ವಿಜಯೇಂದ್ರಗೆ ಬೆಂಗಾವಲು ವಾಹನ, ಪೊಲೀಸ್‌ ಭದ್ರತೆ ಕಲ್ಪಿಸಿದ ಸರ್ಕಾರ

Public TV
1 Min Read

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷರಾಗಿ (BJP President) ಆಯ್ಕೆಯಾಗಿರುವ ಶಿಕಾರಿಪುರದ ಶಾಸಕ, ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರಗೆ (BY Vijayendra) ರಾಜ್ಯ ಸರ್ಕಾರ ಬೆಂಗಾವಲು ವಾಹನ ಮತ್ತು ಪೊಲೀಸ್ ಭದ್ರತೆ (Police Security) ಒದಗಿಸಿದೆ.

ಭಾನುವಾರದಿಂದ ಮೂವರು ಪೊಲೀಸ್ ಸಿಬ್ಬಂದಿ ಇರುವ ಬೆಂಗಾವಲು ವಾಹನ ಸೌಲಭ್ಯವನ್ನು ಸರ್ಕಾರ ಕಲ್ಪಿಸಿದೆ. ಪದಗ್ರಹಣ ಬಳಿಕ ಅಧಿಕೃತವಾಗಿ ಸಿಬ್ಬಂದಿ ಸಹಿತ ಬೆಂಗಾವಲು ವಾಹನವನ್ನು ಸರ್ಕಾರ ಒದಗಿಸಲಿದೆ. ಬುಧವಾರ ಪಕ್ಷದ ಕಚೇರಿಯಲ್ಲಿ ವಿಜಯೇಂದ್ರ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ.  ಇದನ್ನೂ ಓದಿ: ನಿನ್ನ ನೇತೃತ್ವದಲ್ಲಿ ಪಕ್ಷಕ್ಕೆ ಶಕ್ತಿ ತುಂಬೋಣ – ಬೊಮ್ಮಾಯಿ ಆಶೀರ್ವಾದ ಪಡೆದ ವಿಜಯೇಂದ್ರ

ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಸ್ವಾಮೀಜಿಗಳ ಆಶೀರ್ವಾದ ಪಡೆದಿದ್ದ ವಿಜಯೇಂದ್ರ ಇಂದು ಬೆಳಗ್ಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಬಳಿ ಹೋಗಿ ಆಶೀರ್ವಾದ ಪಡೆದರು. ನಂತರ ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರ ನಿವಾಸಕ್ಕೆ ತೆರಳಿ ಆಶೀರ್ವಾದ ಪಡೆದರು.

Share This Article