ಬೆಂಗಳೂರಿನಲ್ಲಿ ಈ ಬಾರಿ ಬಿಸಿಲಿನ ಅಬ್ಬರ ಕೂಡ ಜೋರಾಗಿರಲಿದೆ ಎಂಬುದಾಗಿ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಸಾಮಾನ್ಯವಾಗಿ ಪ್ರತಿ ವರ್ಷ ಏಪ್ರಿಲ್ ಬಳಿಕ ಬಿಸಿಲು ಹೆಚ್ಚಾಗುತ್ತಿತ್ತು. ಆದರೆ ಈ ಬಾರಿ 2-3 ವಾರ ಮುಂಚೆಯೇ ಸೂರ್ಯನ ಅಬ್ಬರ ಶುರುವಾಗಲಿದೆ. ಮಾರ್ಚ್ ಅಂತ್ಯದಿಣದಲೇ ಬಿಸಿಲಿನ ತಾಪಮಾನ ಹೆಚ್ಚಾಗಲಿದೆ. ಮಕ್ಕಳು, ವಯಸ್ಸಾದವರ ಸ್ವಲ್ಪ ಎಚ್ಚರಿಕೆ ವಹಿಸುವಂತೆ ಇಲಾಖೆ ಸಲಹೆ ನೀಡಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 16 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಬಾಗಲಕೋಟೆಯಲ್ಲಿ ಗರಿಷ್ಠ ತಾಪಮಾನ 37 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.
ನಗರಗಳ ಹವಾಮಾನ ವರದಿ:
ಬೆಂಗಳೂರು: 31-16
ಮಂಗಳೂರು: 34-23
ಶಿವಮೊಗ್ಗ: 37-18
ಬೆಳಗಾವಿ: 36-20
ಮೈಸೂರು: 34-16
ಮಂಡ್ಯ: 34-16
ಮಡಿಕೇರಿ: 32-14
ರಾಮನಗರ: 33-16
ಹಾಸನ: 33-16
ಚಾಮರಾಜನಗರ: 33-17
ಚಿಕ್ಕಬಳ್ಳಾಪುರ: 31-14
ಕೋಲಾರ: 31-14
ತುಮಕೂರು: 33-17
ಉಡುಪಿ: 35-24
ಕಾರವಾರ: 34-25
ಚಿಕ್ಕಮಗಳೂರು: 33-16
ದಾವಣಗೆರೆ: 36-19
ಹುಬ್ಬಳ್ಳಿ: 36-20
ಚಿತ್ರದುರ್ಗ: 34-18
ಹಾವೇರಿ: 37-19
ಬಳ್ಳಾರಿ: 36-20
ಗದಗ: 36-21
ಕೊಪ್ಪಳ: 36-21
ರಾಯಚೂರು: 36-19
ಯಾದಗಿರಿ: 36-20
ವಿಜಯಪುರ: 36-22
ಬೀದರ್: 34-20
ಕಲಬುರಗಿ: 36-20
ಬಾಗಲಕೋಟೆ: 37-21