‘ಗೌರಿಶಂಕರ’ ಸೀರಿಯಲ್‌ಗೆ ಗುಡ್‌ ಬೈ ಹೇಳಿದ ಕೌಸ್ತುಭ ಮಣಿ

Public TV
1 Min Read

ಕಿರುತೆರೆ ರಾಧೆ ಕೌಸ್ತುಭ ಮಣಿ (Kaustubha Mani) ಅಭಿಮಾನಿಗಳಿಗೆ ಕಹಿ ಸುದ್ದಿ ಸಿಕ್ಕಿದೆ. ವೀಕ್ಷಕರ ಗಮನ ಸೆಳೆದ ‘ಗೌರಿಶಂಕರ’ (Gowrishankara) ಸೀರಿಯಲ್‌ನಿಂದ ನಾಯಕಿ ಕೌಸ್ತುಭ ಹೊರನಡೆದಿದ್ದಾರೆ. ಈ ಬಗ್ಗೆ ನಟಿ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ:`ಚೌ ಚೌ ಬಾತ್’ ಟ್ರೈಲರ್ ಬಿಡುಗಡೆ: ಅನೇಕ ಮೊದಲಗಳ ಸಾಕ್ಷಿಯಾಗಿ ಬರಲಿದೆ ಚಿತ್ರ

‘ನನ್ನರಸಿ ರಾಧೆ’ (Nannarasi Radhe) ಸೀರಿಯಲ್ ಮೂಲಕ ಬಣ್ಣದ ಬದುಕು ಪ್ರಾರಂಭಿಸಿದ ಕೌಸ್ತುಭ ಮಣಿ ಅವರು ಗ್ಯಾಪ್ ನಂತರ ಗೌರಿಶಂಕರ ಸೀರಿಯಲ್‌ನ ನಾಯಕಿ ಗೌರಿಯಾಗಿ ಎಂಟ್ರಿ ಕೊಟ್ಟಿದ್ದರು. ಇದೀಗ ಈ ಸೀರಿಯಲ್‌ನ ನಟಿ ಕೈಬಿಟ್ಟಿದ್ದಾರೆ.

ತಾವು ಧಾರಾವಾಹಿಯಿಂದ ಹೊರಬರುತ್ತಿರುವ ವಿಚಾರವನ್ನು ಸ್ವತಃ ಕೌಸ್ತಭ ಮಣಿ ಅವರೇ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಹಾಯ್, ನಾನು ನಿಮ್ಮ ಪ್ರೀತಿಯ ಗೌರಿ. ಕೆಲವೊಂದು ವೈಯಕ್ತಿಕ ಕಾರಣಗಳಿಂದ ಇನ್ನು ಮುಂದೆ ನಾನು ‘ಗೌರಿಶಂಕರ’ ಧಾರಾವಾಹಿಯಲ್ಲಿ ನಟಿಸುವುದಕ್ಕೆ ಆಗುತ್ತಿಲ್ಲ. ನನ್ನ ಜಾಗಕ್ಕೆ ಹೊಸ ಗೌರಿ ಬರುತ್ತಿದ್ದಾಳೆ. ನನಗೆ ಕೊಟ್ಟಷ್ಟೇ ಪ್ರೀತಿ ಅವಳಿಗೂ ಕೊಟ್ಟು ಸಪೋರ್ಟ್ ಮಾಡಿ, ಹರಸಿ, ಹಾರೈಸಿ. ಥ್ಯಾಂಕ್ಯೂ ಎಂದು ಆಕೆ ಹೇಳಿಕೊಂಡಿದ್ದಾರೆ.

ಗೌರಿ ಪಾತ್ರಕ್ಕೆ ನಟಿ ಗುಡ್ ಬೈ ಹೇಳಿರೋದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಸಿನಿಮಾ ಇರುವ ಕಾರಣ, ಕಿರುತೆರೆಯಲ್ಲಿ ನಟಿಸಲು ಬ್ರೇಕ್ ಹಾಕಿದ್ರಾ ಎಂಬ ಅನುಮಾನ ಪ್ರೇಕ್ಷಕರಲ್ಲಿ ಮೂಡಿದೆ. ಮತ್ತೆ ಟಿವಿ ಪರದೆಗೆ ಬರುತ್ತಾರಾ ಕಾಯಬೇಕಿದೆ. ಇದನ್ನೂ ಓದಿ:ಸ್ನೇಹಿತ್ ಜೊತೆ ಫ್ರೆಂಡ್‌ಶಿಪ್ ಕಂಟಿನ್ಯೂ ಮಾಡ್ತಾರಾ? ನಮ್ರತಾ ಸ್ಪಷ್ಟನೆ

ಕೌಸ್ತುಭ ಮಣಿ ಸದ್ಯ ಅರ್ಜುನ್ ಜನ್ಯ ನಿರ್ದೇಶನದ ’45’ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಶಿವಣ್ಣ, ಉಪೇಂದ್ರ, ರಾಜ್ ಬಿ ಶೆಟ್ಟಿ ಅವರ ಜೊತೆ ತೆರೆಹಂಚಿಕೊಂಡಿದ್ದಾರೆ.

Share This Article