ಎರಡು ಡೋಸ್ ಆಗಿದೆ, 2023ಕ್ಕೆ ಬೂಸ್ಟರ್ ಡೋಸ್ – ಜೆಡಿಎಸ್‌ಗೆ ತಿವಿದ ರಾಜೇಂದ್ರ

Public TV
1 Min Read

ತುಮಕೂರು: ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಸೋಲಿಸುವುದರ ಮೂಲಕ ದೇವೇಗೌಡರಿಗೆ ಡಬಲ್ ಡೋಸ್ ಕೊಡಲಾಗಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬೂಸ್ಟರ್ ಡೋಸ್ ಕೊಡುತ್ತೇವೆ ಎಂದು ಕಾಂಗ್ರೆಸ್ ವಿಜೇತ ಅಭ್ಯರ್ಥಿ ಆರ್. ರಾಜೇಂದ್ರ ವ್ಯಂಗ್ಯವಾಡಿದರು.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಲೋಕಸಭೆಯಲ್ಲಿ ಜೆಡಿಎಸ್‌ಗೆ ಮೊದಲನೇ ಡೋಸ್ ನೀಡಲಾಗಿದೆ. ವಿಧಾನ ಪರಿಷತ್‌ನಲ್ಲಿ ಎರಡನೇ ಡೋಸ್ ಆಗಿದೆ. ಇದೆಲ್ಲವನ್ನು ರಾಜ್ಯದ ಜನತೆ ನೋಡುತ್ತಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬೂಸ್ಟರ್ ಡೋಸ್ ನೀಡುತ್ತೇವೆ ಎಂದು ಟಾಂಗ್ ನೀಡಿದರು.

ಜೆಡಿಎಸ್ ಉಪಚುನಾವಣೆಯಲ್ಲಿ ಏನಾಗಿದೆಯೋ ಅದೇ ಫಲಿತಾಂಶವೇ ಮತ್ತೆ ಮರುಕಳಿಸಿದೆ. ಜೆಡಿಎಸ್ ಸೋಲು ಏನೆ ಇದ್ದರೂ ಅದು ಅವರ ವೈಯಕ್ತಿಕ ಮತ್ತು ಅವರ ಮುಖಂಡರು ಶ್ರಮ ವಹಿಸದ ಪ್ರತಿಫಲವಾಗಿದೆ. ಆದರೆ ಸುಮ್ಮನೆ ಜೆಡಿಎಸ್ ಕಾಂಗ್ರೆಸ್‌ನ ಮೇಲೆ ಗೂಬೆ ಕೂರಿಸುತ್ತಿದೆ. ಇದಕ್ಕೆ ಜನರು ಉತ್ತರವನ್ನು ನೀಡಿದ್ದಾರೆ ಎಂದರು. ಇದನ್ನೂ ಓದಿ: ಹಣ ಬಲದ ಎದುರು ಜನ ಬಲಕ್ಕೆ ಸೋಲು: ಎಚ್‌ಡಿಕೆ

ಜೆಡಿಎಸ್‌ನವರು ಸಭೆ ಸಮಾರಂಭದಲ್ಲಿ ಮಾತನಾಡುತ್ತಿರುವ ದಾಟಿಯನ್ನು ನೋಡಿದರೆ, ಮುಂದಿನ ವಿಧಾನಸಭಾ ಚುನಾವಣೆಯ ನಂತರದಲ್ಲಿ ಪಕ್ಷ ವಿಲೀನವಾದರೂ ಆಶ್ಚರ್ಯವಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಕೈ ನಾಯಕರು, ಕಾರ್ಯಕರ್ತರ ಪಾದವನ್ನು ಮುಟ್ಟಿ ಧನ್ಯವಾದ ತಿಳಿಸುತ್ತೇನೆ: ಹೆಬ್ಬಾಳ್ಕರ್

ಹಣದ ಆಮಿಷ ಜಿಲ್ಲೆಯಲ್ಲಿ ಸ್ವಲ್ಪ ಮಟ್ಟಿಗೆ ಆಗಿದೆ. ಅದರಿಂದಲೇ ನನಗೆ ಮೊದಲನೇ ಪ್ರಾಶಸ್ತ್ಯದಲ್ಲಿ ಗೆಲುವು ಸಾಧಿಸಲು ಆಗಲಿಲ್ಲ. ಏನೇ ಆದರೂ ಮತದಾರರು ಪಕ್ಷವನ್ನು ಕೈಬಿಟ್ಟಿಲ್ಲ. ಮುಂದಿನ ದಿನದಲ್ಲಿ ಇನ್ನೂ ಕಾಂಗ್ರೆಸ್ ಪಕ್ಷವನ್ನು ಜಿಲ್ಲೆಯಲ್ಲಿ ಸುಭದ್ರವಾಗಿಸಲು ಮುಖಂಡರ ಜೊತೆ ಕೈಜೋಡಿಸುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಹಾಸನದಲ್ಲಿ ಜೆಡಿಎಸ್ ಅಭ್ಯರ್ಥಿ ಸೂರಜ್ ರೇವಣ್ಣ ಗೆಲುವು

ನಿರೀಕ್ಷಿತ ಗೆಲುವೆ ಆಗಿದೆ. ಈ ಗೆಲುವಿಗೆ ಡಿಕೆ ಶಿವಕುಮಾರ್, ಮಾಜಿ ಡಿಸಿಎಂ ಪರಮೇಶ್ವರ್, ಸಂಸದ ಡಿಕೆ ಸುರೇಶ್ ಹೆಚ್ಚು ಶ್ರಮಿಸಿದ್ದಾರೆ. ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರ ಶ್ರಮದ ಫಲವಾಗಿ ಗೆಲುವು ಸಾಧಿಸಿದ್ದೇನೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *