ಕೆಎಎಸ್ ಅಧಿಕಾರಿ ರಂಗನಾಥ್‍ಗೆ ಸೇರಿದ ಒಟ್ಟು 5 ಮನೆಗಳ ಮೇಲೆ ಎಸಿಬಿ ದಾಳಿ

Public TV
1 Min Read

ಬೆಂಗಳೂರು: ಕೆಎಎಸ್ ಅಧಿಕಾರಿ ರಂಗನಾಥ್‍ಗೆ ಸೇರಿದ ಒಟ್ಟು 5 ಮನೆಗಳ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ವಶ ಪಡಿಸಿಕೊಂಡಿದ್ದಾರೆ.

ರಂಗನಾಥ್, ಕರ್ನಾಟಕ ಸಾರ್ವಜನಿಕ ಜಮೀನುಗಳ ನಿಗಮಗಳ ಪ್ರಧಾನ ವ್ಯವಸ್ಥಾಪಕಾಗಿದ್ದಾರೆ. ಈ ಹಿಂದೆ ಬೆಂಗಳೂರಿನ ಉತ್ತರ ತಾಲೂಕು ಉಪನೊಂದಣಾಧಿಕಾರಿಯಾಗಿ ಕೆಲಸ ಮಾಡಿದ್ದಾರೆ. ಈ ವೇಳೆ ಗೋಮಾಳ ಜಮೀನನ್ನು ನಿಯಮ ಬಾಹಿರವಾಗಿ ಖಾಸಗಿ ಯವರಿಗೆ ಪರಭಾರೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಎಸಿಬಿ ಕೋರ್ಟ್ ಸೂಚನೆ ಮೇರೆಗೆ ಎಫ್‍ಐಆರ್ ದಾಖಲಿಸಿತ್ತು. ಇದನ್ನೂ ಓದಿ: ಪಠ್ಯದಲ್ಲಿ ಭಗವದ್ಗೀತೆ ಅಳವಡಿಕೆಗೆ ಸ್ವಾಗತ: ಡಿಕೆಶಿ

ನ್ಯಾಯಾಂಗ ಬಡಾವಣೆಯಲ್ಲಿರುವ ವಾಸದ ಮನೆ, ನಾಗರಬಾವಿಯಲ್ಲಿರುವ ಸಂಬಂಧಿಕರ ಮನೆ, ದೊಡ್ಡ ಬಳ್ಳಾಪುರದಲ್ಲಿರುವ ಕಲ್ಯಾಣ ಮಂಟಪ ಮತ್ತು ಟೌನ್ ಕನಕ ಶ್ರೀ ಟ್ರಸ್ಟ್ ಕಚೇರಿ, ಅಕ್ಷರ ಪಬ್ಲಿಕ್ ಸ್ಕೂಲ್, ಉತ್ತರ ತಾಲೂಕು ವಿಭಾಗದ ಕಚೇರಿ, ಮೇಲೆ ದಾಳಿ ಮಾಡಲಾಗಿದೆ. 42 ಎಸಿಬಿ ಅಧಿಕಾರಿಗಳು 5 ತಂಡಗಳಾಗಿ ದಾಳಿ ಮಾಡಿ ಪರಿಶೀಲನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಮಾತುಬಾರದ ಬಾಲಕನ ಕೊಂದು ಗೋಣಿ ಚೀಲದಲ್ಲಿ ತುಂಬಿ ಎಸೆದ್ರು

ಅಂದಿನ ತಹಶಿಲ್ದಾರ್ ಗಮನಕ್ಕೆ ಬಾರದೇ, ದಾಖಲೆಗಳನ್ನು ಪರಿಶೀಲನೆ ಮಾಡದೇ ಕೇವಲ ಮೂರೇ ದಿನಗಳಲ್ಲಿ ಗೋಮಾಳ ಜಮೀನನ್ನು ಪರಭಾರೆ ಮಾಡಿರುವ ಆರೋಪ ರಂಗನಾಥ್ ಮೇಲಿದೆ.

Share This Article
Leave a Comment

Leave a Reply

Your email address will not be published. Required fields are marked *