ಬೆಂಗಳೂರು: ಅಯೋಧ್ಯೆ ಮತ್ತು ಕಾಶಿಗೆ ಹೋಗಬೇಕು ಎಂಬ ಆಸೆ ಇದ್ದೆ ಇರುತ್ತದೆ. ಅದರಲ್ಲೂ ಅಯೋಧ್ಯೆಯ ಶ್ರೀರಾಮನನ್ನು (Ayodhya Shree Ram) ಹಾಗೂ ಕಾಶಿಯ ವಿಶ್ವನಾಥನನ್ನು (Kashi Vishwanath) ನೋಡಬೇಕು ಎಂಬ ಬಯಕೆ ಎಲ್ಲರಲ್ಲಿ ಇರುತ್ತದೆ.
ಎಷ್ಟೋ ಜನರಿಗೆ ಈ ಆಸೆ ಇದ್ದಾಗಲೂ ಸಹ ಹೋಗುವುದಕ್ಕೆ ಸಾಧ್ಯವಾಗಿರಲ್ಲ. ಆರ್ಥಿಕ ಸಮಸ್ಯೆಯಿಂದ ಹೋಗುವುದಕ್ಕೆ ಸಾಧ್ಯವಾಗುವುದಿಲ್ಲ. ಭಾಷೆಯ ಸಮಸ್ಯೆಯಿಂದ ಹೇಗಪ್ಪ ಹೋಗುವುದು ಎಂಬ ಚಿಂತೆ ಅವರಲ್ಲಿರುತ್ತದೆ. ಯಾರಾದರೂ ಜೊತೆಗಿದ್ದರೆ ಹೋಗಬಹುದು ಎಂಬ ಧೈರ್ಯ ಇರುತ್ತೆ. ಹೀಗೆ ಆಸೆ ಇಟ್ಟುಕೊಂಡ ಅನೇಕ ಜನರಿಗೆ ʼಓಂ ಶಕ್ತಿʼ ಸಂಸ್ಥೆ ಅವಕಾಶ ಮಾಡಿಕೊಟ್ಟಿದೆ. ಇದೇ ತಿಂಗಳು 30ನೇ ತಾರೀಖಿನಂದು ಬೆಳಿಗ್ಗೆ 6 ಗಂಟೆಗೆ ರೈಲಿನ ಮೂಲಕ ಉಚಿತವಾಗಿ ಅಯೋಧ್ಯೆ ಹಾಗೂ ಕಾಶಿಗೆ ಕರೆದುಕೊಂಡು ಸಂಸ್ಥೆ ಕರೆದುಕೊಂಡು ಹೋಗುತ್ತಿದೆ. ಇದನ್ನೂ ಓದಿ: ಐತಿಹಾಸಿಕ ಗಂಗೈಕೊಂಡ ಚೋಳಪುರಂ ದೇವಾಲಯಕ್ಕೆ ಭೇಟಿ ನೀಡಿದ ಮೋದಿ
ಒಂದೊಂದು ಜಿಲ್ಲೆಯಿಂದ 100 ಜನರನ್ನು ಅದರಲ್ಲೂ ಆರ್ಥಿಕವಾಗಿ ಹಿಂದುಳಿದವರನ್ನ ಗುರುತಿಸಿ ಈಗಾಗಲೇ ಆಯ್ಕೆ ಮಾಡಿಕೊಳ್ಳಲಾಗಿದೆ. ಈಗಾಗಲೇ ನಿಗದಿ ಮಾಡಿದಂತೆ ಒಟ್ಟು ಎಂಟು ದಿನ ಈ ಪ್ರವಾಸ ಇರಲಿದೆ. ಉಚಿತವಾಗಿ ಪ್ರಯಾಣ, ಹಾಗೂ ಊಟ ಜೊತೆಗೆ ಉಳಿದುಕೊಳ್ಳಲೂ ಸಹ ಭಕ್ತರಿಗೆ ವ್ಯವಸ್ಥೆ ಮಾಡಲಾಗಿದೆ.
ಇದಕ್ಕಾಗಿ ರೈಲ್ವೇ ಇಲಾಖೆಯನ್ನು (Indian Railways) ಸಂಪರ್ಕಿಸಿ ಇಡಿ ಒಂದು ರೈಲನ್ನು 8 ದಿನಕ್ಕಾಗಿ ಬುಕ್ ಮಾಡಿ ಕರೆದುಕೊಂಡು ಹೋಗಲಾಗುತ್ತಿದೆ.