ದುಬಾರಿ ಕಾರು ಖರೀದಿಸಿದ ‘ಕಾಟೇರ’ ನಿರ್ದೇಶಕ ತರುಣ್ ಸುಧೀರ್

By
1 Min Read

ಕಾಟೇರ ಸಿನಿಮಾದ ಯಶಸ್ಸಿನ ನಂತರ ನಿರ್ದೇಶಕ ತರುಣ್ ಸುಧೀರ್ ಭಾರೀ ಮೊತ್ತ ನೀಡಿ ದುಬಾರಿ ಕಾರು ಖರೀದಿ ಮಾಡಿದ್ದಾರೆ. ಬಿಎಂಡಬ್ಲು ಎಕ್ಸ್ 1 ಕಾರು (Car) ಖರೀದಿಸಿದ್ದು, ತಾಯಿಯೊಂದಿಗೆ ಮೊದಲ ಪ್ರಯಾಣ ಮಾಡಿದ್ದಾರೆ. ಈ ಕುರಿತಂತೆ ಅವರು ಫೋಟೋವನ್ನು ಹಂಚಿಕೊಂಡಿದ್ದಾರೆ.

ಇತ್ತೀಚೆಗಷ್ಟೇ ತರುಣ್, ಕಿರುತೆರೆಗೆ ಹಾರಿದ್ದಾರೆ. ಕಾಟೇರ ಸಕ್ಸಸ್ ನಂತರ ತರುಣ್ (Tharun Sudhir) ಮತ್ತ್ಯಾವ ಚಿತ್ರವನ್ನು ಕೈಗೆತ್ತಿಕೊಳ್ಳಲಿದ್ದಾರೆ ಎನ್ನುವ ಕುತೂಹಲ ಎಲ್ಲರಲ್ಲಿ ಇತ್ತು. ಆದರೆ ದಿಢೀರ್ ಅಂತ ಕಿರುತೆರೆಗೆ ಹಾರಿದ್ದಾರೆ.

ಹಾಗಂತ ಅವರು ಯಾವುದೇ ಧಾರಾವಾಹಿ ನಿರ್ದೇಶನವಾಗಲಿ, ನಟಿಸುವುದಕ್ಕಾಗಿ ಹೋಗಿಲ್ಲ. ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರಲಿರುವ ಹೊಸ ರಿಯಾಲಿಟಿ ಶೋ ಮಹಾನಟಿಗೆ (Mahanati) ತೀರ್ಪುಗಾರರಾಗಿ ಭಾಗಿಯಾಗಲಿದ್ದಾರೆ. ಈಗಾಗಲೇ ರಿಯಾಲಿಟಿ ಶೋ ಶುರುವಾಗಿದೆ.

 

ಮಹಾನಟಿ ರಿಯಾಲಿಟಿ ಶೋಗೂ ಮತ್ತು ಸಿನಿಮಾ ರಂಗಕ್ಕೂ ನೇರ ಸಂಬಂಧವಿದೆ. ಆ ಕಾರಣಕ್ಕಾಗಿಯೇ ಕಾಟೇರ್ ಸೂಪರ್ ಹಿಟ್ ಸಿನಿಮಾದ ನಿರ್ದೇಶಕನನ್ನು ಜೀ ಕನ್ನಡ ವಾಹಿನಿಯು ಆಯ್ಕೆ ಮಾಡಿದೆ. ಈ ಹಿಂದೆಯೂ ಅನೇಕ ಸಿನಿಮಾ ನಟರನ್ನು ವಾಹಿನಿಯು ನಾನಾ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದೆ.

Share This Article