Valmiki Scam | ಇಡಿ ಅಧಿಕಾರಿಗಳ ಮೇಲಿನ ಎಫ್‌ಐಆರ್‌ಗೆ ತಡೆ

Public TV
1 Min Read

ಬೆಂಗಳೂರು: ವಾಲ್ಮೀಕಿ ನಿಗಮ ಹಗರಣ (Valmiki Scam) ಸಂಬಂಧ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳ ವಿರುದ್ಧ ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್‌ಗೆ (FIR) ಹೈಕೋರ್ಟ್ (High Court) ತಡೆ ನೀಡಿದೆ.

ನಾಗೇಂದ್ರ ಹೆಸರು ಹೇಳುವಂತೆ ನನಗೆ ಹಿಂಸೆ ಕೊಡುತಿದ್ದರು ಅಂತ ಇಡಿಯ ಇಬ್ಬರು ಅಧಿಕಾರಿಗಳ ವಿರುದ್ಧ ನಿಗಮದ ಮಾಜಿ ಎಂಡಿ ಕಲ್ಲೇಶ್ ದೂರು ದಾಖಲಿಸಿದ್ದರು. ಎಫ್‌ಐಆರ್ ರದ್ದು ಕೋರಿ ಇಡಿ ಹೈಕೋರ್ಟ್ ಮೆಟ್ಟಿಲೇರಿತ್ತು. ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ ಎಫ್‌ಐಆರ್‌ಗೆ ತಡೆ ನೀಡಿ ಆಗಸ್ಟ್ 21ಕ್ಕೆ ವಿಚಾರಣೆ ಮುಂದೂಡಿದೆ.

 

ಸರ್ಕಾರದ ಪರ ವಾದ ಮಂಡಿಸಿದ ಎಜಿ ಶಶಿಕಿರಣ್ ಶೆಟ್ಟಿ, ಸಿಎಂ, ಡಿಸಿಎಂ ಹೆಸರೇಳಲು ಇಡಿ ಅಧಿಕಾರಿಗಳು ಸಾಕಷ್ಟು ಒತ್ತಡ ಹೇರಿದ್ದಾರೆ. ಇಡಿ ಕಚೇರಿಯ ಸಿಸಿಟಿವಿಯನ್ನು ವಶಕ್ಕೆ ಪಡೆಯಬೇಕು. ಆಗ ಎಲ್ಲವೂ ತಿಳಿಯಲಿದೆ ಎಂದು ವಾದಿಸಿದರು.

ಇದಕ್ಕೆ ಜಡ್ಜ್ ನಾಗಪ್ರಸನ್ನ ಅವರು, ಸಿಸಿಟಿವಿ ಯಾಕೆ ಬೇಕು? ಅಲ್ಲಿ ಕಾಫಿ ಕುಡಿಯಲು ಕರೆದಿದ್ದರಾ? ನೀವು ಹೀಗೆ ಆರೋಪ ಮಾಡಿದ್ರೆ ಯಾವೊಬ್ಬ ಅಧಿಕಾರಿಯೂ ಕೆಲಸ ಮಾಡಲ್ಲ. ರಾಜ್ಯ ಸರ್ಕಾರ ಯಾಕೆ ಎಫ್‌ಐಆರ್ ದಾಖಲು ಮಾಡಿದೆ ಎಂದು ಪ್ರಶ್ನಿಸಿದ್ರು. ಇದನ್ನೂ ಓದಿ: ಬೆಂಗಳೂರು 5 ಭಾಗಗಳಾಗಿ ವಿಭಜನೆ – ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಮಸೂದೆಯಲ್ಲಿ ಏನಿದೆ? ಇಲ್ಲಿದೆ ಕಂಪ್ಲೀಟ್‌ ಮಾಹಿತಿ

ಪ್ರತಿವಾದ ಮಾಡಿದ ಇ.ಡಿ ಪರ ವಕೀಲ ಎಎಸ್‌ಜಿ ಅರವಿಂದ್, ತನಿಖೆಯನ್ನು ಬೇಕಾದರೆ ಪ್ರಶ್ನಿಸಲಿ. ಅದು ಬಿಟ್ಟು ಅಧಿಕಾರಿಗಳನ್ನು ಯಾಕೆ ಟಾರ್ಗೆಟ್ ಮಾಡುತ್ತಾರೆ. ಇಡಿ ತನಿಖೆಯ ಮೇಲೆ ತೊಂದರೆ ಇದ್ದರೆ ಅವರು ಇಸಿಐಆರ್ ದಾಖಲು ಮಾಡಬಹುದಿತ್ತು ಎಂದರು. ವಾಲ್ಮೀಕಿ ಹಗರಣ| ಇಬ್ಬರು ಇಡಿ ಅಧಿಕಾರಿಗಳ ವಿರುದ್ಧವೇ ಎಫ್‌ಐಆರ್‌ ದಾಖಲು- ದೂರಿನಲ್ಲಿ ಏನಿದೆ?

ಈ ಮಧ್ಯೆ ಎಸ್‌ಐಟಿ ತನಿಖೆಗೆ ತಡೆ ನೀಡುವಂತೆ ಸಲ್ಲಿಸಿದ್ದ ಯೂನಿಯನ್ ಬ್ಯಾಂಕ್ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಸಿಬಿಐಗೆ ನೋಟಿಸ್ ನೀಡಿ ಆಗಸ್ಟ್ 7ಕ್ಕೆ ಮುಂದೂಡಿದೆ.

 

Share This Article