ನಟಿ ಸಂಗೀತಾ ಸವಾಲಿಗೆ ತಲೆ ಶೇವ್ ಮಾಡಿಕೊಂಡ ಕಾರ್ತಿಕ್

Public TV
1 Min Read

ರು ವಾರಗಳನ್ನು ಕಳೆದು ಏಳನೇ ವಾರದಲ್ಲಿರುವ ಬಿಗ್‌ಬಾಸ್‌  (Bigg Boss Kannada) ಮನೆಯಲ್ಲಿ ‘ಕಾಂಪಿಟೇಷನ್‌ ಹೀಟ್‌’ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಬಿಸಿ ಈಗ ಸ್ಪರ್ಧಿಗಳ ತಲೆಬೋಳಿಸಿಕೊಳ್ಳುವವರೆಗೂ ಮುಟ್ಟಿದೆ. JioCinema ಬಿಡುಗಡೆ ಮಾಡಿರುವ ಪ್ರೊಮೋದಲ್ಲಿ ಕಾರ್ತಿಕ್‌ ಮತ್ತು ತುಕಾಲಿ ಸಂತೋಷ್‌ ಅವರ ತಲೆಯಲ್ಲಿ ಬೋಳಿಸುತ್ತಿರುವ ದೃಶ್ಯ ಜಾಹೀರಾಗಿದೆ.

ಮನೆಯನ್ನು ‘ಗಜಕೇಸರಿ’ ಮತ್ತು ‘ಸಂಪತ್ತಿಗೆ ಸವಾಲ್’ ಎಂಬ ಎರಡು ತಂಡಗಳನ್ನಾಗಿ ವಿಭಾಗಿಸಲಾಗಿದೆ. ‘ಗಜಕೇಸರಿ’ ತಂಡದಲ್ಲಿ ವಿನಯ್, ನಮ್ರತಾ, ಸಂಗೀತಾ (Sangeetha), ಸ್ನೇಹಿತ್, ಸಿರಿ, ಪ್ರತಾಪ್‌ ಇದ್ದಾರೆ. ‘ಸಂಪತ್ತಿಗೆ ಸವಾಲ್ ತಂಡದಲ್ಲಿ, ‘ಮೈಕಲ್, ನೀತು, ತನಿಷಾ, ವರ್ತೂರು, ಕಾರ್ತಿಕ್ ಮತ್ತು ತುಕಾಲಿ ಸಂತೋಷ್‌ (Tukali Santu) ಇದ್ದಾರೆ.

ಈ ತಂಡಗಳಿಗೆ ಬಿಗ್‌ಬಾಸ್ ಎದುರಾಳಿ ತಂಡಕ್ಕೆ ಒಂದಾದ ಮೇಲೆ ಒಂದರಂತೆ ಸವಾಲ್ ಹಾಕುವ ಟಾಸ್ಕ್ ಅನ್ನು ನೀಡಿದ್ದಾರೆ. ಅದರ ಭಾಗವಾಗಿ ಸಂಗೀತಾ, ತನ್ನ ಎದುರಾಳಿ ತಂಡದಲ್ಲಿರುವ ಕಾರ್ತಿಕ್ ಮತ್ತು ತುಕಾಲಿ ಅವರು ತಲೆಯನ್ನು ಕ್ಲೀನ್ ಶೇವ್ ಮಾಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ. ಇದಕ್ಕೆ ವಿರೋಧವೂ ವ್ಯಕ್ತವಾಗಿದೆ. ನಂತರದ ದೃಶ್ಯದಲ್ಲಿ ಕಾರ್ತಿಕ್ (Karthik), ‘ಗೇಮ್‌ಗಾಗಿ, ತಂಡಕ್ಕಾಗಿ ಏನನ್ನಾದ್ರೂ ಮಾಡ್ತೀನಿ. ಬೋಳಿಸಿಕೊಂಡ್ರೂ ಕೂದಲು ಮತ್ತೆ ಬರತ್ತೆ’ ಎಂದು ಹೇಳಿ ತಲೆಬೋಳಿಸಿಕೊಳ್ಳು ಕೂತಿದ್ದಾರೆ.

ನಿನ್ನೆಯ ನಾಮಿನೇಷನ್ ಟಾಸ್ಕ್‌ನಲ್ಲಿ ಸಂಗೀತಾ, ಕಾರ್ತಿಕ್‌ಗೇ ನಾಮಿನೇಷನ್ ಮಾಡಲು ಅಧಿಕಾರ ಕೊಟ್ಟಿದ್ದರು. ಹಾಗೆಯೇ ಕಾರ್ತಿಕ್ ಕೂಡ ಸಂಗೀತಾಗೆ ನಾಮಿನೇಷನ್‌ ಅಧಿಕಾರ ಕೊಟ್ಟಿದ್ದರು. ಕಾರ್ತಿಕ್ ಜೊತೆಗೆ ಇಷ್ಟು ಸ್ನೇಹದಿಂದ ಇದ್ದ ಸಂಗೀತಾ ಅವರೇ ಕಾರ್ತಿಕ್‌ಗೆ ತಲೆಬೋಳಿಸಿಕೊಳ್ಳುವ ಸವಾಲ್ ಹಾಕಿದ್ದಾರೆ. ಕಾರ್ತಿಕ್ ಇದನ್ನು ಸ್ವೀಕರಿಸಿದ್ದಾರೆ ಕೂಡ.

 

ಇದನ್ನೆಲ್ಲ ದಿಗ್ಮೂಢರಾಗಿ ನರೇಂದ್ರ (ಬ್ರಹ್ಮಾಂಡ ಗುರೂಜಿ) ನೋಡುತ್ತ ಕೂತಿರುವುದೂ ಪ್ರೋಮೊದಲ್ಲಿ ಸೆರೆಯಾಗಿದೆ.  ಹಾಗಾದ್ರೆ ಏನಾಗ್ತಿದೆ ಬಿಗ್‌ಬಾಸ್ ಮನೆಯಲ್ಲಿ? ಗೆಲ್ಲುವ ಹಟ ಯಾವ ಅತಿರೇಕಕ್ಕೆ ಸ್ಪರ್ಧಿಗಳನ್ನು ತೆಗೆದುಕೊಂಡು ಹೋಗುತ್ತಿದೆ? ಇದಕ್ಕೆಲ್ಲ ಕಡಿವಾಣ ಬೀಳುತ್ತದೆಯೇ? ಕಾದು ನೋಡಬೇಕಿದೆ.

Share This Article