ಆನ್‍ಲೈನ್ ಗೇಮ್ ನಿಷೇಧ ರದ್ದು: ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್‍ಗೆ ಅರ್ಜಿ

Public TV
2 Min Read

ನವದೆಹಲಿ: ರಮ್ಮಿ, ಡ್ರೀಮ್ 11 ಸೇರಿದಂತೆ ಆನ್‍ಲೈನ್ ಗೇಮ್‌ಗಳನ್ನು ನಿಷೇಧಿಸಿದ ನಿರ್ಧಾರವನ್ನು ರದ್ದು ಮಾಡಿದ ಹೈಕೋರ್ಟ್ ಆದೇಶದ ವಿರುದ್ಧ ಈಗ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದೆ. ರಾಜ್ಯ ಸರ್ಕಾರದ ಪರ ಹಿರಿಯ ವಕೀಲ ಶುಭ್ರಾಂಶು ಪಡಿ ಅರ್ಜಿ ಸಲ್ಲಿಸಿದ್ದು, ಹೈಕೋರ್ಟ್ ಆದೇಶವನ್ನು ರದ್ದುಗೊಳಿಸಲು ಮನವಿ ಮಾಡಿದ್ದಾರೆ.

ಸರ್ಕಾರ ಆನ್‍ಲೈನ್ ಗೇಮ್‌ ನಿಷೇಧಿಸಲು ನಿರ್ಧಾರಿಸಿದ್ದು, ಇದರಿಂದ ಹಣಕಾಸಿನ ಅಪಾಯ ಹೆಚ್ಚಿದೆ ಎಂದು ತಿಳಿಸಿದೆ. ಇದರಿಂದ ಕಳೆದ ವರ್ಷ 28,000ಕ್ಕೂ ಅಧಿಕ ಪ್ರಕರಣಗಳು ವರದಿಯಾಗಿವೆ. ಆನ್‍ಲೈನ್ ಗೇಮ್ ಜನರನ್ನು ತಪ್ಪುದಾರಿಗೆ ಎಳೆಯಬಹುದು. ಸಾರ್ವಜನಿಕ ಸುವ್ಯವಸ್ಥೆ ಮತ್ತು ಸಾರ್ವಜನಿಕ ಆರೋಗ್ಯ ಕಾಪಾಡಲು ರಾಜ್ಯ ಸರ್ಕಾರ ತಿದ್ದುಪಡಿ ತಂದಿದೆ. ಇದು 19 ನೇ ವಿಧಿಯ ಉಲ್ಲಂಘನೆ ಅಲ್ಲ, ಹೈಕೋರ್ಟ್ ಇದನ್ನು ತಪ್ಪಾಗಿ ಅರ್ಥೈಸಿಕೊಂಡಿದೆ ಎಂದು ರಾಜ್ಯ ಸರ್ಕಾರ ತನ್ನ ಅರ್ಜಿಯಲ್ಲಿ ಉಲ್ಲೇಖಿಸಿದೆ. ಇದನ್ನೂ ಓದಿ: ನಾವು ಪರಿಶುದ್ಧವಾಗಿದ್ದಾಗ ಯಾರು ಏನು ಮಾಡೋದಕ್ಕೆ ಆಗೋದಿಲ್ಲ: ಹೆಚ್‍ಡಿಕೆ

ಬೆಟ್ಟಿಂಗ್‌ಗೆ ಅವಕಾಶ ನೀಡುವ ಆನ್‍ಲೈನ್ ಗೇಮ್ ಗಳನ್ನು‌ ನಿಷೇಧಿಸುವುದಕ್ಕಾಗಿ ರಾಜ್ಯ ಸರ್ಕಾರ ಪೊಲೀಸ್ ತಿದ್ದುಪಡಿ ಕಾಯ್ದೆಗೆ ತಿದ್ದುಪಡಿ ಮಾಡಿತ್ತು. ಇದರನ್ವಯ ಡ್ರೀಮ್ 11, ರಮ್ಮಿ ಸೇರಿದಂತೆ ಬೆಟ್ಟಿಂಗ್ ಗೇಮಿಂಗ್ ಆ್ಯಪ್‌ಗಳನ್ನು ರಾಜ್ಯದಲ್ಲಿ 2021 ರ ಅಕ್ಟೋಬರ್ 5 ನಿರ್ಬಂಧಿಸಿತ್ತು. ಆನ್‍ಲೈನ್ ಗೇಮ್ ನಲ್ಲಿ ಬೆಟ್ಟಿಂಗ್ ಆಡುವವರಿಗೆ ಗರಿಷ್ಠ ಮೂರು ವರ್ಷಗಳ ಜೈಲು ಶಿಕ್ಷೆ ಮತ್ತು  1 ರೂ ಯಿಂದ ಲಕ್ಷದವರೆಗೆ ದಂಡ ವಿಧಿಸಲು ನಿಯಮ ರೂಪಿಸಲಾಗಿತ್ತು.

ರಾಜ್ಯ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಹಲವು ಆನ್‍ಲೈನ್ ಗೇಮಿಂಗ್ ಸಂಸ್ಥೆಗಳು ಹೈಕೋರ್ಟ್ ಮೊರೆ ಹೋಗಿದ್ದವು, ಈ ತಿದ್ದುಪಡಿ ಮಾಡುವ ಅಧಿಕಾರ ರಾಜ್ಯ ಶಾಸಕಾಂಗ ಹೊಂದಿಲ್ಲ, ಇದು ಸುಪ್ರೀಂಕೋರ್ಟ್ ನಿಗದಿಪಡಿಸಿದ ಪೂರ್ವನಿದರ್ಶನಕ್ಕೆ ವಿರುದ್ಧವಾಗಿದೆ. ಸಂವಿಧಾನದ 14, 19(1) (ಜಿ), 21 ಮತ್ತು 301ನೇ ವಿಧಿಗಳನ್ನು ಉಲ್ಲಂಘಿಸುತ್ತದೆ ಎಂದು ವಾದಿಸಿದ್ದರು.

ನಂತರ ಹೈಕೋರ್ಟ್ ಕಾಯ್ದೆಯ ಸೆಕ್ಷನ್ 2, 3, 6, 8 ಮತ್ತು 9 ಅನ್ನು ರದ್ದುಪಡಿಸಿ ರಾಜ್ಯ ಸರ್ಕಾರದ ತಿದ್ದುಪಡಿಯನ್ನು ರದ್ದು ಮಾಡಿ ಆದೇಶ ಹೊರಡಿಸಿತ್ತು. ಇದನ್ನೂ ಓದಿ: ಏಪ್ರಿಲ್ 2ಕ್ಕೆ ಕಿಚ್ಚನ ‘ವಿಕ್ರಾಂತ್ ರೋಣ’ ಟೀಸರ್ ರಿಲೀಸ್ 

Share This Article
Leave a Comment

Leave a Reply

Your email address will not be published. Required fields are marked *