ರಾಜ್ಯದಲ್ಲಿ ಮಳೆಯ ಪ್ರಮಾಣ ಕೊಂಚ ಇಳಿಕೆಯಾಗಿದೆ. ಕರಾವಳಿ ಜಿಲ್ಲೆಗಳಿಗೆ ರೆಡ್ ಅಲರ್ಟ್ ಬದಲಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, 115 ಮಿಮೀನಿಂದ 204 ಮಿಮೀವರೆಗೆ ಭಾರೀ ಮಳೆ ಸಾಧ್ಯತೆಯಿದೆ.
ಪಶ್ಚಿಮ ಘಟ್ಟದ ಜಿಲ್ಲೆಗಳಾದ ಶಿವಮೊಗ್ಗ, ಕೊಡಗು, ಚಿಕ್ಕಮಗಳೂರಿಗೆ ಇಂದು ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಮತ್ತೆ 3 ದಿನಗಳ ಕಾಲ ಹಾಸನ ಸೇರಿದಂತೆ ಪ.ಘ ಜಿಲ್ಲೆಗಳಿಗೆ ಹಾಗೂ ಉತ್ತರ ಒಳನಾಡಿನ ಜಿಲ್ಲೆಗಳಿಗೆ ಮುಂದಿನ 5 ದಿನವೂ ಯಲ್ಲೋ ಅಲರ್ಟ್ ಘೋಷಿಸಲಾಗಿದೆ. ಹಾವೇರಿ ಹೊರತುಪಡಿಸಿ ಬೆಳಗಾವಿ, ಬೀದರ್, ಧಾರವಾಡ, ಹಾವೇರಿ, ಕಲಬುರ್ಗಿ, ವಿಜಯಪುರ, ಯಾದಗಿರಿ ಸೇರಿದಂತೆ ಉ. ಒಳನಾಡು ಜಿಲ್ಲೆಗಳಿಗೆ ಇಂದು ಮಳೆಯಾಗುವ ಸಾಧ್ಯತೆ ಕಡಿಮೆ ಆಗುವ ಸಾಧ್ಯತೆಯಿದೆ.
ನಗರಗಳ ಹವಾಮಾನ ವರದಿ:
ಬೆಂಗಳೂರು: 24-19
ಮಂಗಳೂರು: 27-25
ಶಿವಮೊಗ್ಗ: 23-21
ಬೆಳಗಾವಿ: 22-20
ಮೈಸೂರು: 25-20
ಮಂಡ್ಯ: 27-21
ಕೊಡಗು: 20-17
ರಾಮನಗರ: 26-21
ಹಾಸನ: 22-18
ಚಾಮರಾಜನಗರ: 26-21
ಚಿಕ್ಕಬಳ್ಳಾಪುರ: 25-20
ಕೋಲಾರ: 27-21
ತುಮಕೂರು: 25-20
ಉಡುಪಿ: 27-25
ಕಾರವಾರ: 27-25
ಚಿಕ್ಕಮಗಳೂರು: 21-18
ದಾವಣಗೆರೆ: 24-21
ಚಿತ್ರದುರ್ಗ: 24-21
ಹಾವೇರಿ: 24-21
ಬಳ್ಳಾರಿ: 26-23
ಗದಗ: 23-21
ಕೊಪ್ಪಳ: 25-22
ರಾಯಚೂರು: 26-23
ಯಾದಗಿರಿ: 25-22
ವಿಜಯಪುರ: 23-21
ಬೀದರ್: 22-20
ಕಲಬುರಗಿ: 24-22
ಬಾಗಲಕೋಟೆ: 25-22