ರವೊಂದರಲ್ಲಿ ನಟಿಸಿರೋ ಈ ಚಿತ್ರ ಸಂಪೂರ್ಣವಾಗಿ ಚಿತ್ರೀಕರಣ ಮುಗಿಸಿಕೊಂಡಿದೆ. ಟೀಸರ್ ಲಾಂಚ್ ಆದ ನಂತರದಲ್ಲಿ ಬಿಡುಗಡೆಯ ದಿನಾಂಕವೂ ಹೊರ ಬೀಳಲಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *