ಧನಂಜಯ್ ಅತ್ರೆ ‘ಕರ್ಷಣಂ’ ನ.23ಕ್ಕೆ ರಿಲೀಸ್

Public TV
2 Min Read

ಬೆಂಗಳೂರು: ಧನಂಜಯ್ ಅತ್ರೆ ನಾಯಕರಾಗಿ ಪಾದಾರ್ಪಣೆ ಮಾಡುತ್ತಿರುವ ಚಿತ್ರ ಕರ್ಷಣಂ. ಇತ್ತೀಚೆಗಷ್ಟೇ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಅದರ ಮೂಲಕವೇ ಈ ಚಿತ್ರ ವಿಶೇಷವಾದೊಂದು ಕಥೆ ಹೊಂದಿದೆ ಎಂಬ ಸ್ಪಷ್ಟ ಸುಳಿವು ಪ್ರೇಕ್ಷಕರಿಗೆ ಸಿಕ್ಕಿದೆ. ಈ ಟ್ರೇಲರ್ ಕೂಡಾ ಸಖತ್ ಸೆನ್ಸೇಷನ್ ಸೃಷ್ಟಿ ಮಾಡಿ ಟ್ರೆಂಡಿಂಗ್‍ನಲ್ಲಿದೆ. ಈ ಚಿತ್ರದ ಅಸಲೀ ಖದರ್ ತೆರೆ ಮೇಲೆ ಅನಾವರಣಗೊಳ್ಳುವ ಕ್ಷಣವೂ ಹತ್ತಿರವಾಗಿದೆ! ನವೆಂಬರ್ 23ರಂದು ಚಿತ್ರ ರಿಲೀಸ್ ಆಗಲಿದೆ.

ಹೆಸರಲ್ಲಿಯೇ ಮಾಸ್ ಫೀಲೊಂದನ್ನು ರವಾನಿಸುವಂತಿರೋ ಕರ್ಷಣಂ ಎಂಬ ಟೈಟಲ್ಲು ಕಥೆ ಪೂರಕವಾಗಿಯೇ ಹುಟ್ಟಿಕೊಂಡಿರುವಂಥಾದ್ದು. ಗೌರಿ ಅತ್ರೆ ಬರೆದ ಕಥಾ ಎಳೆಯನ್ನು ಚಿತ್ರಕಥೆಯ ಮೂಲಕ ಮತ್ತಷ್ಟು ಪರಿಣಾಮಕಾರಿಯಾಗಿಸಿದ ಶರವಣರಿಗೆ ಧನಂಜಯ್ ಅತ್ರೆ ಬಯಸಿದಂತೆಯೇ ಇಡೀ ಚಿತ್ರವನ್ನು ರೂಪಿಸಿಕೊಟ್ಟ ತೃಪ್ತಿಯಿದೆ. ಅದರಂತೆಯೇ ತಾವು ದಶಕಗಳ ಕಾಲ ಎಂಥಾ ಚಿತ್ರವನ್ನು ನಿರ್ದೇಶನ ಮಾಡಬೇಕೆಂದು ಕನಸು ಕಂಡಿದ್ದರೋ ಅಂತಾದ್ದೇ ಚಿತ್ರವನ್ನು ತಯಾರು ಮಾಡಿದ ಖುಷಿಯೂ ಶರವಣರದ್ದು.

ಇದು ಸ್ಲಂ ಹಿನ್ನೆಲೆಯಲ್ಲಿ ನಡೆಯುವ ಸಸ್ಪೆನ್ಸ್ ಥ್ರಿಲ್ಲರ್ ಕಥೆ. ಈ ಜಗತ್ತಿನಲ್ಲಿ ಪ್ರತಿಯೊಬ್ಬರಿಗೂ ಏನಾದರೊಂದು ಸಾಧಿಸುವ ಹಂಬಲವಿರುತ್ತದೆ. ಆದರೆ ಅದಕ್ಕಾಗಿ ಯಾರನ್ನೂ ಬಲಿಯಾಗಿಸದೇ, ಯಾರ ಕನಸನ್ನೂ ಚಿವುಟದಿರೋ ಪರಿಶ್ರಮದ ಹಾದಿಯಲ್ಲಿ ನಡೆದರೆ ಮಾತ್ರವೇ ಸಿಕ್ಕ ಗೆಲುವನ್ನು ಸಂಭ್ರಮಿಸಲು ಸಾಧ್ಯವಾಗುತ್ತೆ. ಆದರೆ ಸಾಧನೆಗೆ ಇನ್ನೊಬ್ಬರನ್ನು ತುಳಿಯ ಬಾರದು. ಹಾಗೆ ಮಾಡಿದರೆ ಪರಿಣಾಮ ಏನಾಗುತ್ತದೆ ಎಂಬ ಸಂದೇಶವನ್ನೂ ಕೂಡಾ ಈ ಚಿತ್ರದಲ್ಲಿ ಸಾರಲಾಗಿದೆಯಂತೆ.

ಈ ಚಿತ್ರದ ಮೂಲಕವೇ ಗಾಯಕರಾಗಿ ಹೆಸರು ಮಾಡಿದ್ದ ಹೇಮಂತ್ ಸಂಗೀತ ನಿರ್ದೇಶಕರಾಗಿಯೂ ಭಡ್ತಿ ಹೊಂದಿದ್ದಾರೆ. ವಿಶೇಷವೆಂದರೆ, ಹೇಮಂತ್ ಎಂಬ ಪ್ರತಿಭೆ ಪ್ರೀತ್ಸೆ ಚಿತ್ರದ ಪ್ರೀತ್ಸೆ ಪ್ರೀತ್ಸೆ ಎಂಬ ಹಾಡಿನ ಮೂಲಕ ಖ್ಯಾತರಾಗುವಂತೆ ಮಾಡಿದ್ದೇ ರಾಕ್ ಲೈನ್ ವೆಂಕಟೇಶ್. ಹೇಮಂತ್ ಕಂಠ ಟ್ರ್ಯಾಕ್‍ನಲ್ಲಿಯೇ ಲೀನವಾಗೋದನ್ನು ತಪ್ಪಿಸಿ ಆ ಹಾಡು ಅವರ ಧ್ವನಿಯಲ್ಲಿಯೇ ಮೂಡಿ ಬರುವಂತೆ ಕಾಳಜಿ ವಹಿಸಿದ್ದವರೂ ಇದೇ ರಾಕ್‍ಲೈನ್. ಇದೀಗ ಹೇಮಂತ್ ಮೊದಲ ಸಲ ಸಂಗೀತ ನೀಡಿರುವ ಕರ್ಷಣಂ ಚಿತ್ರದ ಹಾಗಳು ಕೂಡಾ ಹಿಟ್ ಆಗಿವೆ.

https://www.youtube.com/watch?v=9KI8Yv5aysQ

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Share This Article
Leave a Comment

Leave a Reply

Your email address will not be published. Required fields are marked *