ನಾವೆಲ್ಲರೂ ಸುರಕ್ಷಿತವಾಗಿದ್ದೇವೆ: ಉಕ್ರೇನ್‍ನಲ್ಲಿರುವ ಕರ್ನಾಟಕದ ವಿದ್ಯಾರ್ಥಿಗಳು

Public TV
3 Min Read

ಬೆಂಗಳೂರು: ಉಕ್ರೇನ್‍ನಲ್ಲಿ ಸಿಲುಕಿರುವ ಕರ್ನಾಟಕದ ಮೆಡಿಕಲ್ ವಿದ್ಯಾರ್ಥಿಗಳು ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದು, ನಾವೆಲ್ಲರೂ ಸುರಕ್ಷಿತವಾಗಿದ್ದೇವೆ ಎಂದು ತಿಳಿಸಿದ್ದಾರೆ.

ಪ್ರಿಯಾಂಕ ವಿದ್ಯಾರ್ಥಿನಿ(ಬೆಂಗಳೂರು):
ನಾವು ಉಕ್ರೇನ್‍ನಲ್ಲಿ ಇದ್ದೇವೆ. ಇಲ್ಲಿ ಭಯ ಇದ್ದರೂ, ಎಲ್ಲರೂ ಸುರಕ್ಷಿತವಾಗಿ ಇದ್ದಾರೆ. ಇಲ್ಲಿ ಊಟ ಮತ್ತು ನೀರಿಗೆ ಜನರ ಬೇಡಿಕೆ ಹೆಚ್ಚಾಗಿದೆ. ಅಲ್ಲದೆ ದಿನಸಿ ಅಂಗಡಿ ಮುಂದೆ ತುಂಬಾ ಜನರು ನಿಂತಿದ್ದಾರೆ ಎಂದು ಅಲ್ಲಿನ ಪರಿಸ್ಥಿತಿಯನ್ನು ವಿವರಿಸಿದರು.

ಎಲ್ಲರೂ ಸುರಕ್ಷಿತವಾಗಿದ್ದೇವೆ. ನಾವು ಮಾರುಕಟ್ಟೆ ಮುಂದೆ ಇದ್ದೇವೆ. ಇಲ್ಲಿ ತುಂಬಾ ಜನರು ತಮಗೆ ಬೇಕಾದ ವಸ್ತುಗಳನ್ನು ಖರೀದಿಸಲು ಸಾಲಾಗಿ ನಿಂತಿದ್ದಾರೆ. ಅಲ್ಲದೆ ನೀರಿಗೆ ಇಲ್ಲಿ ತುಂಬಾ ಸಮಸ್ಯೆಯಾಗಿತ್ತು ಎಂದು ತಿಳಿಸಿದರು. ಇದನ್ನೂ ಓದಿ: ರಷ್ಯಾ ದಾಳಿಯಿಂದ ಉಕ್ರೇನ್‍ನಲ್ಲಿ ನಾಶವಾಗಿದ್ದು ಏನೇನು? ಇಲ್ಲಿದೆ ವಿವರ

ನಾವು ಇರುವ ಜಾಗದಲ್ಲಿ 200ಕ್ಕೂ ಹೆಚ್ಚು ಕರ್ನಾಟಕದವರು ಇದ್ದಾರೆ. ಬೇರೆ ಕಡೆಯೂ ತುಂಬಾ ಜನರಿದ್ದಾರೆ. ಇಲ್ಲಿರುವ ಹಲವು ವಿದ್ಯಾರ್ಥಿಗಳು ಮೆಡಿಕಲ್ ಓದುತ್ತಿದ್ದಾರೆ. ಒಂದು ವಾರದಿಂದಲೂ ಇಲ್ಲಿಂದ ಹೋಗಿ ಎಂದು ತಿಳಿಸಲಾಗಿತ್ತು. ಸೂಚನೆ ಕೊಟ್ಟ ಕೆಲವು ದಿನಗಳಲ್ಲಿ ಹಲವು ಮಂದಿ ತಮ್ಮ ದೇಶಕ್ಕೆ ಹೋಗಿದ್ದಾರೆ. ಆದರೆ ಈ ವಾರ ಹೋಗಬೇಕು ಎಂದುಕೊಂಡವರು ಇಲ್ಲೇ ಸಿಕ್ಕಿ ಹಾಕಿಕೊಂಡಿದ್ದಾರೆ ಎಂದರು.

ವಿಮಾನದ ಟಿಕೆಟ್ ಬುಕ್ ಮಾಡಿಕೊಂಡಿದ್ದು, ಈಗ ರದ್ದಾಗಿದೆ. ಕಳೆದ ವಾರ ಹೇಳಿದ್ರಿಂದ ಎಷ್ಟೋ ಜನರಿಗೆ ಇವತ್ತು ಟಿಕೆಟ್ ಸಿಕ್ಕಿತ್ತು. ಕಳೆದ ವಾರ ಟಿಕೆಟ್ ಸಿಕ್ಕಿರಲಿಲ್ಲ. ಅಲ್ಲದೆ ದುಡ್ಡು ಸಹ ಹೆಚ್ಚಿತ್ತು ಎಂದು ತಿಳಿಸಿದರು.

ಕರ್ನಾಟಕದಲ್ಲಿ ನಾನು ಬೆಂಗಳೂರುನಲ್ಲಿ ಇದ್ದೇನೆ. ಪ್ರಸ್ತುತ ನಾವು ಇರುವ ಜಾಗದಲ್ಲಿ ಯಾವುದೇ ರೀತಿಯ ತೊಂದರೆ ಆಗಿಲ್ಲ. ದಾಳಿಯು ಗಡಿ ಪ್ರದೇಶದಲ್ಲಿ ನಡೆಯುತ್ತಿದೆ. ನಮಗೂ ದಾಳಿ ನಡೆಯುತ್ತಿರುವ ಜಾಗಕ್ಕೂ 300 ಕಿ.ಮೀ ದೂರ ಇದೆ ಎಂದರು.

ನಾವಿರುವ ಪ್ರದೇಶದ ಗಡಿ ರಷ್ಯಾ ಗಡಿಗೆ ಹತ್ತಿರವಿದೆ. ಇದು ಉತ್ತರದಲ್ಲಿ ಬರುತ್ತೆ. ನಮ್ಮ ಸ್ನೇಹಿತರೆಲ್ಲ ಒಂದೇ ಕಡೆ ಇದ್ದೇವೆ. ಇಲ್ಲಿನ ಸರ್ಕಾರ ಹೆಚ್ಚು ಹೊರಗಡೆ ಓಡಾಡಬೇಡಿ. ನಿಮಗೆ ಬೇಕಿರುವ ವಸ್ತುಗಳನ್ನು ತೆಗೆದುಕೊಳ್ಳಿ ಎಂದು ತಿಳಿಸಿದೆ ಎಂದು ವಿವರಿಸಿದರು.

ನಮ್ಮ ಸ್ನೇಹಿತರ ಜೊತೆ ಸೋಶಿಯಲ್ ಮೀಡಿಯಾ ಮೂಲಕ ಸಂಪರ್ಕದಲ್ಲಿ ಇದ್ದೇವೆ. ಗುಂಪಿನಲ್ಲಿ ಇರಬೇಕು ಎಂದು ಹೇಳುತ್ತಿಲ್ಲ. ಬದಲಿಗೆ ಎಲ್ಲೇ ಇದ್ರೂ ಸುರಕ್ಷಿತವಾಗಿ ಇರಬೇಕೆಂದು ಹೇಳುತ್ತಿದ್ದಾರೆ. ಹೊರಗೆ ಹೆಚ್ಚು ಬರಬಾರದು ಎಂದು ಹೇಳಿದ್ದಾರೆ. ಭಯಪಡಬೇಡಿ ಎಂದು ಹೇಳಿದ್ದಾರೆ ಎಂದರು.

ಇಲ್ಲಿ ಇರುವ ಎಷ್ಟೋ ಪ್ರಜೆಗಳು ಬೇರೆ ಕಡೆ ಹೋಗಲು ಸಿದ್ಧರಾಗಿ ನಿಂತಿದ್ದಾರೆ. ಅಲ್ಲದೆ ತಮ್ಮ ಬಟ್ಟೆಗಳನ್ನು ತುಂಬಿಕೊಂಡು ಬಂದು ಬೇರೆ ಕಡೆ ಹೋಗಲು ತಮ್ಮ ಕಾರಿನಲ್ಲಿ ಹೋಗುತ್ತಿದ್ದಾರೆ ಎಂದು ಹೇಳಿದರು.

ನಾಗೇಶ್ ಪೂಜಾರಿ ವಿದ್ಯಾರ್ಥಿ(ಬೆಳಗಾವಿ)
ನಾವು ಎಲ್ಲರೂ ಸುರಕ್ಷಿರವಾಗಿ ಇದ್ದೇವೆ. 4 ವರ್ಷದಿಂದ ಇಲ್ಲೇ ಓಡುತ್ತಿದ್ದೇನೆ. ನಾನು ಮೆಡಿಕಲ್ ಓದುತ್ತಿದ್ದೇನೆ. ಇಲ್ಲಿ ಯಾವುದೇ ರೀತಿಯ ತೊಂದರೆ ಇಲ್ಲ. ನಾವು ಸುರಕ್ಷಿತವಾಗಿದ್ದೇವೆ ಎಂದು ತಿಳಿಸಿದರು.

ನಾವು ಭಯ ಪಡುವುದಿಲ್ಲ. ಅಲ್ಲದೆ ನಾವೆಲ್ಲ ಸುರಕ್ಷಿತವಾಗಿ ಇದ್ದೇವೆ. ನಮಗೆ ಬೇಕಾಗಿರುವ ಎಲ್ಲ ರೀತಿಯ ವಸ್ತುಗಳು ಸಿಗುತ್ತಿದೆ. ನನ್ನ ಜೊತೆ ಈಗ 250 ಜನಕ್ಕೂ ಹೆಚ್ಚು ಜನರು ಇದ್ದಾರೆ. 200ಕ್ಕೂ ಹೆಚ್ಚು ಕರ್ನಾಟಕದವರು ಇದ್ದಾರೆ ಎಂದು ವಿವರಿಸಿದರು.

ನಾವು ಸಹ ವಿಮಾನವನ್ನು ಬುಕ್ ಮಾಡಿದ್ದೆವು. ಆದರೆ ಟಿಕೆಟ್ ಸಿಗಲಿಲ್ಲ. ಈಗ ನಮಗೆ ಬೇಕಾದ ವಸ್ತುಗಳನ್ನು ತೆಗೆದುಕೊಂಡು ಹೋಗುವುದಕ್ಕೆ ಬಂದಿದ್ದೇವೆ. ದಿನಸಿ ಸಿಗುತ್ತಿದೆ. ಅದಕ್ಕೆಲ್ಲ ತೊಂದರೆ ಇಲ್ಲ ಎಂದರು. ಇದನ್ನೂ ಓದಿ: ಉಕ್ರೇನ್‍ನಲ್ಲಿ ಸಿಲುಕಿದ್ದಾರೆ 10 ಮಂದಿ ಕರ್ನಾಟಕ ವಿದ್ಯಾರ್ಥಿಗಳು!

ಉಕ್ರೇನ್ ವಿದ್ಯಾರ್ಥಿ:
ವಾತಾವರಣ ಶಾಂತಿಯಿಂದ ಇದೆ. ಈಗ ನಮ್ಮನ್ನು ರೂಮ್ ಒಳಗೆ ಬಿಟ್ಟು ಊಟಕ್ಕೆ ತಯಾರಿ ಮಾಡುತ್ತಿದ್ದಾರೆ. ಇವತ್ತೆ ದಾಳಿ ನಡೆಯುತ್ತೆ ಎಂದು ನಮಗೆ ತಿಳಿದಿರಲಿಲ್ಲ. ಬೆಳಗ್ಗೆ 8 ಗಂಟೆಗೆ ದಾಳಿ ಮಾಡುವ ಶಬ್ದ ಕೇಳಿಸಿತು. ನಾವು ಇದ್ದ ಸ್ವಲ್ಪ ದೂರದಲ್ಲಿ ಶಬ್ದ ಕೇಳಿಸಿತು. ಸುದ್ದಿ ತಿಳಿದ ತಕ್ಷಣ ನಾವು ನಮ್ಮ ಕುಟುಂಬದ ಜೊತೆ ಮಾತನಾಡಿ ವಿಷಯ ತಿಳಿಸಿದ್ದೆವು ಎಂದರು.

ನಮ್ಮ ವಿಮಾನವು ಮೊದಲೇ ಬುಕ್ ಆಗಿತ್ತು. ಆದರೆ ನಾವು ಹೋಗ ಕೊನೆ ಕ್ಷಣದಲ್ಲಿ ವಿಮಾನ ರದ್ದಾಯಿತು. ಈ ಹಿನ್ನೆಲೆ ನಾವು ಮತ್ತೆ ವಾಪಸ್ ಬಂದೆವು. ಈಗ ಎಲ್ಲರಿಗೂ ಊಟದ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ನಾವೆಲ್ಲರೂ ರೂಂಗೆ ಬಂದಿದ್ದೇನೆ. ಭಾರತೀಯರು ತುಂಬಾ ಜನ ಇದ್ದಾರೆ. ಅವರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ತಿಳಿಸಿದರು

Share This Article
Leave a Comment

Leave a Reply

Your email address will not be published. Required fields are marked *