ಬೀದಿಗೆ ಬಿದ್ದ ಕುರ್ಚಿ ಕದನ – ನೇರಾನೇರ ಗುದ್ದಾಟಕ್ಕೆ ಇಳಿದ್ರಾ ಸಿದ್ದರಾಮಯ್ಯ, ಡಿಕೆಶಿ?

1 Min Read

ಬೆಂಗಳೂರು: ಸಿಎಂ ಸಿದ್ದರಾಮಯ್ಯ (CM Siddaramaiah)  ಮತ್ತು ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಅವರ ನಡುವೆ ನಡೆಯುತ್ತಿರುವ ಕುರ್ಚಿ ಕಿತ್ತಾಟ ಈಗ ಬೀದಿಗೆ ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ಇಬ್ಬರು ಪರಸ್ಪರ ಪೋಸ್ಟ್‌ ಮಾಡುವ ಮೂಲಕ ತಿರುಗೇಟು ನೀಡಿದ್ದಾರೆ.

ಇಂದು ಬೆಳಗ್ಗೆ, ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿ(WORD POWER IS WORLD POWER. The biggest force in the world was to keep one’s word) ಎಂದು ಡಿಕೆ ಶಿವಕುಮಾರ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಾಕಿದ್ದರು.

ಈ ಪೋಸ್ಟ್‌ನಲ್ಲಿ ನೇರವಾಗಿ ಯಾವುದೇ ವ್ಯಕ್ತಿಯನ್ನು ಉಲ್ಲೇಖಿಸದೇ ಇದ್ದರೂ ಸಿದ್ದರಾಮಯ್ಯನವರು ನೀಡಿದ ವಚನವನ್ನು ಉಲ್ಲೇಖಿಸಿಯೇ ಟಾಂಗ್‌ ನೀಡಿದ್ದರು.

 

ಡಿಕೆ ಶಿವಕುಮಾರ್‌ ಬೆಳಗ್ಗೆ ಪೋಸ್ಟ್‌ ಹಾಕಿದರೆ ಸಿಎಂ ಸಿದ್ದರಾಮಯ್ಯನವರು ಸಂಜೆ, ಕರ್ನಾಟಕಕ್ಕೆ ನೀಡಿದ ನಮ್ಮ ಮಾತು ಕೇವಲ ಇದು ಘೋಷಣೆಯಲ್ಲ. ನಮಗೆ ಇದು ಜಗತ್ತನ್ನು ಅರ್ಥೈಸುತ್ತದೆ(Our Word to Karnataka is not a slogan, it means the World to us) ಎಂದು ಬರೆದಿದ್ದಾರೆ. ಸಿಎಂ ಸಿದ್ದರಾಮಯ್ಯನವರು ಶಕ್ತಿ ಯೋಜನೆಯನ್ನು ಉಲ್ಲೇಖಿಸಿ ಪೋಸ್ಟ್‌ ಮಾಡಿದ್ದರೂ ಡಿಕೆ ಶಿವಕುಮಾರ್‌ ಅವರನ್ನೇ ಉಲ್ಲೇಖಿಸಿಯೇ ತಿರುಗೇಟು ನೀಡಿದ್ದಾರೆ.

Share This Article