Drugs Case: ನನ್ನ ಮೇಲೆ ಬೇಕಂತಲೇ ಟಾರ್ಗೆಟ್ ಮಾಡಿದರು- ಕಣ್ಣೀರಿಟ್ಟ ಸಂಜನಾ ಗಲ್ರಾನಿ

By
2 Min Read

ಸ್ಯಾಂಡಲ್‌ವುಡ್ ನಟಿ ಸಂಜನಾ ಗಲ್ರಾನಿಗೆ (Sanjjanaa Galrani) ಡ್ರಗ್ಸ್ ಕೇಸ್‌ನಲ್ಲಿ (Drugs Case) ಬಿಗ್ ರಿಲೀಫ್ ಸಿಕ್ಕಿದೆ. ನಟಿಯ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ಅನ್ನು ಹೈಕೋರ್ಟ್ ರದ್ದುಗೊಳಿಸಿದೆ. ಈ ಡ್ರಗ್ಸ್ ಪ್ರಕರಣದಲ್ಲಿ ನನ್ನದೇನೂ ತಪ್ಪಿರಲಿಲ್ಲ ಎಂದು ನಟಿ ಸಂಜನಾ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಮೇಲೆ ಕೆಲವರು ಟಾರ್ಗೆಟ್ ಮಾಡಿದ್ದಾರೆ ಎಂದು ನಟಿ ಕಣ್ಣೀರಿಟ್ಟಿದ್ದಾರೆ.

ಈಗ ನಿರಾಳ ಅನ್ನಿಸುತ್ತಿದೆ. ಆದರೂ ಬೇಸರ ಆಗ್ತಿದೆ. ಈ ಪ್ರಕರಣದಲ್ಲಿ ನನ್ನದೇನೂ ತಪ್ಪಿರಲಿಲ್ಲ. ಆದರೂ ಯಾರೂ ಒಬ್ಬರು ನನ್ನ ವೈಯಕ್ತಿಕ ದ್ವೇಷದಿಂದ ಸಿಲುಕುವಂತೆ ಮಾಡಿದರು. ನನ್ನದೇನೂ ತಪ್ಪಿಲ್ಲದೆ ಈ ಪ್ರಕರಣದಲ್ಲಿ ವಿಕ್ವಿಮ್ ಆದೆ ಎಂದಿದ್ದಾರೆ. ಕೆಲವರು ನನ್ನ ಹೆಸರು ಬಳಸಿಕೊಂಡು ಮುಂದಕ್ಕೆ ಹೋಗೋಕೆ ನೋಡಿದರು. ನನ್ನ ಮೇಲೆ ಬೇಕಂತಲೇ ಟಾರ್ಗೆಟ್ ಮಾಡಿದರು. ಬರೀ ಮಾತಲ್ಲಿ ಒಬ್ಬ ನನ್ನ ಹೆಸರು ಹೇಳಿದ ಅದಕ್ಕೆ ಅಲ್ವೇ ಇವತ್ತು ಈ ಕೇಸ್ ರದ್ದು ಆಗಿದ್ದು ಎಂದು ಸಂಜನಾ ಗಲ್ರಾನಿ ಮಾತನಾಡಿದ್ದಾರೆ.

ನಾನಂತೂ ಈ ಪ್ರಕರಣ ಆದ್ಮೇಲೆ ಸಾಕಷ್ಟು ನೋವು ಅನುಭವಿಸಿದೆ. ಅದು ಯಾವತ್ತೂ ಹೋಗಲ್ಲ. ದೇವರ ದಯೆ ಒಳ್ಳೆಯ ಕುಟುಂಬ ಕೊಟ್ಟಿದ್ದಾರೆ. ಕೃಷ್ಣನಂತ ಮಗನ ಕೊಟ್ಟ ಈ ಪ್ರಕರಣ ಆದ್ಮೇಲೆ ನನಗೆ ಸಿನಿಮಾ ಅವಕಾಶವೂ ಇರಲಿಲ್ಲ. ಸಂಭಾವನೆ ವಿಚಾರ ಮಾತನಾಡಿದ್ರೆ ಡ್ರಗ್ಸ್ ಕೇಸ್‌ನಲ್ಲಿ ಇದ್ರಿ ನೋವು ಅಂತ ಮಾತನಾಡ್ತಾರೆ ಎಂದು ಸಂಜನಾ ಭಾವುಕರಾದರು. ಇದನ್ನೂ ಓದಿ:‘ಇಂಡಿಯನ್ 2’ ಬಜೆಟ್ ಮೀರಲು ಕಾರಣ ತಿಳಿಸಿದ ಕಮಲ್ ಹಾಸನ್

ನನ್ನನ್ನು ಬರೀ ಟ್ರೋಲ್ ಮಾಡ್ತಿದ್ರು. ಕೆಟ್ಟದಾಗಿ ನಿಂದಿಸುತ್ತಿದ್ದರು. ಈಗ ಡ್ರಗ್ಸ್ ಪ್ರಕರಣದ ಬಗ್ಗೆ ಸತ್ಯ ಗೊತ್ತಾಗಿದೆ. ನನಗೆ ಈ ಬಗ್ಗೆ ನೆನಪು ಮಾಡ್ಕೊಂಡು ಮಾತಾಡೋಕೆ ಇಷ್ಟ ಇಲ್ಲ. ತಾಳ್ಮೆಯಿಂದ ಕಾದಿದ್ದಕ್ಕೆ ನ್ಯಾಯ ಸಿಕ್ಕಿದೆ. ನನ್ನನ್ನು ಟ್ರೋಲ್ ಮಾಡಬೇಡಿ. ಒಂದು ಮೆಸೇಜ್, ಟ್ರೋಲ್‌ನಿಂದ ಏನಾಗುತ್ತೆ ಅನ್ನೋದಕ್ಕೆ ರೇಣುಕಾಸ್ವಾಮಿ ಕೊಲೆ ಪ್ರಕರಣವೇ ಸಾಕ್ಷಿ ಎಂದು ಸಂಜನಾ ಮಾತನಾಡಿದ್ದಾರೆ.

ನನ್ನ ಕಷ್ಟದ ಸಮಯದಲ್ಲಿ ಯಾರೂ ಬರಲಿಲ್ಲ. ಈಗ ನೆನಪಿಸಿಕೊಂಡರೂ ನೋವಾಗುತ್ತೆ. ಅಂದು ನಮ್ಮ ಮನೆಯಲ್ಲಿ ಒಂದು ಬಿಯರ್ ಬಾಟಲ್ ಕೂಡ ಸಿಕ್ಕಿರಲಿಲ್ಲ. ಸಿಗರೇಟು ಸಿಕ್ಕಿರಲಿಲ್ಲ. ಆದರೆ ಅದರಲ್ಲಿ ನನ್ನ ವಿಕ್ಟಿಮ್ ಮಾಡಲಾಯ್ತು ಎಂದು ಕಣ್ಣೀರು ಸುರಿಸಿದ ಸಂಜನಾ. ನನ್ನನ್ನು ಜನ ಎಷ್ಟು ಟ್ರೋಲ್ ಮಾಡಿದ್ರು ಅಂದರೆ ಮುಸ್ಲಿಂನ ಮದುವೆ ಆಗಿದ್ದಕ್ಕೂ ಟ್ರೋಲ್ ಮಾಡಿದರು ಎಂದು ಸಂಜನಾ ಖಡಕ್ ಆಗಿ ಮಾತನಾಡಿದ್ದಾರೆ.

ಅಂದಹಾಗೆ, `ಗಂಡ ಹೆಂಡತಿ’ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಬಹುಭಾಷಾ ನಟಿಯಾಗಿ 50ಕ್ಕೂ ಸಿನಿಮಾದಲ್ಲಿ ಸಂಜನಾ ನಟಿಸಿದ್ದಾರೆ.

Share This Article