ಕಾಲ್ತುಳಿತಕ್ಕೆ 11 ಮಂದಿ ಬಲಿ ಕೇಸ್ – ನ್ಯಾಯಾಂಗ, ಸಿಐಡಿ ತನಿಖೆಗೆ ಸರ್ಕಾರ ಆದೇಶ

Public TV
1 Min Read

ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸಂಭವಿಸಿದ ಕಾಲ್ತುಳಿತ (Bengaluru Stampede) ಪ್ರಕರಣವನ್ನು ನ್ಯಾಯಾಂಗ ಮತ್ತು ಸಿಐಡಿ ತನಿಖೆಗೆ ವಹಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ತಿಳಿಸಿದರು.

ಕಾಲ್ತುಳಿತ ಪ್ರಕರಣ ಸಂಬಂಧ ತುರ್ತು ಸುದ್ದಿಗೋಷ್ಠಿ ನಡೆಸಿದ ಸಿಎಂ, ಕೆಲವು ಮಾಹಿತಿ ಸಿಕ್ಕಿದ ಮೇಲೆ ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ಮಾಡಿದ್ದೇವೆ. ತನಿಖೆಯನ್ನ ಸಿಐಡಿಗೆ ವಹಿಸಲಾಗಿದೆ. 2 ಎಫ್‌ಐಆರ್ ಅನ್ನ ಸಿಐಡಿಗೆ ವಹಿಸಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಬೆಳಗ್ಗಿನ ಜಾವ 4 ಗಂಟೆ ವರೆಗೆ ಕೆಲಸ ಮಾಡಿದ್ದ ಪೊಲೀಸರಿಗೆ ಮತ್ತೆ ಬಂದೋಬಸ್ತ್‌ ನೀಡಲು ಆಗ್ತಿತ್ತಾ? – ಸರ್ಕಾರಕ್ಕೆ ಹೈಕೋರ್ಟ್‌ ಚಾಟಿ

ಎರಡು ರೀತಿಯಲ್ಲಿ ತನಿಖೆಗೆ ಸರ್ಕಾರ ನಿರ್ಧರಿಸಿದೆ. ನ್ಯಾ.ಮೈಕಲ್ ಡಿ ಕುನ್ಹಾ ನೇತೃತ್ವದಲ್ಲಿ ಏಕ ಸದಸ್ಯ ಆಯೋಗದ ತನಿಖೆ ಹಾಗೂ ಸಿಐಡಿ ನೇತೃತ್ವದಲ್ಲಿ ತನಿಖೆಗೆ ನಿರ್ಧರಿಸಲಾಗಿದೆ ಎಂದರು.

ಯಾರನ್ನ ಅರೆಸ್ಟ್ ಮಾಡಬೇಕು ಅಂತ ಹೇಳಿದ್ದೇವೆ. ಪ್ರತಿನಿಧಿಗಳನ್ನ ಬಂಧನ ಮಾಡಿದ್ದೇವೆ. ಇಂಟಲಿಜೆನ್ಸ್ ಫೇಲ್ ಆಗಿರೋ ಬಗ್ಗೆ ಚರ್ಚೆ ಆಗಿದೆ. ವರದಿ ಬಂದ ಮೇಲೆ ಕ್ರಮದ ಬಗ್ಗೆ ಕ್ರಮ ಎಂದು ಸಿಎಂ ತಿಳಿಸಿದರು. ಇದನ್ನೂ ಓದಿ: Chinnaswamy Stampede Case – ಆರ್‌ಸಿಬಿ ಫ್ರಾಂಚೈಸಿ, ಕೆಎಸ್‌ಸಿಎ ವಿರುದ್ಧ FIR

Share This Article