ಕರ್ನಾಟಕ ಕಿಂಗ್ ಯಾರಲೇ?: ಕುತೂಹಲ ಮೂಡಿಸಿದ ಉತ್ತರಕಾಂಡ ಪೋಸ್ಟರ್

Public TV
1 Min Read

ನ್ನಡದ ಹೆಸರಾಂತ ನಿರ್ಮಾಣ ಸಂಸ್ಥೆಯು ಒಂದು ಪೋಸ್ಟರ್ ಹಂಚಿಕೊಂಡಿದೆ. ಅದರಲ್ಲು ಕರ್ನಾಟಕ ಕಿಂಗ್ ಯಾರಲೇ? ಎಂದು ಪ್ರಶ್ನೆಯನ್ನು ಮಾಡಿದೆ. ಈ ಪೋಸ್ಟರ್ ಕುತೂಹಲಕ್ಕೂ ಕಾರಣವಾಗಿದೆ. ಈ ಸಿನಿಮಾದಲ್ಲಿ ಶಿವರಾಜ್ ಕುಮಾರ್ ನಟಿಸಲಿದ್ದಾರೆ ಎನ್ನುವ ಸುದ್ದಿಯೇನೂ ಗುಟ್ಟಾಗಿ ಉಳಿದಿಲ್ಲ. ಶಿವಣ್ಣನನ್ನು (Shivaraj Kumar) ಅಭಿಮಾನಿಗಳು ಕಿಂಗ್ (King) ಅಂತಾನೇ ಕರೆಯುತ್ತಾರೆ. ಶಿವಣ್ಣನ ಪೋಸ್ಟರ್ ರಿಲೀಸ್ ಮಾಡುವುದಕ್ಕಾಗಿ ಈ ಪೋಸ್ಟರ್ ರಿಲೀಸ್ ಮಾಡಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ.

ಡಾಲಿ (Daali Dhananjay) ನಟನೆಯ ‘ಉತ್ತರಕಾಂಡ’ (Uttarakanda Film) ಸಿನಿಮಾ ತಂಡಕ್ಕೆ ಕಲಾವಿದರ ದಂಡೇ ಸೇರ್ಪಡೆಯಾಗುತ್ತಿದೆ. ಡಾಲಿಗೆ ಜೋಡಿಯಾಗೋ ಆ ನಾಯಕಿ ಯಾರು? ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಡಾಲಿಗೆ ಜೋಡಿಯಾಗಿ ಐಶ್ವರ್ಯಾ ರಾಜೇಶ್ (Aishwarya Rajesh) ಎಂಟ್ರಿ ಕೊಟ್ಟಿದ್ದಾರೆ.

ಚೈತ್ರಾ ಆಚಾರ್, ದಿಗಂತ್ ಪಾತ್ರದ ಬಗ್ಗೆ ರಿವೀಲ್ ಆದ ಬೆನ್ನಲ್ಲೇ ಐಶ್ವರ್ಯಾ ರಾಜೇಶ್ ಕೂಡ ಸಿನಿಮಾ ತಂಡ ಸೇರಿಕೊಂಡಿದ್ದಾರೆ. ಮುಖ್ಯ ಪಾತ್ರದಲ್ಲಿ ಡಾಲಿ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಈ ಮೂಲಕ ನಟಿ ಸ್ಯಾಂಡಲ್‌ವುಡ್‌ಗೆ ಲಗ್ಗೆ ಇಟ್ಟಿದ್ದಾರೆ. ಬಾಲನಟಿ, ನಾಯಕಿಯಾಗಿ ತೆಲುಗು, ತಮಿಳಿನಲ್ಲಿ ಗುರುತಿಸಿಕೊಂಡಿರುವ ಐಶ್ವರ್ಯಾಗೆ ‘ಉತ್ತರಕಾಂಡ’ ಚಿತ್ರದಲ್ಲಿ ಮುಖ್ಯ ಪಾತ್ರವೇ ಸಿಕ್ಕಿದೆ.

ಕನ್ನಡ ಸಿನಿಮಾ ರಂಗದ ಹಿರಿಯ ನಟಿ, ಉಮಾಶ್ರೀ (Umashree) ಉತ್ತರಕಾಂಡ ಟೀಮ್ ಸೇರಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಅವರು ಪಂಢರಿಬಾಯಿ (Pandharibai) ಪಾತ್ರವನ್ನು ನಿರ್ವಹಿಸಲಿದ್ದಾರೆ. ಉಮಾಶ್ರೀಯ ಪೋಸ್ಟರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಈ ಸಿನಿಮಾದಲ್ಲಿ ಸಾಕಷ್ಟು ಅನುಭವಿ ಕಲಾವಿದರು ನಟಿಸುತ್ತಿರುವುದು ವಿಶೇಷ.

 

ಈಗಾಗಲೇ ಎಲ್ಲೆಡೆ ಸಂಚಲನ ಮೂಡಿಸಿರುವ ಬಹು ನಿರೀಕ್ಷಿತ ‘ಉತ್ತರಕಾಂಡ’ ಚಿತ್ರದಲ್ಲಿ ಅಭಿನಯಾಸುರ ರಂಗಾಯಣ ರಘು (Rangayana Raghu) ನಟಿಸಲಿದ್ದಾರೆ. ಬಂಡೆ ಕಾಕಾ (Bandekaka) ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Share This Article