ದೇವಾಲಯಗಳ ಪ್ರಸಾದ ಡೋರ್ ಡೆಲಿವರಿ ಸ್ಕೀಂ ಜಾರಿಗೆ ಮುಂದಾದ ಮುಜರಾಯಿ ಇಲಾಖೆ

By
1 Min Read

ಬೆಂಗಳೂರು: ರಾಜ್ಯದ ಪ್ರತಿ ದೇವಸ್ಥಾನದ (Temple) ಪ್ರಸಾದವನ್ನು (Prasada) ಭಕ್ತರ ಮನೆ ಬಾಗಿಲಿಗೆ ತಲುಪಿಸಲು ಮುಜರಾಯಿ ಇಲಾಖೆ (Muzrai Department) ಮುಂದಾಗಿದೆ.

ಮುಜರಾಯಿ ಇಲಾಖೆ ಹೊಸ ತಂತ್ರಜ್ಞಾನವನ್ನ ಅಳವಡಿಸಿಕೊಂಡು ರಾಜ್ಯದ ಜನರಿಗೆ ಸೇವೆ ನೀಡಲು ಯೋಜನೆ ರೂಪಿಸಿದೆ. ಈಗಾಗಲೇ ಆನ್‍ಲೈನ್ ಸೇವೆ, ಬುಕ್ಕಿಂಗ್ ಸೇವೆ ಜಾರಿಯಾಗಿದೆ. ಇನ್ನೂ ದೇವಾಲಯಗಳ ಪ್ರಸಾದವನ್ನು ಡೋರ್ ಡೆಲಿವರಿ ನೀಡಲು ಯೋಜನೆ ರೂಪಿಸಲಾಗುತ್ತಿದೆ. ಆನ್‍ಲೈನ್‍ನಲ್ಲಿ ಕರ್ನಾಟಕ ರಾಜ್ಯವ್ಯಾಪಿ ಇರುವ ಯಾವುದೇ ದೇವಸ್ಥಾನ ಪ್ರಸಾದವನ್ನು ಆನ್‍ಲೈನಲ್ಲಿ ಬುಕ್ ಮಾಡಿದರೆ ಮನೆ ಬಾಗಿಲಿಗೆ ಪ್ರಸಾದ ತಂದು ಕೊಡುವ ಯೋಜನೆ ಶೀಘ್ರದಲ್ಲೇ ಜಾರಿಗೆ ತರಲು ಯೋಜನೆ ರೂಪಿಸಲಾಗುತ್ತಿದೆ.

ಪ್ರಸಾದ ನೀಡುವ ಯೋಜನೆ ಜಾರಿಗೆ ಅಂಚೆ ಇಲಾಖೆ ಜೊತೆ ಮಾತುಕತೆ ಮಾಡಲಾಗಿದೆ. ಖಾಸಗಿ ಕಂಪನಿಗಳ ಜೊತೆ ಮಾತುಕತೆ ನಡೆಯುತ್ತಿದೆ. ಪ್ರಸಾದದ ದರ ಹಾಗೂ ಅದರ ಜೊತೆಗೆ ಡೆಲಿವರಿ ದರ ಸೇರಿಸಿ ಮನೆ ಬಾಗಿಲಿಗೆ ಪ್ರಸಾದ ನೀಡುವ ದರ ಫಿಕ್ಸ್ ಮಾಡಲು ಇಲಾಖೆ ಮುಂದಾಗಿದೆ. ಅಧಿಕಾರಿಗಳು ಸಚಿವರ ಜೊತೆ ಚರ್ಚೆ ಮಾಡಿ ಶೀಘ್ರದಲ್ಲೇ ಜಾರಿ ಮಾಡಲಿದ್ದಾರೆ.

ಮನೆ ಬಾಗಿಲಿಗೆ ದೇವಾಲಯಗಳ ಪ್ರಸಾದ ಯೋಜನೆ ಜಾರಿ ಆದರೆ ಜನ ಮನೆಯಲ್ಲೆ ಕುಳಿತು ತಮ್ಮ ನೆಚ್ಚಿನ ದೇವರ ಪ್ರಸಾದವನ್ನ ಸ್ವೀಕರಿಸಬಹುದು. ಈ ಯೋಜನೆಯ ಮಾನದಂಡಗಳು ಏನಾಗಿರಲಿದೆ ಎಂಬುದನ್ನ ಕಾದು ನೋಡಬೇಕಿದೆ.

Share This Article