ರಾಜ್ಯದ ಹವಾಮಾನ ವರದಿ: 02-12-2023

Public TV
1 Min Read

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮುಂದಿನ ನಾಲ್ಕು ದಿನಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬೆಂಗಳೂರಿನಲ್ಲಿ ಮುಂಜಾನೆ ವೇಳೆಗೆ ಮೋಡ ಕವಿದ ವಾತಾವರಣ ಇರಲಿದ್ದು, ಸಂಜೆ ಮಳೆಯಾಗುವ ಸಾಧ್ಯತೆ ಇದೆ. ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರ ಸೇರಿದಂತೆ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಭಾಗಗಳಲ್ಲೂ ಮಳೆಯಾಗಲಿದೆ. ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಇಲಾಖೆ ಎಚ್ಚರಿಕೆ ನೀಡಿದೆ.

ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ 19 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.

ನಗರಗಳ ಹವಾಮಾನ ವರದಿ:
ಬೆಂಗಳೂರು: 27-20
ಮಂಗಳೂರು: 33-26
ಶಿವಮೊಗ್ಗ: 32-21
ಬೆಳಗಾವಿ: 29-20
ಮೈಸೂರು: 31-21

ಮಂಡ್ಯ: 30-21
ಮಡಿಕೇರಿ: 31-19
ರಾಮನಗರ: 29-21
ಹಾಸನ: 29-19
ಚಾಮರಾಜನಗರ: 30-21
ಚಿಕ್ಕಬಳ್ಳಾಪುರ: 26-19

ಕೋಲಾರ: 25-19
ತುಮಕೂರು: 27-20
ಉಡುಪಿ: 33-24
ಕಾರವಾರ: 33-25
ಚಿಕ್ಕಮಗಳೂರು: 28-19
ದಾವಣಗೆರೆ: 31-22

ಹುಬ್ಬಳ್ಳಿ: 31-21
ಚಿತ್ರದುರ್ಗ: 29-21
ಹಾವೇರಿ: 32-21
ಬಳ್ಳಾರಿ: 31-22
ಗದಗ: 29-21
ಕೊಪ್ಪಳ: 31-22

weather

ರಾಯಚೂರು: 32-22
ಯಾದಗಿರಿ: 31-22
ವಿಜಯಪುರ: 30-21
ಬೀದರ್: 29-20
ಕಲಬುರಗಿ: 31-21
ಬಾಗಲಕೋಟೆ: 31-22

Share This Article