ಶಿಕ್ಷಕರ ಅರ್ಹತಾ ಪರೀಕ್ಷೆಯ ಫಲಿತಾಂಶ ಪ್ರಕಟ- ಚೆಕ್‌ ಮಾಡೋದು ಹೇಗೆ?

Public TV
1 Min Read

ಬೆಂಗಳೂರು: ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆಯು 2022ನೇ ಸಾಲಿನ ಶಿಕ್ಷಕರ ಅರ್ಹತಾ ಪರೀಕ್ಷೆಯ ಫಲಿತಾಂಶ (KARTET Result ) ಪ್ರಕಟವಾಗಿದೆ.

ಪರೀಕ್ಷೆ ಬರೆದ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್‌ಸೈಟ್‌ www.schooleducation.kar.nic.in ಭೇಟಿ ನೀಡಿ ಪರಿಶೀಲಿಸಬಹುದು.  ಇದನ್ನೂ ಓದಿ: ತಂದೆಯ ಸಾಧನೆ ಸರಿಗಟ್ಟಿದ ಮಗ – ಮೊದಲ ರಣಜಿ ಪಂದ್ಯದಲ್ಲೇ ಅರ್ಜುನ್‌ ತೆಂಡೂಲ್ಕರ್‌ ಶತಕ

ಒಟ್ಟು ಅಭ್ಯರ್ಥಿಗಳ ಪೈಕಿ ಪತ್ರಿಕೆ -1 ರಲ್ಲಿ 20,070 ಅಭ್ಯರ್ಥಿಗಳು, ಪತ್ರಿಕೆ 2 ರಲ್ಲಿ 41,857 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಟ್ವೀಟ್‌ ಮಾಡುವ ಮೂಲಕ ತಿಳಿಸಿದ್ದಾರೆ.

ಚೆಕ್‌ ಮಾಡುವುದು ಹೇಗೆ?
ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆಯ ವೆಬ್‌ಸೈಟ್‌ಗೆ ಭೇಟಿ ನೀಡಿ  KARTET-2022 Results’ ಎಂಬಲ್ಲಿ ಕ್ಲಿಕ್‌ ಮಾಡಿ.  ಈ ಪುಟದಲ್ಲಿ ಪರೀಕ್ಷೆ ಅಭ್ಯರ್ಥಿಗಳು ತಮ್ಮ ಅಪ್ಲಿಕೇಶನ್‌ ನಂಬರ್ ಮತ್ತು ಜನ್ಮ ದಿನಾಂಕ ಮಾಹಿತಿಯನ್ನು ನೀಡಿ ‘Submit’ ಬಟನ್‌ ಕ್ಲಿಕ್‌ ಮಾಡಿದಾಗ ಫಲಿತಾಂಶ ಓಪನ್ ಆಗುತ್ತದೆ. ಬಳಿಕ ಡೌನ್‌ಲೋಡ್‌ ಮಾಡಿ ಪ್ರಿಂಟ್‌ ತೆಗೆದುಕೊಳ್ಳಬಹುದು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *