ಬೂಟ್ ಪಾಲಿಶ್‌ ಮಾಡಿ ಸರ್ಕಾರದ ಖಾತೆಗೆ ಹಣ ಜಮೆ ಮಾಡಲು ಮುಂದಾದ ಕರವೇ

Public TV
1 Min Read

ಉಡುಪಿ: ರಾಜ್ಯದ 23 ಜಿಲ್ಲೆಗಳ 122 ಡಯಾಲಿಸಿಸ್ ಘಟಕಗಳಲ್ಲಿ ಸಮಸ್ಯೆಗಳಿದ್ದು, ಅದನ್ನು ಕೂಡಲೇ ಬಗಹರಿಸಬೇಕು ಎಂದು ಒತ್ತಾಯಿಸಿ ಉಡುಪಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯು ಅಹೋರಾತ್ರಿ ಪ್ರತಿಭಟನೆ ನಡೆಯುತ್ತಿದೆ. ಡಯಾಲಿಸಿಸ್ ಯಂತ್ರಗಳನ್ನು ಸರಿಪಡಿಸಲು ಸರ್ಕಾರದ ಬಳಿ ಹಣವಿಲ್ಲ ಎಂಬ ಸುದ್ದಿ ತಿಳಿದು, ಬೂಟ್‌ ಪಾಲಿಶ್‌ ಮಾಡಿ ಸರ್ಕಾರದ ಖಾತೆಗೆ ಹಣ ಜಮೆ ಮಾಡುವ ವಿನೂತನ ಪ್ರತಿಭಟನೆ ನಡೆಸುತ್ತಿದೆ.

ಜಿಲ್ಲಾಸ್ಪತ್ರೆ ಆವರಣದಲ್ಲಿ ಪ್ರತಿಭಟನಾಕಾರರು ಬೂಟ್ ಪಾಲೀಶ್‌ ಮಾಡಿ ಹಣ ಸಂಗ್ರಹ ಮಾಡುತ್ತಿದ್ದಾರೆ. ತಾಂತ್ರಿಕ ಸಮಸ್ಯೆಯಿಂದ ಉಡುಪಿಯ ಜಿಲ್ಲಾಸ್ಪತ್ರೆಯಲ್ಲಿ ಐದು ಡಯಾಲಿಸಿಸ್ ಯಂತ್ರಗಳು ಸ್ಥಗಿತವಾಗಿವೆ. ಗುತ್ತಿಗೆ ವಹಿಸಿಕೊಂಡಿರುವ ಬಿಆರ್‌ಎಸ್ ಸಂಸ್ಥೆ ಸಿಬ್ಬಂದಿಗೆ ಸಂಬಳ ಕೊಡುತ್ತಿಲ್ಲ. ಬೂಟ್ ಪಾಲಿಶ್, ಚಪ್ಪಲಿಗಳನ್ನು ಶುಚಿಗೊಳಿಸಿ ಬಂದ ಹಣವನ್ನು ರಾಜ್ಯ ಸರ್ಕಾರದ ಖಾತೆಗೆ ಜಮೆ ಮಾಡಲು ನಿರ್ಧಾರ ಮಾಡಿದ್ದಾರೆ. ಇದನ್ನೂ ಓದಿ: ಸೂರ್ಯ ಸ್ಫೋಟಕ ಅರ್ಧಶತಕ – ಭಾರತಕ್ಕೆ 5 ವಿಕೆಟ್‌ಗಳ ರೋಚಕ ಜಯ

ಕರವೇ ಪ್ರವೀಣ್ ಶೆಟ್ಟಿ ಬಣದಿಂದ ವಿನೂತನ ಪ್ರತಿಭಟನೆ ನಡೆಯುತ್ತಿದ್ದು, ಇಂದು ಅಹೋರಾತ್ರಿ ಸತ್ಯಾಗ್ರಹ ಎರಡನೇ ದಿನಕ್ಕೆ ಕಾಲಿಟ್ಟಿದೆ. ಬಿ.ಆರ್.ಶೆಟ್ಟಿ ಸಂಸ್ಥೆ ರಾಜ್ಯದ ಎಲ್ಲಾ ಡಯಾಲಿಸಿಸ್ ಘಟಕಗಳನ್ನು ನಿರ್ವಹಣೆ ಮಾಡುತ್ತಿವೆ. ಆರ್ಥಿಕ ಸಂಕಷ್ಟಕ್ಕೊಳಗಾಗಿರುವ ಸಂಸ್ಥೆ ಪರಿಕರಗಳನ್ನು ಸರಿಪಡಿಸುತ್ತಿಲ್ಲ. ಇದನ್ನೂ ಓದಿ: ಎಲ್ಲೂ ವೀಕ್‌ ಆಗದ ನಾನು, ಅಪ್ಪು ನೋಡಲು ಹೋದಾಗ ತುಂಬಾ ವೀಕ್‌ ಆದೆ: ರವಿಚಂದ್ರನ್‌ ಭಾವುಕ

ಪಬ್ಲಿಕ್ ಟಿವಿ ಜೊತೆ ಅನ್ಸಾರ್ ಅಹಮ್ಮದ್ ಮಾತನಾಡಿ, ಎರಡು ದಿನದಿಂದ ಪ್ರತಿಭಟನೆ ಮಾಡುತ್ತಿದ್ದೇವೆ. ಜಿಲ್ಲಾಡಳಿತ ಸುಮ್ಮನಿದೆ. ಸರ್ಕಾರಕ್ಕೆ ಕಿವಿ ಕೇಳುತ್ತಿಲ್ಲ. ಜನ ಪ್ರತಿನಿಧಿಗಳಿಗೆ ಬಿದ್ದೇ ಹೋಗಿಲ್ಲ. ಇವತ್ತು ನಾಳೆ ಬೂಟ್ ಪಾಲಿಶ್‌ ಮಾಡಿ ಧನ ಸಂಗ್ರಹಿಸಿ ಸರ್ಕಾರಕ್ಕೆ ಸಾರ್ವಜನಿಕರ ಹಣ ನೀಡುತ್ತೇವೆ. ವಿಭಿನ್ನವಾಗಿ ಪ್ರತಿಭಟನೆ ಮಾಡಿ ಗಮನಸೆಳೆಯುವ ಪ್ರಯತ್ನ ಮಾಡುತ್ತೇವೆ. ಸಂಕಷ್ಟಕ್ಕೆ ಸರ್ಕಾರಕ್ಕೆ ಸ್ಪಂದಿಸದಿದ್ದರೆ ಹೇಗೆ ಎಂದು ಪ್ರಶ್ನಿಸಿ ಟಾಂಗ್‌ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *