ಬಿಜೆಪಿ ವಿರುದ್ಧ ಹಗರಣ ಅಸ್ತ್ರ – ಮೊದಲ ಹಂತದಲ್ಲಿ 7,223.64 ಕೋಟಿ ಅಕ್ರಮದ ತನಿಖೆ ಹೊಣೆ ಎಸ್‌ಐಟಿಗೆ?

Public TV
1 Min Read

– ಕೋವಿಡ್ ಹಗರಣ ತನಿಖೆಗೆ ಎಸ್‌ಐಟಿ ರಚನೆಗೆ ನಿರ್ಧಾರ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ಮೇಲೆ ಮುಡಾಸ್ತ್ರ ಪ್ರಯೋಗಿಸಿದ್ದ ಬಿಜೆಪಿ ವಿರುದ್ಧ ಕಾಂಗ್ರೆಸ್ ಸಮರ ಸಾರಿದೆ. ಬಿಜೆಪಿ ಅವಧಿಯಲ್ಲಿನ ಅಕ್ರಮ ಆರೋಪಗಳ ಬಗ್ಗೆ ಕಾಂಗ್ರೆಸ್ ಸರ್ಕಾರ ಬ್ರಹ್ಮಾಸ್ತ್ರ ಪ್ರಯೋಗಿಸ್ತಿದೆ.

ಕೋವಿಡ್ ಹಗರಣದ (Covid Scam) ತನಿಖೆಗೆ ಎಸ್‌ಐಟಿ ರಚಿಸಲು ಕ್ಯಾಬಿನೆಟ್ (Cabinet Meet) ತೀರ್ಮಾನಿಸಿದೆ. ಈ ಮೂಲಕ 7,223.64 ಕೋಟಿ ಅಕ್ರಮ ಆರೋಪದ ತನಿಖೆಗೆ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಇದು ಮತ್ತೊಂದು ಸುತ್ತಿನ ರಾಜಕೀಯ ಸಂಘರ್ಷಕ್ಕೆ ಮುನ್ನುಡಿ ಬರೆದಿದೆ. ಇದನ್ನೂ ಓದಿ: 26 ವರ್ಷಗಳ ಬಳಿಕ ಕೋಡಿ ಬಿದ್ದ ಹಿರೇಮಲ್ಲನಹೊಳೆ ಕೆರೆ – 30ಕ್ಕೂ ಹೆಚ್ಚು ಮನೆಗಳು ಜಲಾವೃತ

ಕೋವಿಡ್ ಹಗರಣದ ತನಿಖೆ ನಡೆಸಿದ್ದ ಕುನ್ಹಾ ಆಯೋಗದ ಮಧ್ಯಂತರ ವರದಿಯ ಮೇಲೆ ಕ್ರಮ ಕೈಗೊಳ್ಳಲು ಕ್ಯಾಬಿನೆಟ್ ಒಪ್ಪಿಗೆ ನೀಡಿದೆ. ಈ ಮೂಲಕ ಮುಡಾ ಹಗರಣ ಪ್ರಸ್ತಾಪ ಮಾಡುತ್ತಿರೋ ಬಿಜೆಪಿಗೆ ಕೋವಿಡ್ ಹಗರಣದ ಟಕ್ಕರ್ ಕೊಡುತ್ತಾ ಸರ್ಕಾರ ಎಂಬುದನ್ನು ಕಾದುನೋಡಬೇಕಿದೆ. ಇದನ್ನೂ ಓದಿ: ಚಿಕ್ಕಬಳ್ಳಾಪುರ ಹೂ ಬೆಳೆಗಾರರಿಗೆ ಬಂಪರ್ – ಇತಿಹಾಸದಲ್ಲೇ ಮೊದಲ ಬಾರಿಗೆ 400ರ ಗಡಿ ದಾಟಿದ ಗುಲಾಬಿ

ಸಂಪುಟದಲ್ಲಿ ಚರ್ಚೆ ಆಗಿದ್ದೇನು?
* ಜಸ್ಟೀಸ್ ಕುನ್ನಾ ಆಯೋಗದ ವರದಿ ಜಾರಿ ಆಗಲೇಬೇಕು
* ವರದಿ ಪ್ರಕಾರ 7223.64 ಕೋಟಿಯ ಅಕ್ರಮ ನಡೆದಿದೆ
* 500 ಕೋಟಿಯನ್ನ ಕಂಪನಿಗಳಿಂದ ವಸೂಲಿ ಮಾಡಬೇಕು
* ಅಕ್ರಮದ ಪಾಲುದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ತೀರ್ಮಾನ
* ಉಪ್ಪು ತಿಂದವರು ನೀರು ಕುಡಿಯುತ್ತಾರೆ.. ಅನುಭವಿಸಲಿ
* ಮಧ್ಯಂತರ ವರದಿ ಶಿಫಾರಸು ಅನ್ವಯ ಎಸ್‌ಐಟಿ ತನಿಖೆ
* ಕೋವಿಡ್ ಅಕ್ರಮದ ತನಿಖೆ ನಡೆಸಲು ಎಸ್‌ಐಟಿ ರಚನೆ
* ಸಂಪುಟ ಉಪಸಮಿತಿ ಮೂಲಕವೂ ತನಿಖೆ, ವಿಚಾರಣೆ

Share This Article