ಶ್ರೀಲೀಲಾ (Sreeleela) ಬಾಲಿವುಡ್‌ಗೆ ಹೆಜ್ಜೆ ಇಟ್ಟಾಗಿದೆ. ಅಲ್ಲಿನ ಎಬಿಸಿಡಿ ಕಲಿತಾಗಿದೆ. ಫುಲ್‌ಫ್ಲೆಜ್ಟ್ ಬಾಲಿವುಡ್ ಮೊದಲ ಸಿನಿಮಾ ಇನ್ನೂ ರಿಲೀಸ್ ಆಗಿಲ್ಲ. ಆ ಚಿತ್ರವನ್ನ ಆಶಿಕಿ 3 ಎಂದು ಕರೆಯಲಾಗುತ್ತಿದೆ. ಆದರೆ ಶೀರ್ಷಿಕೆ ಬದಲಾಗುವ ಚಾನ್ಸ್ ಇದೆ. ಅಷ್ಟರೊಳಗೆ ಶ್ರೀಲೀಲಾ ಬಾಲಿವುಡ್‌ನ ಮೊದಲ ಚಿತ್ರದ ಹೀರೋ ಕಾರ್ತಿಕ್ ಆರ್ಯನ್(Kartik Aaryan) ಜೊತೆ ಲವ್ವಲ್ಲಿ ಬಿದ್ದಿರುವ ವಿಚಾರ ಗುಲ್ಲಾಗಿದೆ.
ಇಬ್ಬರೂ ಹಲವು ಬಾರಿ ರೆಸ್ಟೋರೆಂಟ್‌ಗಳಲ್ಲಿ ಸುತ್ತಾಡುತ್ತಾ ಸಿಕ್ಕಿಬಿದ್ದಿದ್ದರು. ಇದೆಲ್ಲಾ ರಿವೀಲ್ ಆದಾಗ ಇಬ್ಬರೂ ಸ್ವಲ್ಪ ಬ್ರೇಕ್ ತೆಗೆದುಕೊಂಡಿದ್ದರು, ಆದರೆ ಇದೀಗ ಮತ್ತೆ ಬುಧವಾರ ರಾತ್ರಿ ಮುಂಬೈನ (Mumbai) ರೆಸ್ಟೋರೆಂಟ್‌ನಲ್ಲಿ ಜಂಟಿಯಾಗಿ ಡಿನ್ನರ್ (Dinner) ಮಾಡಿದ್ದಾರೆ. ಆ ವಿಡಿಯೋ ವೈರಲ್ ಆಗಿದೆ. ಇದನ್ನೂ ಓದಿ: ಕರ್ಣನಿಗೆ ಗ್ರೀನ್ ಸಿಗ್ನಲ್ – ಭವ್ಯಾ, ನಮ್ರತಾ, ಕಿರಣ್ ರಾಜ್ ತ್ರಿವಳಿ ಆಟ
View this post on Instagram
ಕಾರ್ತಿಕ್ ಆರ್ಯನ್ ಜೊತೆ ಶ್ರೀಲೀಲಾರ ಇಷ್ಕ್ ಕಥೆ ಗುಟ್ಟಾಗಿ ಉಳಿದಿಲ್ಲ. ಆದರೆ ಇದೆಲ್ಲಾ ಬಾಲಿವುಡ್‌ನಲ್ಲಿ ಸೀರಿಯಸ್ ಕಥೆ ಅಲ್ಲವೇ ಅಲ್ಲ. ಲವ್ವು, ಬ್ರೇಕಪ್ಪು ಎಲ್ಲವೂ ಸಾಮಾನ್ಯ ಎನ್ನುವ ಹೊತ್ತಲ್ಲಿ ಅನೇಕ ತಿಂಗಳುಗಳ ಬಳಿಕ ಮತ್ತೆ ಶ್ರೀಲೀಲಾ ಹಾಗೂ ಕಾರ್ತಿಕ್ ಆರ್ಯನ್ ಕದ್ದು-ಮುಚ್ಚಿ ಸುತ್ತಾಡಿರೋದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಡೆವಿಲ್ ಸಿನಿಮಾದಲ್ಲಿ ನಟಿಸಿಲ್ಲ ದರ್ಶನ್ ಪುತ್ರ
ಸಿನಿಮಾದಲ್ಲಿ ಸ್ಕ್ರೀನ್ ಶೇರ್ ಸಮಯದ ಹೊರತಾಗಿಯೂ ಇಬ್ಬರಲ್ಲಿ ಬಹಳ ಆತ್ಮೀಯತೆ ಇದ್ದ ವಿಚಾರ ಆಗಾಗ ಬಾಲಿವುಡ್ ಪಡಸಾಲೆಯಲ್ಲಿ ಚರ್ಚೆಯಾಗುತ್ತೆ. ಅದಕ್ಕೆ ಸಾಕ್ಷಿ ಎನ್ನುವಂತೆ ಕಾರ್ತಿಕ್ ತಾಯಿ ಶ್ರೀಲೀಲಾ ಕುರಿತು ಒಳ್ಳೆಯ ಮಾತನ್ನಾಡಿದ್ದರು. ಅದಕ್ಕೂ ಮೀರಿ ಇಬ್ಬರೂ ಇನ್‌ಸ್ಟಾದಲ್ಲಿ ಒಂದು ರೊಮ್ಯಾಂಟಿಕ್ ಫೋಟೋ ಶೇರ್ ಮಾಡಿಕೊಂಡಿದ್ದರು. ಇದೀಗ ಇಬ್ಬರ ನಡುವೆ ಗ್ಯಾಪ್ ಆಗಿರಬಹುದು ಎಂದು ಊಹಿಸುವಷ್ಟರಲ್ಲೇ ರೆಸ್ಟೋರೆಂಟ್‌ನಲ್ಲಿ ಊಟ ಸವಿಯುವಾಗ ಸಿಕ್ಕಿಬಿದ್ದಿದೆ ಜೋಡಿ.
ಬಾಲಿವುಡ್‌ನ ಮೊದಲ ಚಿತ್ರ ಆಶಿಕಿ ಶೀರ್ಷಿಕೆಯಂತೆ ಕಾರ್ತಿಕ್‌ಗೆ ನಿಜಜೀವನದಲ್ಲೂ ಶ್ರೀಲೀಲಾ ಆಶಿಕಿಯಾದರಾ ಅನ್ನೋ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ.