ಜಮ್ಮು-ಕಾಶ್ಮೀರದಲ್ಲಿ ವಿಜಯಪುರ ಮೂಲದ ಯೋಧ ಹುತಾತ್ಮ

By
1 Min Read

ವಿಜಯಪುರ: ಜಮ್ಮು-ಕಾಶ್ಮೀರದಲ್ಲಿ (Jammu And Kashmir) ರೆಜಿಮೆಂಟ್‌ 13ರಲ್ಲಿ ಹವಾಲ್ದಾರ್‌ ಆಗಿ ಸೇವೆ ಸಲ್ಲಿಸುತ್ತಿದ್ದ ವಿಜಯಪುರ ಮೂಲದ ಯೋಧ (Soldier) ಹುತಾತ್ಮರಾಗಿದ್ದಾರೆ.

ವಿಜಯಪುರ (Vijayapura) ಜಿಲ್ಲೆಯ ತಿಕೋಟಾದ ಯೋಧ ರಾಜು ಕರ್ಜಗಿ ಹುತಾತ್ಮರಾಗಿದ್ದಾರೆ. ಕುಟುಂಬಸ್ಥರಿಗೆ ನಿನ್ನೆ ಸಂಜೆ ಕರೆ ಮಾಡಿ ಹುತಾತ್ಮ ಆದ ಬಗ್ಗೆ ಮಾಹಿತಿ ನೀಡಲಾಗಿದೆ. ಆದರೆ ಯಾವ ರೀತಿ ಹುತಾತ್ಮರಾದರು. ಯಾವಾಗ ಮೃತದೇಹ ತರಲಾಗುತ್ತೆ ಎಂಬ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ. ಇದನ್ನೂ ಓದಿ: 1 ಕೋಟಿ ಲೀಟರ್ ಹಾಲು ಉತ್ಪಾದನೆ- KMF ಮೈಲಿಗಲ್ಲು: ಸಿಎಂ ಸಿದ್ದರಾಮಯ್ಯ

ಇದರಿಂದ ಕುಟುಂಬಸ್ಥರು ಚಿಂತಾಕ್ರಾಂತರಾಗಿದ್ದಾರೆ. ಇನ್ನೂ ಯೋಧನ ಬಗ್ಗೆ ಜಿಲ್ಲಾಡಾಳಿತಕ್ಕೂ ಯಾವುದೇ ಮಾಹಿತಿ ಸಿಕ್ಕಿಲ್ಲ. ಯೋಧ ಅಗಲಿಕೆಯಿಂದ ತಿಕೋಟ ತಾಲೂಕು ಸೇರಿದಂತೆ ಜಿಲ್ಲೆಯಲ್ಲಿ ನೀರವ ಮೌನ ಆವರಿಸಿದೆ.

ಹುತಾತ್ಮ ಯೋಧ ರಾಜು ಸಾವಿಗೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಸಂತಾಪ ಸೂಚಿಸಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ, ಹುತಾತ್ಮ ಯೋಧನ ಅಕಲಿಕೆಯಿಂದ ಭಾರತೀಯ ಸೇನೆಗೆ ತುಂಬಲಾರದ ನಷ್ಟ ಆಗಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ. ಕುಟುಂಬಸ್ಥರಿಗೆ ನೋವು ಭರಿಸುವ ಶಕ್ತಿ ನೀಡಲಿ ಎಂದು ಡಿಸಿಎಂ ಪೋಸ್ಟ್‌ ಮಾಡಿದ್ದಾರೆ. ಇದನ್ನೂ ಓದಿ: ಶಾಸಕರ ಬೆಂಬಲ ಪಡೆದೇ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ: ಮಹಾದೇವಪ್ಪ

Share This Article