ಕರ್ನಾಟಕದ ವಿರುದ್ಧ ಉತ್ತಮ ಸ್ಥಿತಿಯಲ್ಲಿ ಜಮ್ಮು ಕಾಶ್ಮೀರ – ಜೋಶಿಗೆ KSCA ಗೌರವ

2 Min Read

ಹುಬ್ಬಳ್ಳಿ: ರಣಜಿ ಟ್ರೋಫಿ ಫೈನಲ್ (Ranji Trophy Final) ಪಂದ್ಯದಲ್ಲಿ ಕರ್ನಾಟಕದ (Karnataka) ವಿರುದ್ಧ ಜಮ್ಮು ಕಾಶ್ಮೀರ (Jammu Kashmir) ಉತ್ತಮ ಸ್ಥಿತಿಯಲ್ಲಿದ್ದು ಮೊದಲ ದಿನದ ಅಂತ್ಯಕ್ಕೆ 87 ಓವರ್‌ಗಳಲ್ಲಿ 284 ರನ್‌ ಪೇರಿಸಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟ್‌ ಬೀಸಿದ ಜಮ್ಮು ಕಾಶ್ಮೀರದ ಪರವಾಗಿ ಶುಭಂ ಪುಂಡಿರ್ (Shubham Pundir) ಔಟಾಗದೇ 117 ರನ್‌(221 ಎಸೆತ, 12 ಬೌಂಡರಿ, 2 ಸಿಕ್ಸ್‌), ಯಾವರ್ ಹಸನ್ 88 ರನ್‌(150 ರನ್‌, 13 ಬೌಂಡರಿ), ಅಬ್ದುಲ್‌ ಸಮಾದ್‌ ಔಟಾಗದೇ 52 ರನ್‌(67 ಎಸೆತ, 5 ಬೌಂಡರಿ 1 ಸಿಕ್ಸ್‌) ಹೊಡೆದಿದ್ದಾರೆ. ನಾಯಕ ಪರಾಸ್‌ ದೋಗ್ರಾ 9 ರನ್‌ಗಳಿಸಿ ಗಾಯಗೊಂಡು ನಿವೃತ್ತಿಯಾಗಿದ್ದಾರೆ.

ಮೊದಲ ವಿಕೆಟ್‌ 18 ರನ್‌ಗೆ ಬಿದ್ದರೂ ಎರಡನೇ ವಿಕೆಟಿಗೆ ಶುಭಂ ಮತ್ತು ಯಾವರ್‌ ಹಸನ್‌ 139 ರನ್‌ ಜೊತೆಯಾಟ, ನಾಲ್ಕನೇ ವಿಕೆಟಿಗೆ ಶುಭಂ ಮತ್ತು ಅಬ್ದುಲ್‌ ಸಮಾದ್‌ 144 ಎಸೆತಗಳಲ್ಲಿ 105 ರನ್‌ ಜೊತೆಯಾಟವಾಡಿದ್ದರಿಂದ ಜಮ್ಮು ಕಾಶ್ಮೀರದ ಮೊತ್ತ 280 ರನ್‌ಗಳ ಗಡಿಯನ್ನು ದಾಟಿದೆ. ಕರ್ನಾಟಕದ ಪರ ಐವರು ಬೌಲಿಂಗ್‌ ಮಾಡಿದರೂ 2 ವಿಕೆಟ್‌ಗಳನ್ನು ವೇಗಿ ಪ್ರಸಿದ್ಧ್‌ ಕೃಷ್ಣ(Prasidh Krishna) ಪಡೆದರು.

ಜೋಶಿಗೆ ಗೌರವ:
ಕ್ರಿಕೆಟ್‌ನಲ್ಲಿಅತ್ಯುತ್ತಮ ಸಾಧನೆ ಮಾಡಿರುವ ಉತ್ತರ ಕರ್ನಾಟಕದ ಹೆಮ್ಮೆ ಸುನೀಲ್ ಜೋಶಿಗೆ(Sunil Joshi) ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (KSCA) ದೊಡ್ಡ ಗೌರವ ನೀಡಿದೆ. ಹುಬ್ಬಳ್ಳಿಯ ಮೈದಾನದಲ್ಲಿ ಸುನೀಲ್ ಜೋಶಿ ಪೆವಿಲಿಯನ್ ಉದ್ಘಾಟನೆ ಮಾಡಿದೆ. ಇದನ್ನೂ ಓದಿ: ಮುಸ್ಲಿಂ ಆಟಗಾರರಿಲ್ಲದ್ದಕ್ಕೆ ಟೀಂ ಇಂಡಿಯಾ ಸೋತಿದೆ – ಧರ್ಮದ ಲೇಪನ ಹಚ್ಚಿದ ಓವೈಸಿ ಪಕ್ಷದ ನಾಯಕ

ಪಂದ್ಯದ ಊಟದ ವಿರಾಮದಲ್ಲಿ ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ ಪ್ರಸಾದ್ ಮತ್ತು ಬಿಸಿಸಿಐ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಸ್ವತಃ ಸುನೀಲ್ ಜೋಶಿ ಅವರೇ ತಮ್ಮ ಹೆಸರಿನ ಪೆವಿಲಿಯನ್ ಉದ್ಘಾಟನೆ ಮಾಡಿದರು. ಈ ಸಮಯದಲ್ಲಿ ಭಾವುಕರಾಗಿ ಕಣ್ಣಿರು ಹಾಕಿದ ಜೋಶಿ ತಮ್ಮ ಸಾಧನೆ ಗುರುತಿಸಿದ ಕೆಎಸ್‌ಸಿಎಗೆ ಧನ್ಯವಾದ ತಿಳಿಸಿದರು.

Share This Article