‘ಕರ್ನಾಟಕ ಅದ್ಭುತ ರಾಜ್ಯ’: ಕರ್ನಾಟಕದಿಂದ ರಾಜ್ಯಸಭೆಗೆ ಮರು ಆಯ್ಕೆ ಬಗ್ಗೆ ನಿರ್ಮಲಾ ಸೀತಾರಾಮನ್ ಸುಳಿವು..!?

Public TV
1 Min Read

ಬೆಂಗಳೂರು: ಕರ್ನಾಟಕ ಅದ್ಭುತ ರಾಜ್ಯ ಎಂದು ಬಣ್ಣಿಸಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು, ರಾಜ್ಯದಿಂದ ಮರು ಆಯ್ಕೆ ಆಗುವ ಸುಳಿವು ನೀಡಿದ್ದಾರೆ.

ಕರ್ನಾಟಕದಿಂದ ಮತ್ತೆ ರಾಜ್ಯಸಭೆಗೆ ಆಯ್ಕೆಯಾಗುವ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸುಳಿವು ನೀಡಿದ್ದಾರೆ. ರಾಜ್ಯ ಬಿಜೆಪಿ ಕಚೇರಿಯಲ್ಲಿ ಸಂಪಾದಕರ ಜೊತೆಗಿನ ಸಂವಾದ ಕಾರ್ಯಕ್ರಮದಲ್ಲಿ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಭಾಗವಹಿಸಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ್ದಾರೆ. ಇದನ್ನೂ ಓದಿ: ಸರ್ಕಾರ ಒಂದೇ ವರ್ಷದಲ್ಲಿ ನೀರು ಕೊಟ್ಟರೆ ತಲೆ ಬೋಳಿಸಿಕೊಳ್ತೀನಿ ಎಂದಿದ್ದೆ: ಎಚ್‍ಡಿಕೆ

2022 ಜುಲೈಗೆ ನಿಮ್ಮ ರಾಜ್ಯಸಭಾ ಸದಸ್ಯತ್ವದ ಅವಧಿ ಮುಗಿಯುತ್ತದೆ, ಮತ್ತೆ ಸ್ಪರ್ಧೆ ಮಾಡುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ನಿರ್ಮಲಾ ಸೀತಾರಾಮನ್, ನನಗೆ ಗೊತ್ತಿಲ್ಲ, ಎಲ್ಲವನ್ನೂ ಪಾರ್ಟಿಗೆ ಬಿಡುತ್ತೇನೆ. ಪಾರ್ಟಿ ಎಲ್ಲಿಗೆ ಕಳುಹಿಸುತ್ತೋ ಅಲ್ಲಿಗೆ ಹೋಗುತ್ತೇನೆ ಅಂತ ಹೇಳಿದ್ದಾರೆ.

ಕರ್ನಾಟಕದಿಂದ ರಾಜ್ಯಸಭೆಗೆ ಸ್ಪರ್ಧಿಸುವ ಬಗ್ಗೆ ನಿಮ್ಮ ವೈಯುಕ್ತಿಕ ಆಯ್ಕೆ ಏನು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಏಕೆ ಆಗಬಾರದು? ಕರ್ನಾಟಕ ಅದ್ಭುತ ರಾಜ್ಯ. ಕರ್ನಾಟಕದ ಸೇವೆಯನ್ನು ಗೌರವದಿಂದ ಮಾಡುತ್ತೇನೆ‌. ನಾನು ಸಂಸದೆ ಅನ್ನೋ ಕಾರಣಕ್ಕಾಗಿ ಅಲ್ಲ. ಕರ್ನಾಟಕದ ಬಗ್ಗೆ ಅಪಾರ ಅಭಿಮಾನವಿದೆ. ಕರ್ನಾಟಕ ಒಳ್ಳೆಯ ಕಾರ್ಯಗಳ ಮೇಲೆ ನಿಂತಿದೆ ಅಂತೇಳಿ ಮರು ಆಯ್ಕೆಯ ಬಗ್ಗೆ ತಿಳಿಸಿದ್ದಾರೆ. ಇದನ್ನೂ ಓದಿ: ಕನ್ನಡದಲ್ಲಿ ಮಾತಾಡೋಕೆ ಹೇಳಿ, ನಮಗೆ ಏನೂ ಅರ್ಥ ಆಗ್ತಿಲ್ಲ: ಪರಿಷತ್‌ ಕಲಾಪದಲ್ಲಿ ಗಲಾಟೆ

2022, ಜುಲೈಗೆ ನಿರ್ಮಲಾ ಸೀತಾರಾಮನ್‌ ರಾಜ್ಯಸಭೆಯ ಅವಧಿ ಅಂತ್ಯವಾಗಲಿದ್ದು, ಮರು ಆಯ್ಕೆಯ ಬಗ್ಗೆ ಸಾಕಷ್ಟು ಕುತೂಹಲ ಮೂಡಿಸಿದೆ.

Share This Article
Leave a Comment

Leave a Reply

Your email address will not be published. Required fields are marked *