ಅನ್ನಕ್ಕಾಗಿ ಕಾರ್ತಿಕ್‌ ಕೂಗಾಟ- ಗಳಗಳನೇ ಅತ್ತ ಸಂಗೀತಾ

Public TV
2 Min Read

ದೊಡ್ಮನೆಯಲ್ಲಿ ಸಂಗೀತಾ-ಕಾರ್ತಿಕ್ (Karthik Mahesh) ದೂರಾ ಆಗಿದ್ದಾರೆ. ಒಬ್ಬರ ಮೇಲೆ ಒಬ್ಬರು ಜಿದ್ದು ಸಾಧಿಸುತ್ತಿದ್ದಾರೆ. ಅದು ನೋಡೋರ ಪ್ರೇಕ್ಷಕರ ಕಣ್ಣಿಗೂ ಎದ್ದು ಕಾಣ್ತಿದೆ. ತುತ್ತು ಅನ್ನಕ್ಕೂ ಜಗಳ ಆಡಿದ್ದಾರೆ. ಕಾರ್ತಿಕ್ ಮಾತಿನಿಂದ ‘ಚಾರ್ಲಿ’ ಬೆಡಗಿ ಸಂಗೀತಾ (Sangeetha Sringeri) ಗಳಗಳನೆ ಅತ್ತಿದ್ದಾರೆ. ಕಾರ್ತಿಕ್ ಅಂದ ಆ ಮಾತಿನಿಂದ ನಟಿ ಕಣ್ಣೀರಿಟ್ಟಿದ್ದಾರೆ.

ಬಿಗ್‌ ಬಾಸ್‌ ಮನೆಯಲ್ಲಿ ಅನ್ನದ ವಿಚಾರಕ್ಕೆ ಕೂಗಾಡಿದ್ದಾರೆ. ಟಾಸ್ಕ್ ಮಧ್ಯೆ ‘ಬಿಗ್ ಬಾಸ್’ (Bigg Boss) ವಿರಾಮ ಘೋಷಿಸಿದರು. ಈ ವೇಳೆ ಊಟ ಮಾಡುವ ಸಂದರ್ಭದಲ್ಲಿ ಎಲ್ಲರೂ ನೋಡಿ ಬಡಿಸಿಕೊಳ್ಳಿ ಅಂತ ಸಿರಿ ಹೇಳುತ್ತಲೇ ಇದ್ದರು. ಆದರೆ, ಸ್ನೇಹಿತ್ ಕೊಂಚ ಜಾಸ್ತಿ ಅನ್ನ ಬಡಿಸಿಕೊಂಡರು. ಎಲ್ಲರಿಗೂ ಅನ್ನ ಸಾಲಲ್ಲ ಅಂತ ಗಮನಿಸಿದ ಕ್ಯಾಪ್ಟನ್ ಕಾರ್ತಿಕ್ ಎಲ್ಲರ ಮೇಲೆ ಕೂಗಾಡಿದರು. ಇದನ್ನೂ ಓದಿ:ಸುದೀಪ್ ನಟನೆಯ ‘ಮ್ಯಾಕ್ಸ್’ ಹುಡುಗೀರು

ಕಾರ್ತಿಕ್ ಕೂಗಾಡಿದ್ದು ಸ್ನೇಹಿತ್ ಕುರಿತಾಗಿ. ಆದರೆ, ಸ್ನೇಹಿತ್ (Snehith Gowda) ಹೆಸರನ್ನ ಕಾರ್ತಿಕ್ ಹೇಳಲಿಲ್ಲ. ಇತ್ತ ಸಂಗೀತಾ ಅದನ್ನ ಪರ್ಸನಲ್ ಆಗಿ ತಗೊಂಡು ತನಗೆ ಕಾರ್ತಿಕ್ ಹೇಳಿದ್ರೂ ಎಂದು ಭಾವಿಸಿ ಗಳಗಳನೆ ಕಣ್ಣೀರು ಸುರಿಸಿದರು. ಕಾರ್ತಿಕ್ ಕೂಗಾಡಿದ್ದಕ್ಕೆ ಗಳಗಳನೆ ಅತ್ತು ಸಂಗೀತಾ ಗೋಳಾಡಿದರು.

ಸಂಗೀತಾಗೆ ನಮ್ರತಾ, ವಿನಯ್ ಯಾರು ಏನೇ ಹೇಳಿದರೂ ಊಟ ಮಾಡದೇ ಕಣ್ಣೀರು ಸುರಿಸಿದ್ದರು. ಎಲ್ಲರೂ ಕೆಲಸ ಮಾಡೋದು ಊಟಕ್ಕಾಗಿಯೇ ಊಟ ಮಾಡುವಾಗ ಕಾರ್ತಿಕ್ ಹೀಗೆ ಮಾತನಾಡಬಾರದಿತ್ತು ಎಂದು ನಟಿ ಭಾವುಕರಾಗಿದ್ದಾರೆ. ಇತ್ತ ನಾನು ಹೇಳಿದ್ದು ಸಂಗೀತಾಗೆ ಅಲ್ಲ, ಅದಕ್ಕೆ ಅತ್ರೆ ನಾನೇನು ಮಾಡೋಕೆ ಆಗಲ್ಲ ಅಂತ ಕಾರ್ತಿಕ್ ಖಡಕ್ ಆಗಿ ಮಾತನಾಡಿದ್ದಾರೆ.

ವಿನಯ್ & ಗ್ಯಾಂಗ್ ಊಟ ತಿನ್ನಿಸುವ ಪ್ರಯತ್ನ ಮಾಡಿದ್ರು. ಒಟ್ನಲ್ಲಿ ಚೆನ್ನಾಗಿದ್ದ ಕಾರ್ತಿಕ್ – ಸಂಗೀತಾ ನಡುವೆ ಬಿರುಕಾಗಿದೆ. ವೈಯಕ್ತಿಕ ಸಮಸ್ಯೆಗಳು ಆಟದ ವಿಚಾರದಲ್ಲೂ ಎದ್ದು ಕಾಣ್ತಿದೆ. ಕಳೆದ ವಾರದ ಸಂಗೀತಾ, ತನಿಷಾ, ಕಾರ್ತಿಕ್ ಜಗಳ ಇನ್ನೂ ಮುಂದುವರೆದಿದೆ. ಇಬ್ಬರ ಕೋಲ್ಡ್ ವಾರ್ ನಡುವೆ ಬಿಗ್ ಬಾಸ್ ಟಾಸ್ಕ್‌ ವಾರ್‌ನ ಮೂವರು ಗೆಲ್ಲಲೇಬೇಕು ಅಂತ ಪಣ ತೊಟ್ಟಿದ್ದಾರೆ.

ಕಿಚ್ಚನ ಕಳೆದ ವಾರದ ಪಾಠಕ್ಕೆ ಮಣಿಯದ ಸಂಗೀತಾ ನಡೆಗೆ ಫ್ಯಾನ್ಸ್ ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ತುಕಾಲಿ, ಕಾರ್ತಿಕ್ ಗೆ ತಲೆ ಬೊಳಿಸಿದ ವಿಚಾರ, ಸಂಗೀತಾ ನಡೆ ಇವೆಲ್ಲವೂ ಸಿಕ್ಕಾಪಟ್ಟೆ ಚರ್ಚೆ ಆಗ್ತಿದೆ. ಲವ್ ಬರ್ಡ್ಸ್‌ ಆಗಿದ್ದ ಈ ಜೋಡಿ ಮತ್ತೆ ಒಂದಾಗ್ತಾರಾ ಕಾಯಬೇಕಿದೆ.

Share This Article