ಕತ್ರಿನಾ, ವಿಕ್ಕಿ ಎಂಗೇಜ್ಮೆಂಟ್ ಸೀಕ್ರೆಟ್

Public TV
2 Min Read

ಮುಂಬೈ: ಬಾಲಿವುಡ್ ನಟಿ ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂಬ ಸುದ್ದಿ ಹಲವು ದಿನಗಳಿಂದ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಲೇ ಇತ್ತು. ಇದೀಗ ಪ್ರೇಮದ ಹಕ್ಕಿಗಳ ಬಗ್ಗೆ ಕುತೂಹಲಕಾರಿ ಸುದ್ದಿ ಹೊರಬಿದ್ದಿದೆ.

ಕ್ಯಾಟ್-ವಿಕ್ಕಿ ಗುಟ್ಟಾಗಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಒಟ್ಟಾಗಿ ಸಾಕಷ್ಟು ಬಾರಿ ಕಾಣಿಸಿಕೊಂಡಿದ್ದಾರೆ. ಇವರ ನಡುವೆ ಪ್ರೀತಿ ಹುಟ್ಟಿದೆ ಎನ್ನುವ ಮಾತು ಕೇಳಿ ಬಂದಿತ್ತು. ಆದರೆ ಇದನ್ನು ಇಬ್ಬರೂ ಅಲ್ಲಗಳೆದಿದ್ದರು. ನಾವಿಬ್ಬರೂ ಬೆಸ್ಟ್ ಫ್ರೆಂಡ್ಸ್ ಅಷ್ಟೇ ಎಂದು ಮಾಧ್ಯಮದ ಮುಂದೆ ಹೇಳಿಕೊಂಡಿದ್ದರು. ವಿಕ್ಕಿ ಹಾಗೂ ಕತ್ರಿನಾ ಸೈಲೆಂಟ್ ಆಗಿ ಎಂಗೇಜ್‍ಮೆಂಟ್ ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿ ಹರಿದಾಡಿದೆ. ಈ ಸುದ್ದಿ ನೋಡಿ ಸಲ್ಮಾನ್ ಖಾನ್ ಬೇಸರ ಮಾಡಿಕೊಳ್ಳಬಹುದು, ಸಲ್ಲು ಮದುವೆ ಲೊಕೇಷನ್ ಕೇಳಬಹುದು ಎಂದು ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡಿದ್ದಾರೆ. ಇದನ್ನೂ ಓದಿ:  ಚಿತ್ರೀಕರಣ ಸೆಟ್‍ಗೆ ಆಟೋದಲ್ಲಿ ಬಂದ ಬಾಲಿವುಡ್ ನಟಿ

 

View this post on Instagram

 

A post shared by Katrina Kaif (@katrinakaif)

ಅನಿಲ್ ಕಪೂರ್ ಮಗ ಹರ್ಷವರ್ಧನ್ ಕಪೂರ್ ಕತ್ರಿನಾ, ವಿಕ್ಕಿ ಸಂಬಂಧದ ಬಗ್ಗೆ ಮೌನ ಮುರಿದಿದ್ದರು. ಈ ಬಗ್ಗೆ ಮಾತನಾಡಿದ್ದ ಹರ್ಷವರ್ಧನ್, ಕತ್ರಿನಾ-ವಿಕ್ಕಿ ಆಪ್ತರಾಗಿದ್ದಾರೆ. ಇಬ್ಬರೂ ಮದುವೆ ಆಗುವ ಆಲೋಚನೆಯಲ್ಲಿ ಕೂಡ ಇದ್ದಾರೆ. ಬಹುಶಃ ಈ ವಿಚಾರ ಹೇಳಿದ ನಂತರದಲ್ಲಿ ನಾನು ತೊಂದರೆಗೆ ಸಿಲುಕಬಹುದು ಎಂದಿದ್ದರು.

 

View this post on Instagram

 

A post shared by Vicky Kaushal (@vickykaushal09)

2018ರ ಸಮಯದಲ್ಲಿ ಕಾಫಿ ವಿತ್ ಕರಣ್ ಶೋನಲ್ಲಿ ಕತ್ರಿನಾ ಪಾಲ್ಗೊಂಡಿದ್ದರು. ಈ ವೇಳೆ ವಿಕ್ಕಿ ಜತೆ ತೆರೆ ಹಂಚಿಕೊಳ್ಳುವ ಆಸಕ್ತಿ ತೋರಿದ್ದರು ಕತ್ರಿನಾ. ಇದಾದ ನಂತರ 2019ರಲ್ಲಿ ಇಬ್ಬರೂ ಮುಂಬೈನಲ್ಲಿ ಊಟಕ್ಕೆ ಒಟ್ಟಾಗಿ ಸೇರಿದ್ದರು. ಇದರ ಫೋಟೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಕಳೆದ 2-3 ವರ್ಷಗಳಿಂದ ಕ್ಯಾಟ್-ವಿಕ್ಕಿ ಹಲವು ಬಾರಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಆದರೆ ಎಂದೂ ತಮ್ಮ ಲವ್‍ಲೈಫ್ ಬಗ್ಗೆ ಇಬ್ಬರು ತುಟಿ ಬಿಚ್ಚಿಲ್ಲ. ಆದರೆ ಎಂಗೇಜ್‍ಮೆಂಟ್ ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *