ಸರ್ಕಾರ ರೈತರಿಗೆ 7 ಗಂಟೆ 3 ಫೇಸ್ ವಿದ್ಯುತ್ ಕೊಡಬೇಕು: ಜಿಟಿ ದೇವೇಗೌಡ

By
1 Min Read

ಬೆಂಗಳೂರು: ಸರ್ಕಾರ ರೈತರಿಗೆ 5 ಗಂಟೆ ಬದಲಾಗಿ 7 ಗಂಟೆ ವಿದ್ಯುತ್ (Electricity) ಕೊಡಬೇಕು ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿಟಿ ದೇವೇಗೌಡ (GT Devegowda) ಸರ್ಕಾರವನ್ನ ಆಗ್ರಹಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು,ರಾಜ್ಯದಲ್ಲಿ ಕತ್ತಲೆ ಭಾಗ್ಯ ಶುರುವಾಗಿದೆ.ಕರೆಂಟ್ ಕೊಡಿ ಅಂದ್ರೆ ಬಿಜೆಪಿ (BJP) ಮೇಲೆ ಕಾಂಗ್ರೆಸ್ (Congress) ಆರೋಪ ಮಾಡ್ತಿದೆ.ಕೇವಲ ಗ್ಯಾರಂಟಿಗೆ ಹಣ ಕೊಡೋದು ಅಲ್ಲ. ಕರೆಂಟ್‌ಗೂ ಹಣ ಇಡಬೇಕು ಎಂದು ಕಿಡಿಕಾರಿದರು.  ಇದನ್ನೂ ಓದಿ: ಮೈತ್ರಿ ಮಾತುಕತೆಗೆ ತಮ್ಮನ್ನು ಕರೆದುಕೊಂಡು ಹೋಗಿಲ್ಲ ಅನ್ನೋದು ಸಿಎಂ ಇಬ್ರಾಹಿಂ ಸಿಟ್ಟು: ಜಿಟಿ ದೇವೇಗೌಡ

 

ಬಿಜೆಪಿ, ಜೆಡಿಎಸ್ ಸರ್ಕಾರ ಇದ್ದಾಗ ರೈತರಿಗೆ 7 ಗಂಟೆ 3 ಫೇಸ್ ಕರೆಂಟ್ ನೀಡುತ್ತಿದ್ದೆವು. ಈಗ ಸರ್ಕಾರ ಕರೆಂಟ್ ಕಟ್ ಮಾಡಿದೆ. ಕಾಂಗ್ರೆಸ್ ಸರ್ಕಾರ ಕೂಡಾ 7 ಗಂಟೆ ವಿದ್ಯುತ್ ಕೊಡಬೇಕು ಅಂತ ಆಗ್ರಹಿಸಿದರು.

ರಾಜ್ಯ ಸರಕಾರ 5 ಗಂಟೆ ವಿದ್ಯುತ್ ಕೊಡ್ತೀವಿ ಅಂತ ಸರ್ಕಾರ ಹೇಳಿದೆ. ಕುಮಾರಸ್ವಾಮಿ, ಬಿಜೆಪಿ ಸರ್ಕಾರ 7 ಗಂಟೆ ವಿದ್ಯುತ್ ಕೊಟ್ಟಿತ್ತು.ಆದರೆ ಈ ಸರ್ಕಾರ ಕರೆಂಟ್ ಕೊಡ್ತಿಲ್ಲ.ಬರ ಇದೆ.ಈ‌ ಸಮಯದಲ್ಲಿ ಕರೆಂಟ್ ಇಲ್ಲದೆ ಹೋದರೆ ಬೆಳೆ ಬೆಳೆಯಲು ಆಗುವುದಿಲ್ಲ. ಸಿಎಂ ಅವರಿಗೆ ಕೈ ಮುಗಿದು ಪ್ರಾರ್ಥನೆ ಮಾಡುತ್ತೇನೆ.  7 ಗಂಟೆ ವಿದ್ಯುತ್ ರೈತರಿಗೆ ಕೊಡಿ. 5 ಗಂಟೆ ಬದಲಿಗೆ 7 ಗಂಟೆ ಕರೆಂಟ್ ಕೊಡಲೇಬೇಕು ಎಂದು ಒತ್ತಾಯ ಮಾಡಿದರು.

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್