ದೇವಸ್ಥಾನಗಳ ಕಾಮಗಾರಿಗಳಿಗೆ ಬ್ರೇಕ್‌ – ವಿರೋಧ ವ್ಯಕ್ತವಾಗುತ್ತಿದ್ದಂತೆ ಸುತ್ತೋಲೆ ವಾಪಸ್‌

Public TV
1 Min Read

ಬೆಂಗಳೂರು: ದೇವಸ್ಥಾನಗಳ (Temple) ಅಭಿವೃದ್ಧಿಗೆ ಬಿಡುಗಡೆ ಮಾಡಿದ ಅನುದಾನಕ್ಕೆ ಬ್ರೇಕ್‌ ಹಾಕಿದ್ದ ರಾಜ್ಯ ಸರ್ಕಾರ (Karnataka Government) ಈಗ ಸುತ್ತೋಲೆಯನ್ನು ಹಿಂದಕ್ಕೆ ಪಡೆದಿದೆ.

ಈ ಸಂಬಂಧ ಪಬ್ಲಿಕ್ ಟಿವಿಗೆ ಹೇಳಿಕೆ ನೀಡಿದ ಮುಜರಾಯಿ ಇಲಾಖೆ ಆಯುಕ್ತ ಬಸವರಾಜೇಂದ್ರ, ಸಚಿವರ ಗಮನಕ್ಕೆ ಬಾರದೇ ಈ ಆದೇಶ ಪ್ರಕಟಿಸಲಾಗಿತ್ತು. ಈಗ ಆದೇಶವನ್ನು ಹಿಂದಕ್ಕೆ ಪಡೆಯುತ್ತಿದ್ದೇವೆ ಎಂದು ತಿಳಿಸಿದರು.

ಜಿಲ್ಲೆಯಾದ್ಯಾಂತ ಮುಜರಾಯಿ ವ್ಯಾಪ್ತಿಯ ಕಾಮಗಾರಿಗಳು ನಡೆಯುತ್ತಿತ್ತು. ಈ ಕಾಮಗಾರಿ ಮಾಡಲು 50% ಅನುದಾನವನ್ನು ಬಿಡುಗಡೆ ಮಾಡಿ ತಡೆ ಹಿಡಿಯಲಾಗಿತ್ತು. ನಮ್ಮ ವ್ಯಾಪ್ತಿಯಲ್ಲಿ ನಾವು ಆದೇಶ ಹೊರಡಿಸಿದ್ದೆವು. ಈಗ ಮತ್ತೊಂದು ಆದೇಶವನ್ನು ಪ್ರಕಟಿಸಿದ್ದೇವೆ ಎಂದು ತಿಳಿಸಿದರು.  ಇದನ್ನೂ ಓದಿ: ಬಿಜೆಪಿ ಅವಧಿಯಲ್ಲಿ ದೇಗುಲಗಳಿಗೆ ರಿಲೀಸ್ ಮಾಡಿದ್ದ ಅನುದಾನಕ್ಕೆ ಬ್ರೇಕ್

 

ಆಗಸ್ಟ್ 14 ರಂದು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಆದೇಶ ಹೊರಡಿಸಿದ್ದ ಮುಜರಾಯಿ ಇಲಾಖೆ (Muzrai Department) ದೇವಾಲಯದ ಅಭಿವೃದ್ಧಿ ಮತ್ತು ಜೀರ್ಣೋದ್ಧಾರಕ್ಕೆ ಮಂಜೂರಾದ ಹಣದಲ್ಲಿ ಕೈಗೊಂಡಿರುವ ಕಾಮಗಾರಿಗಳನ್ನು ನಡೆಸದಂತೆ ಉಲ್ಲೇಖಿಸಿತ್ತು.

ಈ ಹಿಂದಿನ ಸುತ್ತೋಲೆಯಲ್ಲಿ  ಏನಿತ್ತು?
1. ಸರ್ಕಾರದಿಂದ ದೇವಾಲಯಗಳ ಅಭಿವೃದ್ಧಿ ಜೀರ್ಣೋದ್ಧಾರಕ್ಕಾಗಿ ಸಾಮಾನ್ಯ ಯೋಜನೆಯಡಿ ಅನುದಾನ ಮಂಜೂರಾಗಿದ್ದು ಕಾಮಗಾರಿಗಳನ್ನ ಪ್ರಾರಂಭಿಸಿದೆ ಇರುವ ಸಂಸ್ಥೆಗಳಿಗೆ ಮುಂದಿನ ನಿರ್ದೇಶನದ ವರೆಗೂ ಹಣ ಬಿಡುಗಡೆ ಮಾಡಬಾರದು.

2.2022-23ನೇ ಸಾಲಿನಲ್ಲಿ ಸಾಮಾನ್ಯ ಯೋಜನೆ ಅಡಿ ಮಂಜೂರಾಗಿರುವ ಅನುದಾನದ ಪೈಕಿ ಈಗಾಗಲೇ 50% ರಷ್ಟು ಹಣ ಬಿಡುಗಡೆಯಾಗಿ ಆಡಳಿತಾತ್ಮಕ ಮಂಜೂರಾತಿ ನೀಡಿದ್ದು ಹಣ ಬಿಡುಗಡೆ ಮಾಡದಿದ್ದಲ್ಲಿ ಸದರಿ ಕಾಮಗಾರಿಗೆ ಹಣವನ್ನ ಬಿಡುಗಡೆ ಮಾಡಬಾರದು ಹಾಗೂ ಪ್ರಾರಂಭಿಸಿದೇ ಇದ್ದಲ್ಲಿ ಕಾಮಗಾರಿಯನ್ನು ಪ್ರಾರಂಭಿಸತಕ್ಕದ್ದಲ್ಲ.

3. ಆಡಳಿತಾತ್ಮಕ ಮಂಜೂರಾತಿಗೆ ಪ್ರಸ್ತಾವನೆ ಸ್ವೀಕೃತವಾಗಿದ್ದಲ್ಲಿ ಆಡಳಿತಾತ್ಮಕ ಮಂಜೂರಾತಿಯನ್ನು ಮುಂದಿನ ನಿರ್ದೇಶನವರೆಗೂ ತಡೆಹಿಡಿಯುವುದು.

 

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್