ಪುರಾತನ ಶಿವನ ವಿಗ್ರಹ ಧ್ವಂಸ ಮಾಡಿ ಕ್ರೌರ್ಯ ಮೆರೆದ ಯುವಕರು

Public TV
1 Min Read

ಕಾರವಾರ: ಅನ್ಯ ಕೋಮಿನ ಯುವಕರಿಂದ ಶಿವ ದೇವಾಲಯದ ಅವಶೇಷಗಳನ್ನು ಕಲ್ಲಿನಿಂದ ಪುಡಿಮಾಡಿ ಫೇಸ್‍ಬುಕ್‍ನಲ್ಲಿ (Facebook) ಅಪ್‍ಲೋಡ್ ಮಾಡಿ ಕ್ರೌರ್ಯ ಮೆರೆದ ಘಟನೆ ಉತ್ತರಕನ್ನಡ (Uttara Kannada) ಜಿಲ್ಲೆಯ ಜೊಯಿಡಾ ತಾಲೂಕಿನ ರಾಮನಗರದ (Ramanagar) ನಾಗೋಡಾ ಕ್ರಾಸ್ ಬಳಿ ನಡೆದಿದೆ.

ಜೋಯಿಡಾ ತಾಲೂಕಿನ ರಾಮನಗರದಲ್ಲಿ ಕಾಳಿನದಿಗೆ ಕಟ್ಟಲಾದ ಸೂಪಾ ಜಲಾಶಯದಲ್ಲಿ ನೀರು ಕಡಿಮೆಯಾದಾಗ ನೀರಿನಲ್ಲಿ ಮುಳಗಿ ಹೋಗಿದ್ದ ಶಿವ ದೇವಾಲಯದ ಅವಶೇಷಗಳು ಕಾಣಸಿಗುತ್ತವೆ. ಇವುಗಳನ್ನು ನೋಡಲು ಸೆ.18 ರಂದು ತೆರಳಿದ್ದ ಆರುಜನ ಅನ್ಯಕೋಮಿನ ಯುವಕರು ಶಿವ ದೇವಾಲಯದ ಅವಶೇಷಗಳನ್ನು ಕಲ್ಲಿನಿಂದ ಒಡೆದು ಹಾಕಿದ್ದರು. ಈ ವೀಡಿಯೋವನ್ನು ಹುಸೈನ್ ಶೇಖ್ ಎಂಬಾತ ಚಿತ್ರೀಕರಣ ನಡೆಸಿ ಫೇಸ್‍ಬುಕ್ ಖಾತೆಯಲ್ಲಿ ಅಪ್‍ಲೋಡ್ ಮಾಡಿ ವಿಕೃತಿ ಮೆರೆದಿದ್ದಾನೆ. ಇದನ್ನೂ ಓದಿ: ಬಂಗಾರಪ್ಪ ಸಿಎಂ ಆಗಿದ್ದಾಗ ಚಿಟಿಕೆ ಹೊಡೆಯುವುದರಲ್ಲಿ ಕಾವೇರಿ ಸಮಸ್ಯೆಗೆ ಉತ್ತರ ಕೊಟ್ಟಿದ್ದರು: ಮಧು ಬಂಗಾರಪ್ಪ

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದ್ದು, ಹಿಂದೂಗಳ ಭಾವನೆಗೆ ಘಾಸಿ ಗೊಳಿಸಿರುವ ಹಾಗೂ ಪುರಾತನ ದೇವರ ವಿಗ್ರಹವನ್ನು ನಾಶಪಡಿಸಿರುವ ಈ ಯುವಕರನ್ನು ಕೂಡಲೇ ಬಂಧಿಸಿ ಕ್ರಮ ಕೈಗೊಳ್ಳಬೇಕು ಎಂದು ರಾಮನಗರ ಠಾಣೆಯಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ಯ ಗಿರೀಶ್ ಗೋಸಾಯಿ ಎಂಬವರು ದೂರು ದಾಖಲಿಸಿದ್ದಾರೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್