ವಿಜಯಪುರ: ಮುಧೋಳ (Mudhol) ರೈತರ ಆಕ್ರೋಶಕ್ಕೆ ಹಾಳಾದ ಕಬ್ಬು ಬೆಳೆಯ ನಷ್ಟವನ್ನು ರಾಜ್ಯ ಸರ್ಕಾರವೇ ಭರಿಸಬೇಕು ಎಂದು ರೈತ ಹೋರಾಟಗಾರ ಚೂನಪ್ಪ ಪೂಜೇರಿ (Chunappa Pujari) ತಿಳಿಸಿದ್ದಾರೆ.
ಮುಧೋಳದಲ್ಲಿ ರೈತರ ಹೋರಾಟದ ಬಗ್ಗೆ ಮಾತನಾಡಿದ ಅವರು, ಶುಕ್ರವಾರ (ನ.13) ನಡೆದ ಗಲಾಟೆಯಿಂದಾಗಿ ರೈತರಿಗೆ ಹಾನಿಯಾಗಿದೆ. ಹಾಳಾದ ಕಬ್ಬು ಬೆಳೆಯ ನಷ್ಟವನ್ನು ರಾಜ್ಯ ಸರ್ಕಾರವೇ ಭರಿಸಬೇಕು. ರೈತರು ಕಾನೂನು ಕೈಗೆ ತೆಗೊಳ್ಳಬಾರದು. ಶಾಂತಿಯುತವಾಗಿ ಹೋರಾಟ ಮಾಡಬೇಕು. ಹಿಂಸಾಚಾರದ ಹೋರಾಟದಿಂದ ರೈತರಿಗೆ ಹಾನಿಯಾಗುತ್ತದೆ ಎಂದು ಮನವಿ ಮಾಡಿಕೊಂಡಿದ್ದಾರೆ.ಇದನ್ನೂ ಓದಿ: Bypolls: ಜಮ್ಮು & ಕಾಶ್ಮೀರದ ನಾಗ್ರೋಟಾದಲ್ಲಿ ಬಿಜೆಪಿ ಗೆಲುವು; ಒಡಿಶಾದ ನುವಾಪಾದದಲ್ಲಿ ಮುನ್ನಡೆ
ಗುರ್ಲಾಪುರದಲ್ಲಿ ನಾವು ಶಾಂತವಾಗಿ ಹೋರಾಟ ಮಾಡಿದ್ದೇವೆ. ಲಕ್ಷಾಂತರ ರೈತರು ಸೇರಿದರೂ ಕೂಡ ಒಂದೇ ಒಂದು ಗಲಾಟೆ ಮಾಡಿಲ್ಲ. ಆದರೆ ಮುಧೋಳ ತಾಲೂಕಿನಲ್ಲಿ ನಡೆದ ಗಲಾಟೆ ಸರಿಯಲ್ಲ. ಕೃತ್ಯದ ಹಿಂದೆ ಯಾರಿದ್ದಾರೆ ಗೊತ್ತಿಲ್ಲ, ಆದರೆ ರೈತರಿಗೆ ಹಾನಿಯಾಗಿದೆ. ನಾವೇ ಬೆಳೆದ ಕಬ್ಬಿಗೆ ಬೆಂಕಿಯಿಟ್ಟರೆ ನಮಗೆ ನೋವಾಗುತ್ತದೆ. ಸಾಲ ಮಾಡಿ ತೆಗೆದುಕೊಂಡಿರುವ ಟ್ರ‍್ಯಾಕ್ಟ್ರ್‌ಗೆ ಬೆಂಕಿ ಹಚ್ಚಿದರೆ ಅದಕ್ಕೆ ಯಾರು ಹೊಣೆ ಎಂದು ಆಗ್ರಹಿಸಿದ್ದಾರೆ.
ಕೆಲವು ಸಕ್ಕರೆ ಕಾರ್ಖಾನೆಗಳು 3,300 ಕೊಡಲು ಹಿಂದೇಟು ಹಾಕುತ್ತವೆ. ಸರ್ಕಾರ ಇದನ್ನು ಬಗೆಹರಿಸಬೇಕು. ರೈತರ ಹೋರಾಟ ಶಾಂತಿಯುತವಾಗಿರಲಿ. ಕಬ್ಬು ಬೆಳೆಗಾರರ ಸಮಸ್ಯೆಗೆ ಸಕ್ಕರೆ ಇಲಾಖೆ ಅಧಿಕಾರಿಗಳು ಕಾರಣ ಎಂದು ಆಕ್ರೋಶವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ: ಕಾಂಗ್ರೆಸ್ ಮತ್ತೆ ನೆಲಕಚ್ಚಿದೆ, ಮೋದಿ ಕೆಲಸ ನೋಡಿ ಜನ NDA ಗೆಲ್ಲಿಸಿದ್ದಾರೆ: ಬಿಎಸ್‌ವೈ
