ಪರಿಶೀಲನಾ ಸಮಿತಿಯಲ್ಲಿ ಖರ್ಗೆಗಿಲ್ಲ ಜಾಗ, ಸಿಎಂ-ಪರಂ ಗೆ ಸ್ಥಾನ- ಇಂಟರ್‍ವ್ಯೂ ಮೂಲಕ ಅಭ್ಯರ್ಥಿ ಆಯ್ಕೆ

Public TV
1 Min Read

ಬೆಂಗಳೂರು: 2018ರ ವಿಧಾನಸಭೆ ಚುನಾವಣೆಗೆ ಟಿಕೆಟ್ ಹಂಚಿಕೆಗಾಗಿ ಎಐಸಿಸಿಯಿಂದ ಪರಿಶೀಲನಾ ಸಮಿತಿ ರಚನೆ ಮಡಲಾಗಿದೆ.

ಮಧುಸೂದನ್ ಮಿಸ್ತ್ರಿ ನೇತೃತ್ವದ ಸ್ಕ್ರೀನಿಂಗ್ ಕಮಿಟಿ ರಚಿಸಲಾಗಿದ್ದು, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ಸಿಎಂ ಸಿದ್ದರಾಮಯ್ಯ, ಸಂಸದ ಗೌರವ್ ಗೊಗೈ ಹಾಗೂ ಸಂಸದ ತಾಮ್ರಧ್ವಜ್ ಸಹು ಸೇರಿದಂತೆ ಸಮಿತಿಯಲ್ಲಿ ಒಟ್ಟು ಆರು ಸದಸ್ಯರಿದ್ದಾರೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಹಾಗೂ ಲೋಕಸಭಾ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆಗೆ ಸಮಿತಿಯಲ್ಲಿ ಸ್ಥಾನ ಸಿಕ್ಕಿಲ್ಲ

ಟಿಕೆಟ್ ಆಕಾಂಕ್ಷಿಗಳ ಅರ್ಜಿ ಕರೆದ ಬೆನ್ನಲ್ಲೇ ರಾಹುಲ್ ಗಾಂಧಿ ಪರಿಶೀಲನಾ ಸಮಿತಿ ರಚನೆ ಮಾಡಿದ್ದು, ಮಲ್ಲಿಕಾರ್ಜುನ ಖರ್ಗೆ ಅವರನ್ನ ಹೊರಗಿಟ್ಟು ಸಮಿತಿ ರಚನೆ ಮಾಡಲಾಗಿದೆ. 2013ರ ವಿಧಾನ ಸಭಾ ಚುನಾವಣೆ ವೇಳೆ ಮಿಸ್ತ್ರಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಆಗಿದ್ದರು.

ಸಂದರ್ಶನದಲ್ಲಿ ಪಾಸ್ ಆದರಷ್ಟೇ ಟಿಕೆಟ್: ಮುಂದಿನ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಮಾಸ್ಟರ್ ಪ್ಲಾನ್ ಮಾಡಿದ್ದು, ಟಿಕೆಟ್ ಹಂಚಿಕೆಗೆ ರಾಹುಲ್ ಗಾಂಧಿ ಹೊಸ ಮಾನದಂಡ ಅನುಸರಿಸುತ್ತಿದ್ದಾರೆ. ಹಾಲಿ ಅಥವಾ ಮಾಜಿ ಶಾಸಕರಾದರೂ ಟಿಕೆಟ್‍ಗಾಗಿ ಸಂದರ್ಶನ ಎದುರಿಸಬೇಕಿದೆ. ಈ ಸಂದರ್ಶನದಲ್ಲಿ ಪಾಸ್ ಆದರಷ್ಟೇ ಕಾಂಗ್ರೆಸ್ ಟಿಕೆಟ್ ಸಿಗಲಿದೆ. ಪ್ರತಿ ವಿಧಾನಸಭೆಯಿಂದ ಗರಿಷ್ಟ ಐದು ಹೆಸರುಗಳನ್ನ ಪರಿಗಣಿಸಿ ಸಂದರ್ಶನದಲ್ಲಿ ಪಾಸ್ ಆದ ಇಬ್ಬರು ಅಭ್ಯರ್ಥಿಗಳ ಹೆಸರು ಶಿಫಾರಸು ಮಾಡಲಾಗುತ್ತದೆ.

ವೀಕ್ಷಕರ ವರದಿ ಹಾಗೂ ಸ್ಕ್ರೀನಿಂಗ್ ಕಮಿಟಿ ವರದಿಗೆ ತಾಳೆಯಾದರಷ್ಟೇ ಟಿಕೆಟ್ ಕೊಡಲಿದ್ದಾರೆ. ಟಿಕೆಟ್ ಶಿಫಾರಸ್ಸು ವೇಳೆ ಎಚ್ಚರವಹಿಸುವಂತೆ ರಾಜ್ಯ ನಾಯಕರಿಗೆ ರಾಹುಲ್ ಗಾಂಧಿ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

https://www.youtube.com/watch?v=1Qz0q8cnnG4

Share This Article
Leave a Comment

Leave a Reply

Your email address will not be published. Required fields are marked *