ರಾಜ್ಯದ ಕರಾವಳಿ ಭಾಗದಲ್ಲಿ ಗುರುವಾರದಿಂದ ಮೂರು ದಿನಗಳ ಕಾಲ ಬಹುತೇಕ ಕಡೆ ಮಳೆಯಾಗುವ ಸಾಧ್ಯತೆಯಿದ್ದು, ಸೆಪ್ಟೆಂಬರ್ 8 ಮತ್ತು 9ರಂದು ಯೆಲ್ಲೋ ಅಲರ್ಟ್ ನೀಡಲಾಗಿದೆ.
ಗುರುವಾರ ಬೀದರ್ ಮತ್ತು ಕಲಬುರಗಿಗೆ ಯೆಲ್ಲೋ ಅಲರ್ಟ್ ನೀಡಿದ್ದು, ಸೆಪ್ಟೆಂಬರ್ 8 ಮತ್ತು 9ರಂದು ಕೊಡಗು ಜಿಲ್ಲೆಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರಕ್ಕೆ ಮುಂದಿನ ಐದು ದಿನ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದ್ದು, ಮೀನುಗಾರರಿಗೆ ಸೆಪ್ಟೆಂಬರ್ 6 ಹಾಗೂ 7ರಂದು ಎಚ್ಚರಿಕೆ ನೀಡಲಾಗಿದೆ.
ಕರಾವಳಿಯಲ್ಲಿ ಗಂಟೆಗೆ 55 ಕಿಲೋಮೀಟರ್ ವೇಗದಲ್ಲಿ ಬಿರುಗಾಳಿ ಬೀಸುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ. ಸೆಪ್ಟೆಂಬರ್ ತಿಂಗಳ ಮಳೆ ಮಳೆ ಕೊರತೆಯನ್ನು ನಿಗಿಸಲಿದ್ದು, ಸೆಪ್ಟೆಂಬರ್ 8-14ರ ಒಳಗೆ ವಾಡಿಕೆಯಿಂದ ಹೆಚ್ಚು ಮಳೆಯಾಗಲಿದೆ. ರಾಜ್ಯದಲ್ಲಿ 19% ಮಳೆ ಕೊರತೆಯಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಕನಿಷ್ಠ 17 ಡಿಗ್ರಿ, ಗರಿಷ್ಠ 22 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.
ನಗರಗಳ ಹವಾಮಾನ ವರದಿ:
ಬೆಂಗಳೂರು: 28-20
ಮಂಗಳೂರು: 28-24
ಶಿವಮೊಗ್ಗ: 29-22
ಬೆಳಗಾವಿ: 28-21
ಮೈಸೂರು: 28-21
ಮಂಡ್ಯ: 29-22
ಮಡಿಕೇರಿ: 22-17
ರಾಮನಗರ: 29-21
ಹಾಸನ: 27-19
ಚಾಮರಾಜನಗರ: 28-22
ಚಿಕ್ಕಬಳ್ಳಾಪುರ: 28-19
ಕೋಲಾರ: 29-21
ತುಮಕೂರು: 29-21
ಉಡುಪಿ: 29-24
ಕಾರವಾರ: 30-26
ಚಿಕ್ಕಮಗಳೂರು: 26-19
ದಾವಣಗೆರೆ: 30-22
ಹುಬ್ಬಳ್ಳಿ: 30-22
ಚಿತ್ರದುರ್ಗ: 29-21
ಹಾವೇರಿ: 29-22
ಬಳ್ಳಾರಿ: 33-23
ಗದಗ: 31-22
ಕೊಪ್ಪಳ: 22-23
ರಾಯಚೂರು: 32-24
ಯಾದಗಿರಿ: 30-23
ವಿಜಯಪುರ: 30-23
ಬೀದರ್: 26-22
ಕಲಬುರಗಿ: 29-23
ಬಾಗಲಕೋಟೆ: 32-23
Web Stories